ಉಚಿತ ಆರೋಗ್ಯ ಶಿಬಿರ ಯಶಸ್ವಿ

ಸಪ್ತಸಾಗರ ವಾರ್ತೆ, ವಿಜಯಪುರ, ಆ. 4: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ) ಜಿಲ್ಲಾ ಯುವ ಘಟಕ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರ ಯಶಸ್ವಿಯಾಯಿತು.ಈ ಶಿಬಿರದಲ್ಲಿ ಕಣ್ಣು, ಕ್ಯಾನ್ಸರ್, ಬಿಪಿ, ಶುಗರ್, ಸಾಮಾನ್ಯ ಚಿಕಿತ್ಸೆ ಹಾಗೂ ಕಿವಿ ,ಮೂಗು, ಗಂಟಲು, ವಿವಿಧ ತಜ್ಞವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.130 ಜನರ ಕಣ್ಣಿನ ತಪಾಸಣೆ ನಡೆಸಲಾಯಿತು. ಈ ರೋಗಿಗಳ ಪೈಕಿ 14 ಜನರಿಗೆ ಉಚಿತವಾಗಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡುವುದಾಗಿ ಘೋಷಿಸಲಾಯಿತು.120 ಮಂದಿ ಬಿಪಿ, ಶುಗರ್, ಕ್ಯಾನ್ಸರ್,…

Read More

ಜಿಲ್ಲಾ ಮಟ್ಟದ ಯೋಗಾಸನ ಕ್ರೀಡಾಕೂಟ ಉದ್ಘಾಟನೆ

ಸಪ್ತಸಾಗರ ವಾರ್ತೆ, ವಿಜಯಪುರ,ಆ. 4:ವಿಜಯಪುರ ಜಿಲ್ಲಾ ಮಟ್ಟದ ಪ್ರಪ್ರಥಮ ಯೋಗಾಸನ ಕ್ರೀಡಾಕೂಟ ತಿಡಗುಂದಿ ಪತಂಜಲಿ ಯೋಗ ಕ್ರೀಡಾ ಮತ್ತು ಸಾಂಸ್ಕೃತಿಕ ಭವನದಲ್ಲಿ ಭಾನುವಾರ ನಡೆಯಿತು.ಸಸಿಗೆ ನೀರೆಯುವ ಮೂಲಕ ಕ್ರೀಡಾಕೂಟ ಉದ್ಘಾಟಿಸಲಾಯಿತು.ಅರಕೇರಿ ಐಆರ್ ಬಿ ಸಿಪಿಐ ಕಲ್ಲನಗೌಡ ಪಾಟೀಲ ಕ್ರೀಡಾಕೂಟ ಉದ್ಘಾಟಿಸಿದರು.ದಿವ್ಯ ಸಾನ್ನಿಧ್ಯವನ್ನು ಶಾಂತವ್ವ ಹರನಾಳ ವಹಿಸಿದ್ದರು.ತಿಡಗುಂದಿ ಕೆಜಿಎಸ್ ಎ ಅಧ್ಯಕ್ಷ ಬಸನಗೌಡ ಹರನಾಳ ಅಧ್ಯಕ್ಷತೆ ವಹಿಸಿದ್ದರು.ಆಡಳಿತಾಧಿಕಾರಿ ಕುಮಾರಗೌಡ ಹರನಾಳ, ಶ್ವೇತಾ ಹರನಾಳ, ಮುಖ್ಯ ಪರಿವೀಕ್ಷಕರಾಗಿ, ಮಲ್ಲಮ್ಮ ಭೋಜಣ್ಣವರ, ಬಸವರಾಜ ಬಾಗೇವಾಡಿ ಉತ್ನಾಳ, ಪುಷ್ಪಾವತಿ ಮೇಟಿ, ರಮೇಶ ಮಾದರ,…

Read More

ಚೇತನಾ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳ ಅಮೋಘ ಸಾಧನೆ

ಸಪ್ತಸಾಗರ ವಾರ್ತೆ, ವಿಜಯಪುರ, ಆ.3:ನಗರದ ಚೇತನಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಟೆಕ್ವಾಂಡೋ ಜಿ4 ನಲ್ಲಿ ಬೆಳ್ಳಿ ಪದಕ (ಎರಡನೇ ಸ್ಥಾನ) ಪಡೆದುಕೊಂಡು ಅಮೋಘ ಸಾಧನೆಯನ್ನು ಮಾಡಿದ್ದಾರೆ.ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 42 ನೆಯ ರಾಜ್ಯ ಟೆಕ್ವಾಂಡೋ 2025 ರ ಪಂದ್ಯಾವಳಿಯಲ್ಲಿ ಭಾಗವಹಿಸಿ ನಗರದ ಚೇತನಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಕುಮಾರಿ ಪೂರ್ವಿ ಮಲ್ಲಿಕಾರ್ಜುನ ಮನಗೂಳಿ ಹಾಗೂ ಅಕುಲ್ ಮಲ್ಲಿಕಾರ್ಜುನ ಮನಗೂಳಿ ಭಾಗವಹಿಸಿ ಸಬ್ ಜೂನಿಯರ್ ಮತ್ತು ಕೆಡೆಟ್ ಕೆಟಗರಿಯಲ್ಲಿ ಸ್ಪರ್ಧೆ…

Read More

ನಂಜನಗೂಡು ಮಠದಲ್ಲಿ ಆರಾಧನೆ ಪ್ರಯುಕ್ತ ಆ.೫ರಿಂದ ಪ್ರವಚನ

ಸಪ್ತಸಾಗರ ವಾರ್ತೆ,ವಿಜಯಪುರ,ಆ. 3: ಶ್ರೀ ಗುರುಸಾರ್ವಭೌಮರ ಆರಾಧನಾ ಮಹೋತ್ಸವದ ಪ್ರಯುಕ್ತ ಇಲ್ಲಿಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆಜ್ಞಾನುಸಾರ ಆ..೫ ರಿಂದ ೯ ರ ವರೆಗೆ ಶ್ರೀ ಗುರುರಾಯರ ಮಹಿಮೆ ಕುರಿತು ಪ್ರವಚನ ಹಮ್ಮಿಕೊಳ್ಳಲಾಗಿದೆ.ಪಂಡಿತ ಡಾ. ಕೃಷ್ಣಾಚಾರ್ಯ ಕಾಖಂಡಕಿ ಅವರು ಪ್ರತಿದಿನ ಸಂಜೆ ೬ ಗಂಟೆಯಿಂದ ೭ ಗಂಟೆ ವರೆಗೆ ಶ್ರೀಮಠದಲ್ಲಿ ಪ್ರವಚನ ಹೇಳಲಿದ್ದಾರೆ.ಸದ್ಭಕ್ತರು ಪ್ರವಚನದ ಲಾಭ ಪಡೆದುಕೊಳ್ಳುವಂತೆ ಶ್ರೀಮಠದ ವಿಚಾರಣಾಕರ್ತಾ ಗೋಪಾಲ ನಾಯಕ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

Read More

ಕನಕ ಪಬ್ಲಿಕ್ ಶಾಲೆಯಲ್ಲಿ ಸ್ನೇಹಿತರ ದಿನಾಚರಣೆ

ಸಪ್ತಸಾಗರ ವಾರ್ತೆ, ವಿಜಯಪುರ, ಆ.3: ಭಾರತದಲ್ಲಿ ಸ್ನೇಹಿತರ ದಿನಾಚರಣೆಯನ್ನು ಆಗಸ್ಟ್ ತಿಂಗಳ ಮೊದಲ ಭಾನುವಾರದೆಂದು ಆಚರಿಸಲಾಗುತ್ತದೆ, ಸ್ನೇಹ ಎಂಬುದು ಪದಗಳಿಗೆ ನಿಲುಕದೆ ಇರುವ ಸಂಬಂಧ, ನಂಬಿಕೆ ಮತ್ತು ವಿಶ್ವಾಸದ ಪ್ರತಿಕವೇ ಸ್ನೇಹ, ಜೀವಕ್ಕೆ ಜೀವ ಕೊಡುವ ಸ್ನೇಹ ಆದರ್ಶವಾದದ್ದು, ನಂಬಿದವರಿಗೆ ಮೋಸ ಮಾಡುವುದು ದ್ರೋಹ ಬಗೆಯುವವನು ಎಂದಿಗೂ ಸ್ನೇಹಿತನಾಗಲಾರ ಅವನು ಮಿತ್ರದ್ರೋಹಿ, ಅಂತ ಸ್ನೇಹ ನಮ್ಮದಾಗಬಾರದು. ಕೃಷ್ಣ ಕುಚಲ, ರಾಮ -ಸುಗ್ರಿ, ಕರ್ಣ ದುರ್ಯೋಧನರ ಸ್ನೇಹದಂತ ಶ್ರೇಷ್ಠ ಗೆಳೆತನ ಇದ್ದರೆ ಗೆಳೆತನಕ್ಕೊಂದು ಬೆಲೆ ಎಂದು ಸಾಹಿತಿ, ಪ್ರೊ….

Read More

ಜಮೀನುಗಳಿಗೆ ನೀರು, ಐತಿಹಾಸಿಕ ಕೆರೆಗಳಿಗೆ ಮರುಜೀವ: ಸುನೀಲಗೌಡ

ಸಪ್ತಸಾಗರ ವಾರ್ತೆ, ವಿಜಯಪುರ, ಆ.3:ನೀರಾವರಿ ಯೋಜನೆಗಳಿಂದ ಜಮೀನುಗಳಿಗೆ ನೀರುಣಿಸಿದ್ದು ಮಾತ್ರವಲ್ಲ ಐತಿಹಾಸಿಕ ಕೆರೆಗಳಿಗೂ ಮರುಜೀವ ನೀಡಲಾಗಿದೆ ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ತಿಳಿಸಿದ್ದಾರೆ.ಶನಿವಾರ ಮುಸ್ಸಂಜೆ ತಿಕೋಟಾ ತಾಲೂಕಿನ ರಾಂಪುರ ಗ್ರಾಮದಲ್ಲಿ ಎಪಿಎಂಸಿ ವತಿಯಿಂದ 2025-26ನೇ ವರ್ಷದ ವಾರ್ಷಿಕ ಕ್ರಿಯಾ ಯೋಜನೆ ಅಡಿಯಲ್ಲಿ ಮಂಜೂರಾದ ರೂ. 20.55 ಲಕ್ಷ ವೆಚ್ಚದ 150 ಎಂ. ಟಿ. ಸಾಮರ್ಥ್ತಯದ ಗೋದಾಮು ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಸಚಿವ ಎಂ. ಬಿ. ಪಾಟೀಲ ಅವರು ಅಸಾಧ್ಯವಾದ ಕೆಲಸವನ್ನು…

Read More

ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ:ಡಿಸಿ ಡಾ. ಆನಂದ್ ಸೂಚನೆ

ಸಪ್ತಸಾಗರ ವಾರ್ತೆ, ವಿಜಯಪುರ ಆ.2: ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಿ ವಿವಿಧ ಇಲಾಖೆಯಡಿ ಒದಗಿಸುವ ಯೋಜನೆಗಳ ಲಾಭವನ್ನು ಅರ್ಹ ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಒದಗಿಸಲು ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಶನಿವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಗಳ ಪರಿಶೀಲನಾ ಸಮಿತಿಯ ಪ್ರಥಮ ತ್ರೈಮಾಸಿಕ ಸಭೆ ಅಧ್ಯಕ್ಷತೆ ವಹಿಸಿದ್ದ ಅವರು, ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದಡಿ…

Read More

ಕೋರ್ಟ್ ತೀರ್ಪಿಗೆ ಎಲ್ಲರೂ ತಲೆಬಾಗಲೇಬೇಕು- ಮಂಜುಳಾ

ಸಪ್ತಸಾಗರ ವಾರ್ತೆ, ವಿಜಯಪುರ, ಆ. 2:ಕೋರ್ಟ್ ತೀರ್ಪಿಗೆ ಎಲ್ಲರೂ ತಲೆಬಾಗಲೇಬೇಕು ಎಂದು ರಾಜ್ಯ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಕುಮಾರಿ ಮಂಜುಳಾ ಹೇಳಿದರು.ಶನಿವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ಕೋರ್ಟ್ ತೀರ್ಪು ನೀಡಿರುವುದಕ್ಕೆ ಪ್ರತಿಕ್ರಿಯೆ ನೀಡಿದರು.ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಕುಮಾರಿ ಮಂಜುಳಾ ಹೇಳಿದರು. ಜನಪ್ರತಿನಿಧಿಗಳಾದವರಿಗೆ ಇಂಥ ನಡವಳಿಕೆ ಸರಿಯಲ್ಲ ಎಂದು ಖಂಡಿಸಿದರು. ಜನಪ್ರತಿನಿಧಿಗಳ ಇಂತಹ ನಡವಳಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಸಾರ್ವಜನಿಕವಾಗಿ ಬರುವ ಜನಪ್ರತಿನಿಧಿಗಳಿಗೆ ಸಚ್ಚಾರಿತ್ರ್ಯ ಬಹಳ ಮುಖ್ಯ ಎಂದರು.ಮಾಜಿ…

Read More

4 ನೇ ಎಸ್. ಎ. ಕೆ ಇಂಟರ್- ಸ್ಕೂಲ್ ಸ್ಕ್ವೇಶ್ ಕ್ರೀಡಾಕೂಟ

ಸಪ್ತಸಾಗರ ವಾರ್ತೆ, ವಿಜಯಪುರ, ಆ. 2:4ನೇ ಎಸ್. ಎ. ಕೆ ಇಂಟರ್ ಸ್ಕೂಲ್ ಸ್ಕ್ವೇಶ್ ಕ್ರೀಡಾಕೂಟ ಆ.15 ರಿಂದ 16ರವರೆಗೆ ಬೆಂಗಳೂರಿನ ದಯಾನಂದ ಸಾಗರ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿದೆ. ಸ್ಕೈಸ್ ಸಂಸ್ಥೆ ಮತ್ತು ಭಾರತೀಯ ರಾಕೆಟ್ ಸ್ಪೈಸ್ ಸಂಸ್ಥೆ ಮಾನ್ಯತೆ ಪಡೆದ ಸಂಸ್ಥೆಯಾಗಿದೆ. ಈ ಸ್ಪೈಸ್ ಕ್ರೀಡಾಕೂಟವು ಸಬ್- ಜೂನಿಯರ್, ಜ್ಯೂನಿಯರ್, ಬಾಲಕರು ಮತ್ತು ಬಾಲಕಿಯರ, ಮತ್ತು ಪುರುಷ ಹಾಗೂ ಮಹಿಳೆಯರ ಕ್ರೀಡಾಕೂಟ ನಡೆಯಲಿದೆ. ಭಾಗವಹಿಸುವವರು ಹೆಸರನ್ನು ನೋಂದಾಯಿಸಬಹುದು ಎಂದು ವಿಜಯಪುರ ಜಿಲ್ಲೆ ಸ್ಪೈಸ್ ಸಂಸ್ಥೆ, ಸಂಸ್ಥಾಪಕ…

Read More

ಮಾನವನ ಬಾಳು ಉಜ್ವಲಗೊಳ್ಳಲು ಅಧ್ಯಾತ್ಮ ಬೇಕು-ಚನ್ನಮಲ್ಲಿಕಾರ್ಜುನ ಶ್ರೀಗಳು

ಸಪ್ತಸಾಗರ ವಾರ್ತೆ ವಿಜಯಪುರ, ಆ. 2: ಜಗ ಬೆಳಗಲು ಸೂರ್ಯ, ಬದುಕು ಬೆಳಗಲು ಗುರು ಬೇಕು. ಭೌತಿಕ ಬದುಕನ್ನು ಬೆಳಗಲು ಅಧ್ಯಾತ್ಮ ಬೇಕು. ಅಂದಾಗ ಮಾನವನ ಬಾಳು ಉಜ್ವಲಗೊಳ್ಳಲಿದೆ ಎಂದು ಮ ಘ ಚ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಶ್ರಾವಣ ಮಾಸದ ನಿಮಿತ್ತ ಶುಕ್ರವಾರ ಸಂಜೆ ತಾಲೂಕಿನ ನಾಗಠಾಣ ಗ್ರಾಮದ ಉದಯಲಿಂಗೇಶ್ವರ ಹಿರೇಮಠದಲ್ಲಿ ನಡೆಯುತ್ತಿರುವ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಳ ಪುರಾಣದಲ್ಲಿ ತೊಟ್ಟಿಲು ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದರು.‘ನೈತಿಕ ಮೌಲ್ಯಗಳು ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಜನತೆಗೆ ಮಾನಸಿಕ ನೆಮ್ಮದಿ ಇಲ್ಲದಂತಾಗಿದೆ….

Read More