ಸಪ್ತಸಾಗರ ವಾರ್ತೆ, ವಿಜಯಪುರ, ಏ. 21:
ನಗರದ ಮೋಹನ ಕಟ್ಟಿಮನಿ ಅವರನ್ನು ರಾಜ್ಯ ದ.ಸಾ.ಪ ಬೆಳಗಾವಿ ವಿಭಾಗೀಯ
ಸಂಯೋಜಕರನ್ನಾಗಿ ನೇಮಕ ಮಾಡಲಾಗಿದೆ.
ಮೋಹನ ಕಟ್ಟಿಮನಿ ಅವರು ವಿಜಯಪುರದ ದಲಿತ ಸಾಹಿತ್ಯ, ಶರಣ ಸಾಹಿತ್ಯ, ಸಾಂಸ್ಕೃತಿಕ ಚಿಂತನೆ ಹಾಗೂ ಸಾಮಾಜಿಕ ಸೇವೆಯಲ್ಲಿ ಸಕ್ರಿಯವಾಗಿ ಉತ್ತಮ ಸಂಘಟಕರಾಗಿ, ಭಾವ ಲಹರಿ, ಜೀವಂತ ಶವಗಳು ನಕ್ಕಾಗ, ಬರದ ನಾಡಿನಲ್ಲಿ ಬಂಗಾರ ಬೆಳೆದವರು, ಚಾಣಕ್ಯ ಬಿರಾದಾರ ಬದುಕಿನ ಚಿತ್ರಣ, ವಿಸ್ಮಯದ ಬೆನ್ನೆರಿ, ವಚನ ಫಕೀರ ಮತ್ತು ಹರ್ಡೇಕರ ಮಂಜಪ್ಪ ನಾಟಕ, ಪದ್ಮಭೂಷಣ ಜನರಲ್ ಜಿ. ಜಿ. ಬೇವೂರ ಕೃತಿಗಳನ್ನು ರಚಿಸುವುದರ ಮೂಲಕ 1001 ಬಸವಣ್ಣನವರ ವಚನಗಳನ್ನು ಕಂಠ ಪಾಠದ ಮೂಲಕ ಹೇಳುವ ಮೂಲಕ ಅಕ್ಕಾ ಸಮ್ಮೇಳನದಲ್ಲಿ 2005ರಲ್ಲಿ ಭಾಗವಹಿಸಿ ಇಲ್ಲಿಯವರೆಗೆ ಬಸವ ತತ್ವದ ಮೇಲೆ ವಚನ ಸಾಹಿತ್ಯ ಕುರಿತು 900ಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದಾರೆ. ಇದರೊಂದಿಗೆ ನಾಟಕ, ಸಾಕ್ಷ್ಯಚಿತ್ರ ನಿರ್ಮಾಣದ ಮೂಲಕ ಸಾಮಾಜಿಕ ಜಾಗೃತಿಯ ಕಾರ್ಯ ಮಾಡುತ್ತಿರುವ ಅವರನ್ನು ದ.ಸಾ.ಪ ರಾಜ್ಯ ಘಟಕ ಪದಾಧಿಕಾರಿಗಳೆಲ್ಲ ಚರ್ಚಿಸಿ ಶ್ರೀಯುತರನ್ನು ದಸಾಪ ರಾಜ್ಯ ಘಟಕದ ವಿಭಾಗಿಯ ಸಂಯೋಜಕರನ್ನಾಗಿ ನೇಮಿಸಲಾಗಿದೆ ಎಂದು ದಸಾಪ ರಾಜ್ಯಾಧ್ಯಕ್ಷ ಅರ್ಜುನ ಗೊಳಸಂಗಿ ಅವರು ತಿಳಿಸಿದ್ದಾರೆ.
ದಲಿತ ಸಾಹಿತ್ಯ ಪರಿಷತ್ತು ಬೆಳಗಾವಿ ವಿಭಾಗದ ಸಂಯೋಜಕರಾಗಿ ಮೋಹನ ಕಟ್ಟಿಮನಿ ನೇಮಕ


