ಜೀವನದಲ್ಲಿ ಗುರಿ ಮುಖ್ಯ: ಸಾಧನೆಗೆ ಪರಿಶ್ರಮ ಅಗತ್ಯ-ಶಂಕರಗೌಡ ಸೋಮನಾಳ
ಸಪ್ತಸಾಗರ ವಾರ್ತೆ, ವಿಜಯಪುರ,ಆ.25:ಜೀವನದಲ್ಲಿ ಗುರಿ ಮುಖ್ಯ. ನಿಗದಿಪಡಿಸಿಕೊಂಡ ಗುರಿಯೊಂದಿಗೆ ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಪರಿಶ್ರಮ ಅಗತ್ಯ ಎಂದು ಮಹಿಳಾ ವಿಶ್ವ ವಿದ್ಯಾಲಯದ ರಜಿಸ್ಟ್ರಾರ್ ಶಂಕರಗೌಡ ಸೋಮನಾಳ ಅವರು ಹೇಳಿದರು.ಸೋಮವಾರ ಪರ್ಲ್ಸ್ ಕ್ಯಾಂಪಸ್‌ನಲ್ಲಿರುವಸರಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಇವರ ಸಹಯೋಗದೊಂದಿಗೆ ಪರಿಶಿಷ್ಟ ಪಂಗಡ ಉಪಯೋಜನೆಯಡಿಶಾಲಾ ವಿದ್ಯಾರ್ಥಿನಿಯರಿಗೆ ಆರು ತಿಂಗಳ ಕಾಲ ನೃತ್ಯಕಲಾ ತರಬೇತಿ ಶಿಬಿರದ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.ಎಲ್ಲರಲ್ಲೂ ಅಗಾಧವಾದ…


