ಸಪ್ತಸಾಗರ ವಾರ್ತೆ, ವಿಜಯಪುರ, ಏ. 20:
ಸಿದ್ಧಸಿರಿ ಮಲ್ಟಿ-ಸ್ಟೇಟ್ ಮಲ್ಟಿ-ಪರ್ಪಸ್ ಕೋ ಆಪರೇಟಿವ್ ಸೊಸೈಟಿ.ಲಿ ವಿಜಯಪುರ ದ ನೂತನ ಅಧ್ಯಕ್ಷರಾಗಿ ರಾಮನಗೌಡ ಬ.ಪಾಟೀಲ ಯತ್ನಾಳ ಹಾಗೂ ಉಪಾಧ್ಯಕ್ಷರಾಗಿ ಪ್ರಭುಗೌಡ ದೇಸಾಯಿ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.
5 ವರ್ಷಗಳ ಅವಧಿಗಾಗಿ ಈಚೆಗೆ ನಡೆದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದರು. ನಗರ ಶಾಸಕರು ಹಾಗೂ ನಿರ್ದೇಶಕ ಬಸನಗೌಡ ಪಾಟೀಲ ಯತ್ನಾಳ, ನಿರ್ದೇಶಕರಾದ ಸಂಗನಬಸಪ್ಪ ಸಜ್ಜನ, ಶಿವಾನಂದ ಅಣೆಪ್ಪನವರ, ಬಸಯ್ಯ ಹಿರೇಮಠ, ಸಾಯಿಬಾಬಾ ಸಿಂದಗೇರಿ, ಜಗದೀಶ ಕ್ಷತ್ರಿ, ಸೋಮಶೇಖರ ಬಂಡಿ, ಶೈಲಜಾ ಪಾಟೀಲ ಯತ್ನಾಳ, ಸೀಮಾ ಕೋರೆ, ಆದರ್ಶ ಪಾಟೀಲ ಯತ್ನಾಳ, ವೈಭವ ಡಾಂಗೆ, ವಿಜಯಕುಮಾರ ಚವ್ಹಾಣ, ಬಸನಗೌಡ ಪಾಟೀಲ (ನಾಗರಾಳ ಹುಲಿ), ಗಣಪತಿ ಜಾಧವ, ನಾಗರಾಜ ಮುಳವಾಡ ಅವರು ಪ್ರಮಾಣ ವಚನ ಸ್ವೀಕರಿಸಿದರು. ನೂತನವಾಗಿ ಆಯ್ಕೆಯಾದ ನಿರ್ದೇಶಕರಿಗೆ ಸೊಸೈಟಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಜೊತಿಬಾ ಖಂಡಾಗಳೆ ಪ್ರಮಾಣ ವಚನ ಬೋಧಿಸಿದರು. ರಾಜಶೇಖರ ಸ್ವಾಮಿ ನಿರೂಪಿಸಿದರು.
ಸಿದ್ಧಸಿರಿ ನೂತನ ಪದಾಧಿಕಾರಿಗಳ ಪದಗ್ರಹಣ: ರಾಮನಗೌಡ ಪಾಟೀಲ ಯತ್ನಾಳ ಅಧ್ಯಕ್ಷ, ಪ್ರಭುಗೌಡ ದೇಸಾಯಿ ಉಪಾಧ್ಯಕ್ಷ


