ನವೆಂಬರ್ ನಲ್ಲಿ ಕವಿಗೋಷ್ಠಿ: ಕವಿತೆಗಳಿಗೆ ಆಹ್ವಾನ
ಸಪ್ತಸಾಗರ ವಾರ್ತೆ ವಿಜಯಪುರ, ಅ. 13:ಕನ್ನಡ ಪುಸ್ತಕ ಪರಿಷತ್ತಿನ ವತಿಯಿಂದ ಐತಿಹಾಸಿಕ ನಗರ ವಿಜಯಪುರದಲ್ಲಿ ನವೆಂಬರ್ ತಿಂಗಳಲ್ಲಿ ನಡೆಯುವ ಕನ್ನಡ ಪುಸ್ತಕ ಪರಿಷತ್ತು ಸಮ್ಮೇಳನದಲ್ಲಿ ಈ ಬಾರಿ ಅರ್ಥಪೂರ್ಣವಾದ ವಿಶಿಷ್ಟ ರೀತಿಯ ಕವನ ವಾಚನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.ನಾಡಿನ ಕವಿಗಳು ತಮ್ಮ ಸ್ವ ರಚಿತ ಕವನ ವನ್ನು ಸ್ಪರ್ಧೆಯಲ್ಲಿ ವಾಚಿಸುವುದರ ಮೂಲಕ ಸಾವಿರದ ಬಹುಮಾನವನ್ನು ಗಿಟ್ಟಿಸಿಕೊಳ್ಳಬಹುದಾಗಿದೆ.ಕವನ ವಾಚನ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ಕವಿಗಳು ತಮ್ಮ ಒಂದು ಸ್ವ ರಚಿತ ಕವನವನ್ನು ಪ್ರೊ, ಎ.ಎಚ್. ಕೊಳಮಲಿ, ಮುಖ್ಯೋಪಾಧ್ಯಾಯರು ಚೇತನಾ ಆಂಗ್ಲ್…


