ಮೂವರು ಮಕ್ಕಳನ್ನು ಬಾವಿಗೆ ಎಸೆದು ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ

ಸಪ್ತಸಾಗರ ವಾರ್ತೆ,ವಿಜಯಪುರ, ಮಾ. 27:
ಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಇಂಡಿ ತಾಲೂಕಿನ ಮಿರಗಿ ಗ್ರಾಮದಲ್ಲಿ ನಡೆದಿದೆ.
ತಾಯಿ ರಾಜಶ್ರೀ ಶಂಕ್ರಪ್ಪ ಹಳ್ಳೂರ (28),
ಮೂವರು ಅಪ್ರಾಪ್ತ ವಯಸ್ಸಿನ ಮಕ್ಕಳಾದ ಅನುಶ್ರೀ ( 6), ತನು (3)
ಸಂತೋಷ ( 1) ಮೃತಪಟ್ಟವರು.
ಗುರುವಾರ ಸಂಜೆ ಜಿಲ್ಲೆಯ ಇಂಡಿ ತಾಲೂಕಿನ ಮಿರಗಿ ಗ್ರಾಮದಲ್ಲಿ
ಮೂವರು ಮಕ್ಕಳನ್ನು‌ ಬಾವಿಗೆ ಎಸೆದು ತಾನೂ ಬಾವಿಗೆ ಬಿದ್ದು
ರಾಜಶ್ರೀ ಶಂಕ್ರಪ್ಪ ಹಳ್ಳೂರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ರಾಜಶ್ರೀ ಪತಿ ಶಂಕ್ರಪ್ಪ ಊರಲ್ಲಿ ಇಲ್ಲದಿರುವಾಗ ಈ ಘಟನೆ ನಡೆದಿದೆ.
ಖಾಸಗಿ ಬಸ್ ಚಾಲಕನಾಗಿರುವ ರಾಜಶ್ರೀ ಪತಿ ಶಂಕ್ರಪ್ಪ ಹಾಗೂ ರಾಜಶ್ರೀ ತವರಿನವರು ಆಗಮಿಸಿದ ಬಳಿಕ ಶವಗಳನ್ನು ಹೊರ ತಗೆದು ಮರಣೋತ್ತರ ಪರೀಕ್ಷೆಗೆ ಇಂಡಿ ತಾಲೂಕಾ ಆಸ್ಪತ್ರೆಗೆ ಪೊಲೀಸರು ರವಾನಿಸಿದ್ದಾರೆ.
ತನ್ನ ಮಕ್ಕಳ ಸಾವಿಗೆ ಪತ್ನಿ ರಾಜಶ್ರೀ ಕಾರಣವೆಂದು ಪತಿ ಶಂಕ್ರಪ್ಪ ದೂರು ನೀಡಿದ್ದಾರೆ.
ಇದು ಆತ್ಮಹತ್ಯೆ ಪ್ರಕರಣವೆಂದು ಮೃತ ರಾಜಶ್ರೀ ತವರು ಮನೆಯವರು ಕೂಡಾ ದೂರು ನೀಡಿದ್ದಾರೆ.
ಆಸ್ತಿ ವಿಚಾರದ ಕಾರಣದಿಂದ ರಾಜಶ್ರೀ ಮಕ್ಕಳನ್ನು ಬಾವಿಗೆ ಎಸೆದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆಸ್ತಿ ವಿಚಾರವೇ ಇದಕ್ಕೆ ಕಾರಣವೆಂದು ಗ್ರಾಮದಲ್ಲಿ ಚರ್ಚೆ ನಡೆದಿದೆ.
ಪೊಲೀಸರ ತನಿಖೆಯಿಂದ ಘಟನೆಯ ಕುರಿತು ಸತ್ಯಾಂಶ ಹೊರ ಬರಲಿದೆ
ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ನಾಲ್ವರ ಶವಗಳನ್ನು ಹಸ್ತಾಂತರಿಸಲಾಗಿದೆ.
ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

Share this