ಬೈಕ್ ಸವಾರಿ ಮಾಡಿದ ಸಂಸದ ಜಿಗಜಿಣಗಿ

ಸಪ್ತಸಾಗರ ವಾರ್ತೆ, ವಿಜಯಪುರ, ಮೇ. 18:
ಪ್ರಧಾನಿ ನರೇಂದ್ರ ಮೋದಿ ಅವರ ಮಿತ ವ್ಯಯ ಸೂತ್ರ ಪಾಲನೆ ಹಿನ್ನೆಲೆಯಲ್ಲಿ ಸಂಸದ ರಮೇಶ ಜಿಗಜಿಣಗಿ ಹೆಲ್ಮೇಟ್ ಧರಿಸಿ ಇಲೆಕ್ಟ್ರಿಕ್ ವಾಹನದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು.
ಬಿಜೆಪಿ ಮುಖಂಡ ಪಾಪುಸಿಂಗ್ ರಜಪೂತ ಅವರ ಜೊತೆ ಹೆಲ್ಮೇಟ್ ಧರಿಸಿ ಜಿಲ್ಲಾದಿಕಾರಿಗಳ ಕಚೇರಿಗೆ ಆಗಮಿಸಿದಾಗ ಎಲ್ಲರಿಗೂ ಅಚ್ಚರಿ…..
ಯುದ್ಧದ ಸಂಕಷ್ಟಗಳ ಕಾಲಘಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂಧನ ಮಿತ ಬಳಕೆ, ಚಿನ್ನ ಖರೀದಿ ಮುಂದೂಡಿಕೆ ಸಲಹೆ ನೀಡಿದ್ದಾರೆ. ಈ ಸಲಹೆ ಪಾಲನೆ ಹಿನ್ನೆಲೆಯಲ್ಲಿ ನಾನು ಸಹ ಕಾರಿನ ಬಳಕೆಯನ್ನು ಸಾಕಷ್ಟು ಮಿತಿಗೊಳಿಸಿರುವೆ. ಇಲೆಕ್ಟ್ರಿಕ್ ವಾಹನ ಮೊರೆ ಹೋಗಿರುವೆ. ಬೇರೆ ದೇಶದಲ್ಲಿ ಇಂಧನ ಬೆಲೆ ಗಗನಕ್ಕೆ ಹೋಗಿದೆ. ಆದರೆ ಮೋದಿಜಿ ಅವರ ಸಮರ್ಥ ನಾಯಕತ್ವದಲ್ಲಿ ಇಂಧನ ಬೆಲೆಯನ್ನು ಜನಸಾಮಾನ್ಯರಿಗೆ ಹೊರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಜನತೆಯೂ ಮೋದಿಜಿ ಅವರ ಕೂಗಿಗೆ ಸ್ಪಂದಿಸಿದ್ದಾರೆ ಎಂದರು‌.

Share this