ಸಪ್ತಸಾಗರ ವಾರ್ತೆ ಗೊಳಸಂಗಿ,ಡಿ. 17:
ಜಿಲ್ಲೆಯ ನಿಡಗುಂದಿ ತಾಲೂಕಿನ ಬುದ್ನಿ ಗ್ರಾಮದಲ್ಲಿ ಡಿ. 12ರಿಂದ 17 ರವರೆಗೆ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರ ಜರುಗಿತು.
ಬಸನಗೌಡ ಪಾಟೀಲ್ ಅವರು ಸಸಿಗೆ ನೀರುಣಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿ ಚನಗೌಡ ಪಾಟೀಲ್, ಮುಖ್ಯೋಪಾಧ್ಯಾಯ ಬೇವೂರ ಅವರು, ಎನ್ ಎಸ್ ಎಸ್ ವತಿಯಿಂದ ಸಮಾಜ ಸೇವೆ ಹಾಗೂ ಮುಂದಾಳತ್ವ ಮಹತ್ವ ಕುರಿತು ವಿವರಿಸಿದರು.
ಎನ್ಎಸ್ಎಸ್ ಸಂಯೋಜನ ಅಧಿಕಾರಿ ಎಸ್ ಬಿ ಲಮಾಣಿ ರಾಷ್ಟ್ರೀಯ ಸೇವಾ ಯೋಜನೆಯ ರಾಷ್ಟ್ರ ಗೀತೆ ಹಾಡಿದರು.
ಪ್ರಾಚಾರ್ಯ ವಿ.ಪಿ. ಕಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಿ.ಎಸ್. ಬಿರಾದಾರ್, ಅನ್ನಪ್ಪಗೋಳ, ಸಂಗ್ರಾಮ ಪವಾರ್ ಮತ್ತಿತರ ಗಣ್ಯರು ಭಾಗವಹಿಸಿದ್ದರು.
ಮಂಜು ಲಮಾಣಿ ಸ್ವಾಗತಿಸಿ, ವಂದಿಸಿದರು.
ಬುದ್ನಿಯಲ್ಲಿ ಎನ್ ಎಸ್ ಎಸ್ ರಾಷ್ಟ್ರೀಯ ಶಿಬಿರ


