ಮಾ. 15ರಂದು ಒಂದು ದಿನದ ಕಾಂಗ್ರೆಸ್ ಕಾರ್ಯಾಗಾರ

ಸಪ್ತಸಾಗರ ವಾರ್ತೆ ವಿಜಯಪುರ, ಮಾ. 9:
ಮಾ. 15 ರಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವಿಜಯಪುರದಿಂದ ಒಂದು ದಿನದ ಕಾರ್ಯಾಗಾರ ಹಮ್ಮಿಕೊಂಡಿದ್ದು, ಈ ನಿಮಿತ್ತ ಪೂರ್ವಭಾವಿ ಸಭೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಅವರ ನೇತೃತ್ವದಲ್ಲಿ ನಡೆಯಿತು.
ಕೆ.ಪಿ. ಸಿ. ಸಿ. ಸಂಯೋಜಕ ಮಹಾಬಳೇಶ್ವರ ಜಿ. ಎಸ್. ಅವರು ಮಾತನಾಡಿ, ನಮ್ಮ ಸರಕಾರ ಅನೇಕ ಯೋಜನೆಗಳನ್ನು ಮಾಡಿ ನುಡಿದಂತೆ ನಡೆದಿದೆ. ಆದರೆ ಇದರ ಕುರಿತು ಯಾವುದೇ ರೀತಿ ಕಟ್ಟಕಡೆಯ ಜನರಿಗೆ ಸರಿಯಾಗಿ ಮಾಹಿತಿ ಪ್ರಚಾರ ಮಾಡುತ್ತಿಲ್ಲ. ಸುಳ್ಳು ಪ್ರಚಾರಕ್ಕೆ ನಂಬಿ ಸರಕಾರದ ಯೋಜನೆ ಕುರಿತು ಅಪಪ್ರಚಾರವಾಗುತ್ತಾ ಇದೆ. ಕಾರಣ ಕೆ.ಪಿ.ಸಿ.ಸಿ ಅಧ್ಯಕ್ಷರು, ಮುಖ್ಯಮಂತ್ರಿಗಳು ಹಾಗೂ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರ ಆದೇಶದಂತೆ ವಿಜಯಪುರದಲ್ಲಿ ಒಂದು ದಿನದ ಕಾರ್ಯಾಗಾರ ಮಾಡುತ್ತಿದ್ದೇವೆ. ಕಾರಣ ಎಲ್ಲ ಬ್ಲಾಕ್ ಅಧ್ಯಕ್ಷರು, ಮುಂಚೂಣಿ ಘಟಕದ ಅಧ್ಯಕ್ಷರು ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಒಂದುಗೂಡಿಸಿ ಈ ಕಾರ್ಯಾಗಾರ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ ಮಾತನಾಡಿ, ಕೇವಲ ಪ್ರಚಾರ ಸಮಿತಿಯವರೇ ಮಾಡುವಂತ ಕೆಲಸವಲ್ಲ ಎಲ್ಲ ಅಂಗಘಟಕದ ಮುಂಚೂಣಿ ಘಟಕದ ಅಧ್ಯಕ್ಷರು, ಕಾರ್ಯಕರ್ತರು ಒಂದು ಗೂಡಿ ಮಾಡುವ ಕೆಲಸವಾಗಿದೆ. ಈ ಕಾರ್ಯಾಗಾರದಲ್ಲಿ ಹೆಚ್ಚಿನ ಸಂಖೆಯಲ್ಲಿ ಭಾಗವಹಿಸುವಂತೆ ಮಾಡಬೇಕೆಂದು ಹೇಳಿದರು.
ಅಹಿಂದ ನಾಯಕ ಎಸ್. ಎಂ. ಪಾಟೀಲ (ಗಣಿಹಾರ) ಮಾತನಾಡಿ, ಕಾಂಗ್ರೆಸ್ ಪಕ್ಷ ಎಲ್ಲ ಸಮಾಜದ ಹಿಂದುಳಿದ ವರ್ಗಕ್ಕಾಗಿ ಅನೇಕ ಸೇವೆ ಮಾಡುತ್ತಾ ಇದೆ ಅದು ಪ್ರಚಾರವಾಗುತ್ತಾ ಇಲ್ಲ. ಸರಕಾರದಿಂದ ಗೃಹ ಲಕ್ಷಿö್ಮÃ ಯೋಜನೆಯ ಲಾಭ ಪಡೆಯುತ್ತಾ ಇದ್ದಾರೆ ಅವರು ನನಗೆ ಕೇಳುತ್ತಾರೆ “ಎನ್ರೀ ಗೃಹಲಕ್ಷ್ಮಿ ಯೋಜನೆ ಬಂದಾಗುತ್ತದೆ ಅಂತಲ್ಲ” ಎಂದು ಅಂದರೆ ವಿರೋಧಿಗಳು ಯಾವ ರೀತಿ ಜನರಲ್ಲಿ ತಪ್ಪು ಮಾಹಿತಿ ಕೊಡುತ್ತಾರೆ ನೋಡಿ, ಕಾರಣ ಈ ಕಾರ್ಯಕ್ರಮ ಬಹಳ ಮಹತ್ವದ್ದಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿ ಕಾರ್ಯಾಗಾರದಲ್ಲಿ ಚರ್ಚಿಸಿದ ವಿಷಯ ಕೆಳಮಟ್ಟದಲ್ಲಿ ಮುಟ್ಟುವ ಕಾರ್ಯ ಮಾಡಬೇಕೆಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಅವರು ಮಾತನಾಡುತ್ತಾ ಕೆ.ಪಿ.ಸಿ.ಸಿ. ನಿರ್ದೇಶನದಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ. ಬಿ. ಪಾಟೀಲ, ಹಾವೇರಿ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಇನ್ನುಳಿದ ಶಾಸಕರಾದ ಅಪ್ಪಾಜಿ ನಾಡಗೌಡ, ಯಶವಂತರಾಯಗೌಡ ಪಾಟೀಲ, ವಿಠ್ಠಲ ಕಟಕಧೋಂಡ, ಅಶೋಕ ಮನಗೂಳಿ ಹಾಗೂ ನಾನು ಕೂಡಾ ಎ.ಐ.ಸಿ.ಸಿ, ಕೆ.ಪಿ.ಸಿ.ಸಿ ಯಲ್ಲಿ ಕೈಗೊಂಡ ಕಾರ್ಯಾಗಾರದಲ್ಲಿ ಮುಂಜಾನೆಯಿಂದ ಸಾಯಂಕಾಲದವರೆಗೆ ಇಂತಹ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೇವೆ. ಇದಕ್ಕೆ ಇಬ್ಬರೂ ಸಚಿವರು, ಶಾಸಕರು ಕೂಡಾ ಆಗಮಿಸುತ್ತಾರೆ. ಸರಕಾರದ ಯೋಜನೆಗಳ ಕುರಿತು ಬೆಂಗಳೂರಿನಿಂದ ವಿಶೇಷವಾಗಿ ಮಾತನಾಡುವ ನಾಯಕರು ಬರುವರು ಮುಂಜಾನೆ 10-30 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ನಡೆಯುವ ಕಾರ್ಯಾಗಾರಕ್ಕೆ ಪ್ರಾಮಾಣಿಕವಾಗಿ ಭಾಗವಹಿಸುವಂತಹ ಕಾರ್ಯಕರ್ತರನ್ನು ಕರೆದುಕೊಂಡು ಬರಬೇಕು ಎಂದು ಹೇಳಿದರು.
ಮಾತನಾಡುವಾಗ ಬಹಳ ಕಳಕಳಿಯ ಮಾತುಗಳನ್ನು ಹೃದಯ ಮುಟ್ಟುವ ಹಾಗೆ ಪಕ್ಷ ಸಂಘಟನೆಯ ಕುರಿತು ವಿಶಾಲವಾಗಿ ಹೇಳಿದರು.
ಡಾ. ಪ್ರಭುಗೌಡ ಪಾಟೀಲ, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿಗಳಾದ ಮಹ್ಮದ ರಫೀಕ ಟಪಾಲ, ಕೆ.ಎಂ.ಎಫ್. ಸದಸ್ಯರಾದ ಸಂತೋಷಗೌಡ ಪಾಟೀಲ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ರಮೀಜಾ ನದಾಫ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ಇಂಡೀಕರ ವಕೀಲರು, ಸುಭಾಸ ಕಾಲೆಬಾಗ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಎಂ. ಎಂ. ಮುಲ್ಲಾ, ವಸಂತ ಹೊನಮೋಡೆ, ಹಾಜಿಲಾಲ ದಳವಾಯಿ, ಗೌಸಮೊದ್ದೀನ ಮುಜಾವರ, ಶ್ರೀಮತಿ ಗಂಗೂಬಾಯಿ ಧುಮಾಳೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಮೀರ ಬಕ್ಷಿ, ಆರತಿ ಶಾಹಪೂರ, ಈರನಗೌಡ ಬಿರಾದಾರ, ಸಿದ್ದಣ್ಣ ಗೌಡಣ್ಣವರ, ಸುರೇಶ ಹಾರಿವಾಳ, ಬಶೀರ ಶೇಠ, ಮುಂಚೂಣಿ ಘಟಕದ ಅಧ್ಯಕ್ಷರಾದ ರಮೆಶ ಗುಬ್ಬೇವಾಡ, ರಾಘವೇಂದ್ರ ವಡವಡಗಿ, ಲಾಲಸಾಬ ಕೋರಬು, ಎಂ. ಬಿ. ಮೆಂಡೆಗಾರ, ಮಲ್ಲನಗೌಡ ಬಿರಾದಾರ, ವಿಜಯಕುಮಾರ ಕಾಳೆ, ದೇವಾನಂದ ಲಚ್ಯಾಣ, ಭೀಮಪ್ಪ ಬಡಿಗೇರ, ಕಿರಣಗೌಅಡ ಬಿರಾದಾರ, ಕೃಷ್ಣಾ ಕಾಮಟೆ, ವಿದ್ಯಾಧರ ಪಾಟೀಲ, ಸಮೀನಾ ಅಕ್ಕಲಕೋಟ, ಮಹಿಬೂಬ ಕಲಾದಗಿ, ಲಕ್ಷ್ಮಿ ಕ್ಷೀರಸಾಗರ, ಚಂದ್ರಶೇಖರ ಅರಕೇರಿ, ಡಾ. ಶರಣಬಸಪ್ಪ ಚೋರ, ವೀರೇಶ ಕಲಾಲ, ಪರಶುರಾಮ ಹೊಸಮನಿ, ಬಾಪು ಜಾಲಮಟ್ಟಿ, ಮಲ್ಲಿಕಾರ್ಜುನ ಪರಸಣ್ಣವರ, ಸವಿತಾ ಧನರಾಜ, ಲಕ್ಷ್ಮಿಬಾಯಿ ಬಳ್ಳಾರಿ, ಎಲ್.ವಾಯ್.ಬಿ., ಭುವನೆಶ್ವರಿ ಮಠ, ಪ್ರೇಮಾ ಬ್ಯಾಕೋಡ, ಅಲ್ಲಾಬಕ್ಷ ಬಡೇಘರ, ಡಿ. ಕೆ. ಹೊಸಮನಿ, ಮಲ್ಲಿಕಾರ್ಜುನ ಪರಸಣ್ಣವರ, ಬಿ. ಎಂ. ಮಕ್ತೆದಾರ ಹಾಗೂ ಇತರರು ಉಪಸ್ಥಿತರಿದ್ದರು.

Share this