ಐಟಿಐ ಪ್ರವೇಶಾತಿಗಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ.11:
ಜಿಲ್ಲೆಯ 10 ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಎನ್‌ಸಿವಿಟಿ ಸಂಯೋಜನೆ ಹೊಂದಿರುವ ವೃತ್ತಿಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಮೆರಿಟ್ ಮತ್ತು ಮೀಸಲಾತಿ ಆಧಾರದ ಮೇಲೆ ಆಗಸ್ಟ್-2026ನೇ ಸಾಲಿನ ಪ್ರವೇಶ ಪಡೆಯಲು 10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು www..cite.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಮೇ 15 ಕೊನೆ ದಿನವಾಗಿದೆ. ಮಹಿಳಾ ಅಭ್ಯರ್ಥಿಗಳಿಗೆ ಪ್ರವೇಶ ಶುಲ್ಕವಿಲ್ಲ. ಜಿಲ್ಲಾ ನೋಡಲ್ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ವಿಜಯಪುರದಲ್ಲಿ 08 ಸಾಂಪ್ರದಾಯಿಕ ವೃತ್ತಿಗಳಲ್ಲಿ ಮತ್ತು 06 ಇಂಡಸ್ಟ್ರೀಸ್-4.0 ಅತ್ಯಾಧುನಿಕ ವೃತ್ತಿಗಳಲ್ಲಿ ಒಟ್ಟು 518 ಸ್ಥಾನಗಳಿಗೆ ಪ್ರವೇಶಗಳು ಲಭ್ಯವಿರುತ್ತವೆ. ವೆಲ್ಡರ್ ವೃತ್ತಿಗೆ ಅರ್ಜಿ ಸಲ್ಲಿಸಲು 8 ನೇ ತರಗತಿ ಪಾಸ್ ಹಾಗೂ 10 ನೇ ತರಗತಿ ಪಾಸ್ ಹಾಗೂ ಫೇಲ್ ಆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ವಿಜಯಪುರ, ಆ್ಯಡ್ಮಿಶನ್ ಹೆಲ್ಪ್ ಡೆಸ್ಕ್ ಸಂಖ್ಯೆ: 9035434381, 9886437517, 9972682184, 9448986381 ಹಾಗೂ 08352-280360 ಸಂಪರ್ಕಿಸಬಹುದಾಗಿದೆ ಎಂದು ರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this