ಚೇತನಾ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳ ಅಮೋಘ ಸಾಧನೆ

ಸಪ್ತಸಾಗರ ವಾರ್ತೆ, ವಿಜಯಪುರ, ಆ.3:
ನಗರದ ಚೇತನಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಟೆಕ್ವಾಂಡೋ ಜಿ4 ನಲ್ಲಿ ಬೆಳ್ಳಿ ಪದಕ (ಎರಡನೇ ಸ್ಥಾನ) ಪಡೆದುಕೊಂಡು ಅಮೋಘ ಸಾಧನೆಯನ್ನು ಮಾಡಿದ್ದಾರೆ.
ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 42 ನೆಯ ರಾಜ್ಯ ಟೆಕ್ವಾಂಡೋ 2025 ರ ಪಂದ್ಯಾವಳಿಯಲ್ಲಿ ಭಾಗವಹಿಸಿ ನಗರದ ಚೇತನಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಕುಮಾರಿ ಪೂರ್ವಿ ಮಲ್ಲಿಕಾರ್ಜುನ ಮನಗೂಳಿ ಹಾಗೂ ಅಕುಲ್ ಮಲ್ಲಿಕಾರ್ಜುನ ಮನಗೂಳಿ ಭಾಗವಹಿಸಿ ಸಬ್ ಜೂನಿಯರ್ ಮತ್ತು ಕೆಡೆಟ್ ಕೆಟಗರಿಯಲ್ಲಿ ಸ್ಪರ್ಧೆ ಮಾಡಿ ದ್ವಿತೀಯ ಸ್ಥಾನ ಪಡೆದುಕೊಂಡು ಶಾಲೆಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ಜುಗತಿ, ಉಪಾಧ್ಯಕ್ಷ ರೋಹಿತ್ ಜುಗುತಿ, ನಿರ್ದೇಶಕ ನಾಗರಾಜ ಹೇರಲಗಿ, ಪ್ರಮೋದ ಕುಲಕರ್ಣಿ, ಮುಖ್ಯೋಪಾಧ್ಯಾಯ ಪ್ರೊ, ಎ. ಎಚ್. ಕೊಳಮಲಿ, ಸಿ. ಎಸ್. ವಾಲಿ, ಸಾಗರ ಕುಲಕರ್ಣಿ ಹರ್ಷ ವ್ಯಕ್ತಪಡಿಸಿದ್ದಾರೆ.

Share this