ಭಕ್ತಿಪ್ರಧಾನ ಚಲನಚಿತ್ರ ‘ಸಂಕೀರ್ತನ’ ಏ.೧೭ ಕ್ಕೆ ತೆರೆಗೆ
ಸಪ್ತಸಾಗರ ವಾರ್ತೆ,ಬೆಂಗಳೂರು, ಏ. 11 : ಕೆ. ಪದ್ಮಕಲಾ ಗುಂಡೂರಾವ್ ಅರ್ಪಿಸುವ ಸಾಫಲ್ಯ ಮೂವೀಸ್ ಅವರ ‘ಸಂಕೀರ್ತನ’ ಎಂಬ ಭಕ್ತಿಪ್ರಧಾನ ಚಲನಚಿತ್ರ ಏ.17 ರಂದು ತೆರೆಗೆ ಬರಲಿದೆ ಎಂದು ಚಿತ್ರ ನಿರ್ದೇಶಕ ಡಿ.ಎಸ್. ಮಂಜುನಾಥ್(ಕಲಾ ಗಂಗೋತ್ರಿ ಮಂಜು) ಹೇಳಿದರು.ದಾಸ ಶ್ರೇಷ್ಠರ ಮಹಿಮೆಯ ಕೀರ್ತನೆಗಳ ಸಂಗಮವೇ ‘ಸಂಕೀರ್ತನ’ ಚಿತ್ರ. ಕರ್ನಾಟಕದ ಸುವರ್ಣಯುಗ ಎನ್ನಲಾದ ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯರ ಕಾಲದಲ್ಲಿ ಅವತರಿಸಿದ ಯತಿ ಶ್ರೇಷ್ಠರ, ಕವಿ ಶ್ರೇಷ್ಠರ ಪರಸ್ಪರ ಸಮಾಗಮ, ಮಹಿಮಾ ಪ್ರದರ್ಶನ, ಕೀರ್ತನ ಗಾಯನದ ಅದ್ಭುತ ಚರಿತ್ರೆಯ ಕೆಲವು…


