ಶಾಸಕ ಬಸನಗೌಡರಿಗೆ ಶ್ರೀಕೃಷ್ಣಮಠದಿಂದಗೌರವ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 13:
ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಅಖಿಲ ಭಾರತ ಮಾಧ್ವ ಮಹಾಮಂಡಳ ವಿದ್ಯಾರ್ಥಿ ನಿಲಯಕ್ಕೆ ತಮ್ಮ ಶಾಸಕ ನಿಧಿಯಿಂದ ರೂ.25 ಲಕ್ಷ ಮಂಜೂರಿ ಮಾಡಿದ್ದನ್ನು ಪರಿಗಣಿಸಿ ನಗರದ ಶ್ರೀಕೃಷ್ಣ-ವಾದಿರಾಜ ಮಠದಿಂದ ಶೇಷವಸ್ತ್ರ ಫಲ ನೀಡಿ ಗೌರವಿಸಲಾಯಿತು.
ಶ್ರೀ ಮಠದ ಗೌರವಾಧ್ಯಕ್ಷ ಗೋಪಾಲ ನಾಯಕ ಮಾತನಾಡಿ, ಕಳೆದ ನಾಲ್ಕು ದಶಕಗಳಿಂದ ಬಸನಗೌಡರು ವಿದ್ಯಾರ್ಥಿ ನಿಲಯ ಮತ್ತು ಶ್ರೀಕೃಷ್ಣ ಮಠಕ್ಕೆ ಅನುದಾನ ನೀಡುತ್ತ ಬಂದಿದ್ದಾರೆ. ಮಠದ ಕಟ್ಟಡಕ್ಕೂ ಅವರು ರೂ.10 ಲಕ್ಷ ದೇಣಿಗೆ ಕೊಟ್ಟಿದ್ದರು. ಕಾಲಕಾಲಕ್ಕೆ ಅಭಿವೃದ್ಧಿಗೂ ಸಹಕರಿಸಿದ್ದಾರೆಂದು ವಿವರಿಸಿದರು.
ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ನೂತನ ಕಟ್ಟಡ ನಿರ್ಮಾಣ ಕುರಿತು ವಿವರಣೆ ನೀಡಿ ಒಟ್ಟು ರೂ.7 ಕೋಟಿ ವೆಚ್ಚದಲ್ಲಿ ಮೂರು ಮಹಡಿ ನಿರ್ಮಾಣ ಮಾಡಲಾಗುವದೆಂದು ಹೇಳಿದರು.
ಕಟ್ಟಡ ನಿರ್ಮಾಣಕ್ಕೆ ಇನ್ನಷ್ಟು ಧನ ಸಹಾಯ ಮಾಡುವುದಾಗಿ ಬಸನಗೌಡರು ಭರವಸೆ ನೀಡಿದರು.
ಮಠದ ಸದಸ್ಯ ಮತ್ತು ಮಹಾಲಕ್ಷ್ಮಿ ಬ್ಯಾಂಕ್ ಉಪಾಧ್ಯಕ್ಷ ವಿಕಾಸ ಪದಕಿ ಹಾಗೂ ಬ್ಯಾಂಕ್ ನಿರ್ದೇಶಕ ವಿಜಯ ಜೋಶಿ ಈ ಸಮಯದಲ್ಲಿ ಉಪಸ್ಥಿತರಿದ್ದರು.

Share this