ಜಿಐಎಸ್ ಆಧಾರಿತ ಮಹಾ ಯೋಜನೆ:ಸಾರ್ವಜನಿಕ ಸಲಹೆ ಸೂಚನೆಗಳಿಗೆ ಆಹ್ವಾನ
ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 18:ನಗರದ ಸ್ಥಳೀಯ ಯೋಜನಾ ಪ್ರದೇಶಕ್ಕೆ ಅಮೃತ ಯೋಜನೆಯಡಿ ಜಿ.ಐ.ಎಸ್ ಆಧಾರಿತ ಮಹಾ ಯೋಜನೆ-2041-(ಪ-3),ಸರಕಾರದ ಆದೇಶದಂತೆ ತಾತ್ಕಾಲಿಕ ಅನುಮೋದನೆಯಾಗಿದೆ.ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಕಲಂ 13(1) ರಂತೆ ಸಾರ್ವಜನಿಕರಿಂದ ಸಲಹೆ-ಸೂಚನೆ ಹಾಗೂ ಆಕ್ಷೇಪಣೆಗಳ ಸಲ್ಲಿಸುವ ಹಿನ್ನೆಲೆಯಲ್ಲಿ 16-01-2026 ರಂದು ಪ್ರಾಧಿಕಾರದ ಕಚೇರಿ, ಪತ್ರಿಕೆಗಳಲ್ಲಿ, ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಣೆ ಹೊರಡಿಸಲಾಗಿದೆ.ಈ ಕುರಿತಾಗಿ ನಗರದ ವೃತ್ತಿಪರ ಅಭಿಯಂತರರು, ವಾಸ್ತು ಶಿಲ್ಪಿಗಳು, ಕ್ರೇಡಾಯ್ ಹಾಗೂ ಇತರೆ ಸಂಸ್ಥೆಗಳೊಂದಿಗೆ ಪೂರ್ವಭಾವಿ ಸಭೆಯು…


