ಶಾಸಕ ಯತ್ನಾಳ ಜನ್ಮದಿನ: ಬಡ ವಿದ್ಯಾರ್ಥಿಗೆ ರೂ.50 ಸಾವಿರ ನೆರವು

ಸಪ್ತ ಸಾಗರ ವಾರ್ತೆ ವಿಜಯಪುರ, ಡಿ. 15:
ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಜನ್ಮ ದಿನದ ಅಂಗವಾಗಿ ಶನಿವಾರ ನಗರದ ಆರಾಧ್ಯದೈವ ಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬೆಂಗಳೂರಿನ ಆರ್.ವಿ.ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಎಂಜನಿಯರಿಂಗ್ ವಿದ್ಯಾರ್ಥಿಗೆ ರೂ. 50,000 ಆರ್ಥಿಕ ನೆರವು ನೀಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಯತ್ನಾಳ ಹುಟ್ಟು ಹಬ್ಬ ಆಚರಿಸಲಾಯಿತು. ಬೆಂಗಳೂರಿನ ಆರ್ ವಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ತಂದೆ ಇಲ್ಲದ ಬಡ ಯುವಕ ಗಿರೀಶ್ ಗೌಡರ ಎಂಬಾತನ ಕಾಲೇಜು ಬ್ಯಾಂಕ್ ಖಾತೆಗೆ ಮಹಾನಗರ ಪಾಲಿಕೆ ವಾರ್ಡ್ ನಂ.22 ಸದಸ್ಯ ಪ್ರೇಮಾನಂದ ಬಿರಾದಾರ ಅವರು ವೈಯಕ್ತಿಕವಾಗಿ ರೂ.50 ಸಾವಿರ ಸಂದಾಯ ಮಾಡುವ ಮೂಲಕ ಆರ್ಥಿಕ ಸಹಾಯ ಮಾಡಿ ಬಡ ವಿದ್ಯಾರ್ಥಿ ವ್ಯಾಸಂಗಕ್ಕೆ ನೆರವಾಗಿದ್ದಾರೆ.
ಸಿದ್ದೇಶ್ವರ ದೇವಸ್ಥಾನದ ಪೂಜೆಯಲ್ಲಿ ಮಹಾನಗರ ಪಾಲಿಕೆ ಮೇಯರ್ ಎಂ.ಎಸ್.ಕರಡಿ, ಮುಖಂಡರಾದ ಚಂದ್ರು ಚೌಧರಿ, ಬಸವರಾಜ ಬಿರಾದಾರ, ಶ್ರೀಶೈಲ ಕಣಮುಚನಾಳ, ಪ್ರಶಾಂತಗೌಡ ಬಿರಾದಾರ, ರಾಜಕುಮಾರ ಬಿರಾದಾರ ಮತ್ತಿತರರು ಇದ್ದರು.

Share this