ಯಾರೂ ಮತದಾನದ ಹಕ್ಕಿನಿಂದ ವಂಚಿತರಾಗದಿರಲಿ; ಸಮಾಜದ ಪ್ರಮುಖರು ಜಾಗೃತಿ ಮೂಡಿಸಿ

ಸಪ್ತಸಾಗರ ವಾರ್ತೆ,ವಿಜಯಪುರ, ಜು. 19:
ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಅಮೂಲ್ಯವಾಗಿದ್ದು, ಹಿಂದೂ ಸಮಾಜದ ಸಣ್ಣ ಪುಟ್ಟ ಜಾತಿ-ಉಪಜಾತಿಗಳ ಬಾಂಧವರು ತಮ್ಮ ಮತ್ತು ತಮ್ಮ ಕುಟುಂಬದ ಎಲ್ಲ ಸದಸ್ಯರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಉಳಿಸಿಕೊಳ್ಳಲು, ತಪ್ಪದೆ ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಸಮಾಜದ ಪ್ರಮುಖರು ತಮ್ಮ ಕುಲಬಾಂಧವರಿಗೆ ಎಸ್.ಐ.ಆರ್ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕು.
ಹಿಂದೂ ಸಮಾಜದ ಕಲಾಲ್/ಖಾಟಿಕ್, ಮಡಿವಾಳ (ಅಗಸ), ಹಂದಿಗೊಲ್ಲ/ಹಂದಿಜೋಗಿ, ಭೋವಿ, ಬಂಜಾರಾ, ಗೊಂಧಳಿ, ಕೊರಮ, ಕೊರಚ, ಅಲೆಮಾರಿ ಬುಡಕಟ್ಟು ಜಾತಿಗಳು ಸೇರಿದಂತೆ ವಿವಿಧ ಜಾತಿ ಮತ್ತು ಉಪ ಜಾತಿಗಳ ಸಮುದಾಯದವರು ಎಸ್.ಐ.ಆರ್ ಪ್ರಕ್ರಿಯೆಯಿಂದ ವಂಚಿತರಾಗಿ, ಮತದಾರರ ಪಟ್ಟಿಯಿಂದ ಹೆಸರು ಹೊರ ಹೋಗುವುದನ್ನು ತಪ್ಪಿಸಲು ಆಯಾ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು, ಪ್ರಮುಖರು ಮುತುವರ್ಜಿವಹಿಸಿ ತಮ್ಮ ತಮ್ಮ ಸಮಾಜ ಬಾಂಧವರಿಗೆ ಎಸ್.ಐ.ಆರ್ ಮಹತ್ವದ ಕುರಿತು ಜಾಗೃತಿ ಮೂಡಿಸಿ, ಬಿ.ಎಲ್.ಒ ಗಳು ನೀಡುವ ಅರ್ಜಿ ಫಾರ್ಮ್ ಗಳನ್ನು ತುಂಬಿ, ಮರಳಿ ಬಿ.ಎಲ್.ಒ ಗಳಿಗೆ ಫಾರ್ಮ್ ನೀಡುವವರೆಗೆ ಜಬಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು.
ಬೇರೆ ಕಡೆ ಹೊಸ ಮನೆ ಕಟ್ಟಿಕೊಂಡವರು, ಬಾಡಿಗೆ ಮನೆ ಬದಲಾಯಿಸಿದವರ ಮತ್ತು ಕೆಲಸ ಕಾರ್ಯಗಳಿಗೆ ಬೇರೆ ಊರುಗಳಿಗೆ ಹೋಗಿರುವವರ ಮನೆಗಳು ಬಿ.ಎಲ್.ಒ ಗಳಿಗೆ ಸಿಗುತ್ತಿಲ್ಲ. ಅಂತವರು ಎಸ್.ಐ.ಆರ್ ಪ್ರಕ್ರಿಯೆಯಿಂದ ವಂಚಿತರಾಗುವ ಸಂಭವವಿದ್ದು, ಆಗ ಹಿಂದೂ ಮತಗಳು ಮತದಾರರ ಪಟ್ಟಿಯಿಂದ ಕೈ ತಪ್ಪಬಹುದು. ಇದನ್ನು ತಪ್ಪಿಸಲು ಆಯಾ ಸಮಾಜದ ಪ್ರಮುಖರು ತಮ್ಮ ಸಮಾಜದ ಕುಲಬಾಂಧವರನ್ನು ಗುರ್ತಿಸಿ ಬಿ.ಎಲ್.ಒ ಗಳ ಜೊತೆಗೆ ಸಂಪರ್ಕಿಸಿ ಮನೆಗಳನ್ನು ಹುಡುಕಿಕೊಟ್ಟು ಅವರ ಎಸ್.ಐ.ಆರ್ ಪ್ರಕ್ರಿಯೆ ಪೂರ್ಣಗೊಳಿಸಲು ನೆರವಾಗಬೇಕು.
ಯಾರಿಗಾದರೂ ತಮ್ಮ ಬೂತ್, ಬಿ.ಎಲ್.ಒ, ಸೂಪರ್ ವೈಸರ್ ಮಾಹಿತಿ ಸೇರಿ ಎಸ್.ಐ.ಆರ್ ಪ್ರಕ್ರಿಯೆ ಕುರಿತಂತೆ ಯಾವುದೇ ಸಹಾಯ ಸಹಕಾರದ ಅವಶ್ಯಕತೆಯಿದ್ದರೆ, ತಕ್ಷಣ ನಗರ ಶಾಸಕರ ಕಚೇರಿಯಿಂದ ನೇಮಿಸಲಾದ ಸಹಾಯಕರಾದ ಸಚೀನ ಪಡಗಾನೂರ ಮೊ.9663760909, ಬಸವರಾಜ ಮಸಿಯವರ ಮೊ.7411622511, ಮಹೇಶ ಪಾಟೀಲ ಮೊ.9902509755 ಅವರನ್ನು ಸಂಪರ್ಕಿಸಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಂಡು ತಪ್ಪದೆ ಎಸ್.ಐ.ಆರ್ ಮಾಡಿಕೊಳ್ಳುವಂತೆ ನಗರ ಶಾಸಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

Share this