ಸಾರವಾಡ ಗ್ರಾಮಕ್ಕೆ ಕಡ್ಡಾಯವಾಗಿ ಬಸ್ ನಿಲುಗಡೆಗೆ ಆದೇಶ

ಸಪ್ತ ಸಾಗರ ವಾರ್ತೆ ವಿಜಯಪುರ, ಆ. 24:
ವಿಜಯಪುರ-ಬಬಲೇಶ್ವರ ಮಾರ್ಗದಲ್ಲಿ ಬರುವ ಸಾರವಾಡ ಗ್ರಾಮಕ್ಕೆ ಸಾಮಾನ್ಯ, ವೇಗದೂತ ಸಾರಿಗೆಗಳನ್ನು ಕಡ್ಡಾಯವಾಗಿ ನಿಲುಗಡೆ ನೀಡಿ ಕಾರ್ಯಾಚರಣೆ ಮಾಡುವ ಕುರಿತು ಮೇಲಾಧಿಕಾರಿಗಳು ಆದೇಶ ನೀಡಿದ್ದಾರೆ .
ಸಾರವಾಡ ಗ್ರಾಮ ಪಂಚಾಯತಿ ಅಧ್ಯಕ್ಷರ ಮನವಿ ಪತ್ರದ ಮೂಲಕ ಸಾರವಾಡ ಗ್ರಾಮಕ್ಕೆ ಸಾಮಾನ್ಯ ಹಾಗೂ ವೇಗದೂತ ಬಸ್ ಗಳ ನಿಲುಗಡೆ ಮಾಡುವಂತೆ ಮೇಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈಗಾಗಲೇ ಈ ಬಗ್ಗೆ ಮೇಲಾಧಿಕಾರಿಗಳು ಆದೇಶ ನೀಡಿದ್ದರೂ ಚಾಲಕರು ಹಾಗೂ ನಿರ್ವಾಹಕರು ಸಾರವಾಡ ಗ್ರಾಮಕ್ಕೆ ಬಸ್ ನಿಲುಗಡೆ ಮಾಡದೆ ಓಡಾಡುತ್ತಿರುವುದರಿಂದ ಸಾರವಾಡ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತೊಮ್ಮೆ ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಸಾರವಾಡ ಗ್ರಾಮಕ್ಕೆ ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳನ್ನು ಕಡ್ಡಾಯವಾಗಿ ನಿಲುಗಡೆ ಮಾಡಬೇಕೆಂದು ಮತ್ತೊಮ್ಮೆ ಮೇಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

Share