ಮೂರು ದಿನ ಬ್ಯಾಂಕ್ ಮುಷ್ಕರ: ಸೆ.28ರಂದು ವಿಜಯಪುರದಲ್ಲಿ ಬೃಹತ್ ರ್ಯಾಲಿ
ಐದು ದಿನಗಳ ಬ್ಯಾಂಕಿಂಗ್ ವಾರ ಜಾರಿಗೆ ಆಗ್ರಹ; 30 ತಿಂಗಳ ವಿಳಂಬಕ್ಕೆ ನೌಕರರ ಆಕ್ರೋಶ ಸಪ್ತಸಾಗರ ವಾರ್ತೆ,ವಿಜಯಪುರ, ಸೆ.27:ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳ ಬಹುಕಾಲದಿಂದ ಬಾಕಿ ಇರುವ ಬೇಡಿಕೆಗಳನ್ನು ಈಡೇರಿಸುವಂತೆ ಭಾರತೀಯ ಬ್ಯಾಂಕುಗಳ ಸಂಘ (IBA) ಹಾಗೂ ಕೇಂದ್ರ ಹಣಕಾಸು ಸಚಿವಾಲಯದ ಹಣಕಾಸು ಸೇವಾ ಇಲಾಖೆ (DFS/MoF) ಮೇಲೆ ಒತ್ತಡ ಹೇರಲು ಅಖಿಲ ಭಾರತ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳ ಸಂಘಟನೆಗಳ ನೇತೃತ್ವದಲ್ಲಿ ಸೆ.28, 29 ಮತ್ತು 30ರಂದು ಮೂರು ದಿನಗಳ ಬ್ಯಾಂಕ್ ಮುಷ್ಕರ ಹಮ್ಮಿಕೊಳ್ಳಲಾಗಿದೆ.ತಕ್ಷಣವೇ ಐದು…


