ಡಿ.6ರಂದು 15 ಗ್ರಾಮಗಳಲ್ಲಿ ಹೋಬಳಿ ಮಟ್ಟದ ಪಿಂಚಣಿ ಅದಾಲತ್

ಸಪ್ತಸಾಗರ ವಾರ್ತೆ, ವಿಜಯಪುರ, ಡಿ.5:
ವಿವಿಧ ಸಾಮಾಜಿಕ ಭದ್ರತೆ ಯೋಜನೆಗಳನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲೆಯ ಹೋಬಳಿ ಮಟ್ಟದಲ್ಲಿ ಡಿಸೆೆಂಬರ್ 6ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲೆಯ ವಿವಿಧ 15 ಗ್ರಾಮಗಳಲ್ಲಿ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ತಿಳಿಸಿದ್ದಾರೆ.
ವಿಜಯಪುರ ಉಪ ವಿಭಾಗಾಧಿಕಾರಿಗಳು ತಾಳಿಕೋಟೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ, ಇಂಡಿ ಉಪವಿಭಾಗಾಧಿಕಾರಿಗಳು ಇಂಡಿ ತಾಲೂಕಿನ ಅಗರಖೇಡ ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ, ವಿಜಯಪುರ ಗ್ರೇಡ್-2 ತಹಶೀಲ್ದಾರ ಅವರು ಉತ್ನಾಳ ಗ್ರಾಮದ ಶ್ರೀ ಮಾರುತಿ ದೇವಸ್ಥಾನದಲ್ಲ್ಲಿ ಹಾಗೂ ತಿಕೋಟಾ ಗ್ರೇಡ್-2 ತಹಶೀಲ್ದಾರ ಅವರು ಸೋಮದೇವರ ಹಟ್ಟಿ ಗ್ರಾಮದ ಶ್ರೀ ಹನುಮಾನ ದೇವಸ್ಥಾನದಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.
ಬಬಲೇಶ್ವರ ಗ್ರೇಡ್-2 ತಹಶೀಲ್ದಾರ ಅವರು ಬಬಲೇಶ್ವರದ ಪಟ್ಟಣ ಪಂಚಾಯತಿ ಕಾರ್ಯಾಲಯದಲ್ಲಿ, ಬಸವನಬಾಗೇವಾಡಿ ಗ್ರೇಡ್-2 ತಹಶೀಲ್ದಾರ ಅವರು ಗಣಪತಿಪುರ (ಇಸ್ಲಾಂಪೂರ ತಾಂಡಾ) ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ, ನಿಡಗುಂದಿ ತಹಶೀಲ್ದಾರ ಅವರು ಗಣಿ ಗ್ರಾಮದ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ, ಕೊಲ್ಹಾರ ತಹಶೀಲ್ದಾರ ಅವರು ಕಲಗುರ್ಕಿ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ, ಮುದ್ದೇಬಿಹಾಳ ಗ್ರೇಡ್-2 ತಹಶೀಲ್ದಾರ ಅವರು ಮಾದಿನಾಳ ಗ್ರಾಮದ ಅಗಸಿ (ಚಾವಡಿ)ಯಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.
ತಾಳಿಕೋಟೆ ಗ್ರೇಡ್-2 ತಹಶೀಲ್ದಾರ ಅವರು ತಾಳಿಕೋಟೆ ಪಟ್ಟಣದ ವಾರ್ಡ್ ನಂಬರ್ 21ರ ಹಾಳಗೋಡಾ ಮಸೀದಿಯಲ್ಲಿ, ಇಂಡಿ ಗ್ರೇಡ್-2 ತಹಶೀಲ್ದಾರ ಅವರು ಹೊರ್ತಿಯಲ್ಲಿನ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲ್ಲಿ, ಚಡಚಣ ತಹಶೀಲ್ದಾರ ಅವರು ನಂದ್ಯಾಳ ಗ್ರಾಮದ ಗ್ರಾಮ ಚಾವಡಿಯಲ್ಲಿ, ಸಿಂದಗಿ ತಹಶೀಲ್ದಾರ ಅವರು ಬಸ್ತಿಹಾಳ ಗ್ರಾಮದ ಶ್ರೀ ಹನುಮಾನ ದೇವಸ್ಥಾನದಲ್ಲಿ, ದೇವರಹಿಪ್ಪರಗಿ ತಹಶೀಲ್ದಾರ ಅವರು ಮಾರ್ಕಬ್ಬಿನಹಳ್ಳಿ ಗ್ರಾಮದ ಗ್ರಾಮ ಪಂಚಾಯತಿಯಲ್ಲಿ ಹಾಗೂ ಆಲಮೇಲ ತಹಶೀಲ್ದಾರ ಅವರು ತಾವರಖೇಡ ಗ್ರಾಮದ ಗೈಬೂಸಾಬ ದರ್ಗಾದಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.
ಪಿಂಚಣಿ ಸಾಮಾಜಿಕ ಭದ್ರತೆ ಯೋಜನೆಯಡಿ ವಿವಿಧ ಪಿಂಚಣಿ ಅದಾಲತ್ ನಡೆಯುವ ಗ್ರಾಮಗಳಲ್ಲಿ ಸಾಮಾಜಿಕ ಭದ್ರತೆ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳಿಗೆ ನೇರ ಹಣ ವರ್ಗಾವಣೆ ಮೂಲಕ ಪಿಂಚಣಿ ಪಾವತಿಸಲಾಗುತ್ತಿರುವುದರಿಂದ ಸಂಬಂಧಿಸಿದ ಬ್ಯಾಂಕ್-ಅಂಚೆ ಕಚೇರಿ ಅಧಿಕಾರಿಗಳ ಸಹಯೋಗದಲ್ಲಿ ತಪ್ಪದೇ ಮಾಡಿಸುವಂತೆ ಸೂಚಿಸಲಾಗಿದೆ.
ಪಿಂಚಣಿ ಅದಾಲತ್‌ನಲ್ಲಿ ಪಿಂಚಣಿದಾರರ ಮಾಹಿತಿಗಳೊಂದಿಗೆ ಗ್ರಾಮದ ಲೆಕ್ಕಿಗರು, ಪಂಚಾಯತ್ ಕಾರ್ಯದರ್ಶಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಂಚೆ ಕಚೇರಿ ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಿರುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this