ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ್ ಮಹಾಪರಿ ನಿರ್ವಾಣ ದಿನ ಆಚರಣೆ

ಸಪ್ತಸಾಗರ ವಾರ್ತೆ ವಿಜಯಪುರ, ಡಿ. 6: ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ 69ನೇ ಮಹಾಪರಿ ನಿರ್ವಾಣ ದಿನವನ್ನು ಶನಿವಾರ ಆಚರಿಸಲಾಯಿತು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರು ಮಾತನಾಡಿ, ಬಾಬಾಸಾಹೇಬ ಅಂಬೇಡ್ಕರ್ ಅವರು ಯಾವ ಹಂಗಿಗೂ ಒಳಗಾಗದ ವ್ಯಕ್ತಿತ್ವ ಉಳ್ಳವರಾಗಿದ್ದರು. ಅವರ ಮಾತು ಕೃತಿ ಭಾಷಣಗಳಿಂದ ಸೂರ್ಯನ ಕಿರಣಗಳಿಗಿಂತಲೂ ಪ್ರಖರವಾಗಿದ್ದು. ಅವರು ಅಂದು ನಡೆದ ಬಂದಂತ ಕಲ್ಲು ಮುಳ್ಳಿನ ದಾರಿ ಇಂದು ನಮಗೆಲ್ಲ ರಾಜ್ಯಮಾರ್ಗವಾಗಿದೆ. ಬಾಬಾ ಸಾಹೇಬ ಅಂಬೇಡ್ಕರ ಅವರು 1939 ರಲ್ಲಿ ವಿಜಯಪುರ ನಗರಕ್ಕೆ ಆಗಮಿಸಿ ಸೋಮನಗೌಡ ಪಾಟೀಲ್ ಬೀಳಗಿ ಅವರ ಕೇಸ್ ಅನ್ನು ಗೆಲ್ಲಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಣೆ ಮಾಡಿದರು. ಬಾಬಾಸಾಹೇಬ ಅಂಬೇಡ್ಕರ್ ಅವರ ದೂರ ದೃಷ್ಟಿ ವಿಚಾರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಗಳನ್ನು ಇವತ್ತು ಬಿಜೆಪಿ ಅನುಷ್ಠಾನಕ್ಕೆ ತರುವಂತಹ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದೆ ಎಂದರು.
ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಗೋಪಾಲ ಘಟಕಾಂಬಳೆ ಅವರು ಮಾತನಾಡಿ, ಅಂಬೇಡ್ಕರ್ ಅವರ ಆದರ್ಶ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ನಗರ ಮಂಡಲ ಅಧ್ಯಕ್ಷ ಸಂದೀಪ್ ಪಾಟೀಲ್ ಅವರು ಮಾತನಾಡಿ, ಅಂಬೇಡ್ಕರ್ ಅವರ ಅಪಾರ ಜ್ಞಾನ ಅವರ ಪಡೆದಂತಹ ಪದವಿ ಅಸ್ಪೃಶ್ಯ ಸಮಾಜದ ಪರವಾಗಿ ಅವರ ನಿಲುವು ಕುರಿತು ಮಾತನಾಡಿದರು.
ಚಿದಾನಂದ ಚಲವಾದಿ ಅವರು ಮಾತನಾಡಿ, ಅಂಬೇಡ್ಕರ್ ಅವರ ಜೀವನದ ಆದರ್ಶ ಕುರಿತಾಗಿ ಮಾತನಾಡಿದರು.
ಎಸ್ ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಮೀಸಿ ಮಾತನಾಡಿ, ಬಾಬಾಸಾಹೇಬ ಅಂಬೇಡ್ಕರ್ ಅವರು ಹುಟ್ಟಿದಂತ ಸಂದರ್ಭದಲ್ಲಿ ಭಾರತ ದೇಶ ಬ್ರಿಟಿಷರ ಆಳ್ವಿಕೆಯಲ್ಲಿತ್ತು. ಅವರ ಹುಟ್ಟಿದಂತಹ ಜಾತಿ ಗುಲಾಮಗಿರಿಯಲ್ಲಿತ್ತು. ಬಾಬಾ ಸಾಹೇಬ್ ಅಂಬೇಡ್ಕರ್ ವಿಚಾರಗಳನ್ನು ಇವತ್ತು ಭಾರತೀಯ ಜನತಾ ಪಾರ್ಟಿ ಸರ್ಕಾರ ಅನುಷ್ಠಾನಕ್ಕೆ ತರುವಂತಹ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದೆ ಎಂದು ಹೇಳಿದರು.
ಸಂಜು ಐಹೊಳೆ ಮಾತನಾಡಿ, ಕಾಂಗ್ರೆಸ್ ಹಾಗೂ ಗಾಂಧಿ ಅವರು ಅಸ್ಪೃಶ್ಯತೆ ತೊಡೆದು ಹಾಕಲು ಯಾವುದೇ ಪ್ರಯತ್ನವನ್ನು ಮಾಡಲಿಲ್ಲ. ಹಾಗಾಗಿ ಬಾಬಾಸಾಹೇಬ ಅಂಬೇಡ್ಕರ್ ಅವರು ಗಾಂಧೀಜಿಯವರನ್ನು ಹಾಗೂ ಕಾಂಗ್ರೆಸ್ಸಿನ ಕಟುವಾಗಿ ಟೀಕಿಸಿದರು ಎಂದು ಹೇಳಿದರು.
ಮಹೇಂದ್ರಕುಮಾರ್ ನಾಯಕ್ ಮಾತನಾಡಿ, ವಿಜಯಪುರ ನಗರದಲ್ಲಿ 1976ರಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪಿಸುವಲ್ಲಿ ಮಾಜಿ ಶಾಸಕ ಲಕ್ಷ್ಮಣ ನಾಯಕರ ಪಾತ್ರದ ಕುರಿತು ಮಾತನಾಡಿದರು. ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸಪ್ನಾ ಕಣ್ಮುಚನಾಳ ಮಾತನಾಡಿ, ಮಹಿಳಾ ಸ್ವಾತಂತ್ರ್ಯದ ಕುರಿತು ಅಂಬೇಡ್ಕರ್ ಅವರ ವಿಚಾರಗಳನ್ನು ಮತ್ತು ಹಿಂದು ಕೋಡ್ ಬಿಲ್ ಬಾಬಾಸಾಹೇಬ ಅಂಬೇಡ್ಕರ್ ಅವರ ಜಾರಿಗೆ ತರುವುದರ ಹಿನ್ನೆಲೆ ಕುರಿತು ಮಾತನಾಡಿದರು.
ಕಾರ್ಯಕ್ರಮದ ವೇದಿಕೆ ಮೇಲೆ ಬಿಜೆಪಿ ಬೆಳಗಾವಿ ವಿಭಾಗ ಪ್ರಮುಖ ಚಂದ್ರಶೇಖರ ಕವಟಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ರಾಹುರ, ಮಲ್ಲುಗೌಡ ಪಾಟೀಲ್,ಎಸ್. ಸಿ ಮೋರ್ಚಾ ನಗರ ಮಂಡಲ ಅಧ್ಯಕ್ಷ ಸದಾನಂದ ಚಲವಾದಿ, ಶಾಂತಾಬಾಯಿ ಉತ್ಲಾಸ್ಕರ್, ವಿನೋದ ಕೋಳೂರು ಮುಂತಾದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ರಾಹುಲ್ ಜಾಧವ್, ರಾಜೇಶ ದೇವಗೀರಕರ, ರಾಜಶೇಖರ ಮಗಿಮಠ, ಮಹೇಶ್ ಒಡೆಯರ್, ಹನುಮಂತ ಭಜಂತ್ರಿ, ಎಸ್.ಎ. ಪಾಟೀಲ್, ಉಮೇಶ ಕೊಳಕೂರ, ದಿಶಾ ಚೆಕನಾದ, ರಮೇಶ ಬಿದ್ನೂರ, ಭೀಮಾಶಂಕರ ಹದನೂರು, ಅನುಸೂಯಾ ಮಾದರಿ, ಸಂತೋಷ ದೊಡ್ಮನಿ, ಪ್ರದೀಪ ಚಲವಾದಿ, ಉಮೇಶ ವೀರಕರ, ರಾಜಕುಮಾರ ಸಗಾಯಿ, ಕಾಂತು ಸಿಂಧೆ, ರಾಜೇಶ ತಾವಸೆ, ಸಿದ್ಧಗೊಂಡ ಬಿರಾದಾರ, ಭಾರತಿ ಭುಯ್ಯಾರ, ವಿನಾಯಕ ದಹಿಂಡೆ, ಸುಶ್ಮಿತಾ ಹಾಗೂ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share this