ಗ್ಯಾಸ್ಟ್ರಿಕ್ ಸಮಸ್ಯೆ ಜಠರದ ಕ್ಯಾನ್ಸರ್ ಗೆ ಕಾರಣವಾಗಬಹುದು: ಡಾ. ಶ್ರೀಕಾಂತ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 28:ಅತಿಯಾದ ಆಮ್ಲೀಯತೆ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ಜಠರದ ಕ್ಯಾನ್ಸರ್ ಗೆ ಕಾರಣವಾಗಬಹುದು ಎಂದು ಹುಬ್ಬಳ್ಳಿ ಎಚ್.ಸಿ.ಜಿ ಕ್ಯಾನ್ಸರ್ ಆಸ್ಪತ್ರೆಯ ಸಂದರ್ಶಕ ತಜ್ಞವೈದ್ಯ ಡಾ. ಶ್ರೀಕಾಂತ ರವಿಚಂದ್ರನ್ ಹೇಳಿದ್ದಾರೆ.ಮಂಗಳವಾರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ. ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರ ಚಿಕಿತ್ಸೆ ವಿಭಾಗ ಆಯೋಜಿಸಿದ್ದ ಜಠರದ ಕ್ಯಾನ್ಸರ್ ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.40 ವರ್ಷ ದಾಟಿದ ವಯಸ್ಕರು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿರ್ಲಕ್ಷಿಸಬಾರದರು. ಔಷಧ ಅಂಗಡಿಗಳಲ್ಲಿ ಸ್ವಚಿಕಿತ್ಸೆಯನ್ನು ಪಡೆಯದೆ…

Read More

ಬಿ.ಎಲ್. ಡಿ. ಇ. ಫ. ಗು. ಹಳಕಟ್ಟಿ ಎಂಜಿನೀಯರಿಃಗ್ ಕಾಲೇಜಿಗೆ 28ನೇ ರ‍್ಯಾಂಕ್

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 28:‌ನಗರದ ಬಿ.ಎಲ್.ಡಿ.ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿಗೆ ದೇಶದ ಅತ್ಯುನ್ನತ 175 ಕಾಲೇಜುಗಳಲ್ಲಿ 28ನೇ ರ‍್ಯಾಂಕ್ ಲಭಿಸಿದೆ.ನ್ಯಾಷನಲ್ ಟೈಮ್ಸ್ ಎಂಜಿನಿಯರಿಂಗ್ ರ‍್ಯಾಂಕಿಂಗ್ ನಡೆಸಿದ ಸಮೀಕ್ಷೆಯಲ್ಲಿ ಈ ಸ್ಥಾನ ಸಿಕ್ಕಿದೆ. ಈ ಸಂಸ್ಥೆ ದೇಶದ ನಾನಾ ಎಂಜಿನಿಯರಿಂಗ್ ಕಾಲೇಜುಗಳ ಸಮೀಕ್ಷೆ ನಡೆಸಿದ್ದು, ಬಿ.ಎಲ್.ಡಿ.ಇ ಎಂಜಿನಿಯರಿಂಗ್ ಕಾಲೇಜು ನಾನಾ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದೆ.ಕಾಲೇಜಿನ ವಿದ್ಯಾರ್ಥಿಗಳಿಗೆ ಉದ್ಯೋಗ ವ್ಯವಸ್ಥೆ ಮಾಡುವಲ್ಲಿ ದೇಶದ ಉನ್ನತ 70 ಖಾಸಗಿ…

Read More

ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೋಮುವಾದಿಗಳ ವಿರುದ್ದ ನಿರಂತರ ಹೋರಾಟ: ಸಿದ್ದರಾಮಯ್ಯ

ಸಪ್ತಸಾಗರ ವಾರ್ತೆ, ಬೆಂಗಳೂರು, ಮೇ. 28:ಮುಖ್ಯಮಂತ್ರಿ ಸ್ಥಾನಕ್ಕೆ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಘೋಷಿಸಿದರು.ಮಧ್ಯಾಹ್ನ 2-30ಕ್ಕೆ ಲೋಕಭವನಕ್ಕೆ ತೆರಳಿದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ ರಾಜೀನಾಮೆ ಸಲ್ಲಿಸಿದ ಬಳಿಕ ಬೆಂಗಳೂರಿನ ಅವರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ನಾನು ಯಾರ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿಲ್ಲ. ಸ್ವಯಂಪ್ರೇರಿತನಾಗಿ ರಾಜೀನಾಮೆ ನೀಡಿದ್ದೇನೆ.ಹೈಕಮಾಂಡಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ ಎಂದರು.ವರಿಷ್ಠರಿಂದ ನನಗೆ ರಾಷ್ಟ್ರ ರಾಜಕಾರಣಕ್ಕೆ ಆಫರ್ ಬಂದಿದೆ. ವರಿಷ್ಠರು ರಾಜ್ಯಸಭಾಕ್ಕೆ ಬರಲು ಆಹ್ವಾನ ನೀಡಿದ್ದಾರೆ. ಆದರೆ ನನಗೆ ರಾಷ್ಟ್ರ…

Read More

ಪ್ರಾರ್ಥನೆ, ಧ್ಯಾನ, ಯೋಗ ದೈವತ್ವದ ಸಂಕೇತ- ವೀರಸಾಗರ ಮಹಾರಾಜರು

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 28 :ಧ್ಯಾನ, ಪ್ರಾರ್ಥನೆಯಿಂದ ದೊರೆಯುವ ಅಂತರಂಗದ ಬೆಳಕು ಅಗೋಚರವಾಗಿದ್ದು, ಪ್ರತಿಯೊಬ್ಬ ದಾರ್ಶನಿಕರು ಧ್ಯಾನದ ಪರಂಪರೆ ಗೌರವಿಸಿದ್ದಾರೆ. ಪ್ರಾರ್ಥನೆ, ಧ್ಯಾನ, ಯೋಗ ಇವೆಲ್ಲವೂ ದೈವತ್ವದ ಸಂಕೇತವಾಗಿವೆ ಎಂದು ವೀರಸಾಗರ ಮಹಾರಾಜರು ಅಭಿಪ್ರಾಯ ವ್ಯಕ್ತಪಡಿಸಿದರು.ನಗರದ ಹೊರವಲಯದ ಕೇಂದ್ರ ಕಾರಾಗೃಹದಲ್ಲಿ ಬುಧವಾರ ಕೈದಿಗಳಿಗೆ ಧ್ಯಾನ ಮತ್ತು ಯೋಗದ ಮಹತ್ವ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಧ್ಯಾನ ಯೋಗವು ಅಷ್ಟಾಂಗ ಯೋಗದ ಪ್ರಮುಖ ಹಂತವಾಗಿದೆ. ಇದು ಆಳವಾದ ಏಕಾಗ್ರತೆ ಮತ್ತು ಮನಸ್ಸಿನ ಶಾಂತಿಗೆ ದಾರಿಯಾಗಿದೆ. ಇದು ದೈನಂದಿನ ಒತ್ತಡವನ್ನು…

Read More

ಅಮೆರಿಕ ಯುನಿವರ್ಸಿಟಿ- ಬಿಎಲ್ಡಿಇ ಡೀಮ್ಡ್ ವಿವಿ ಜೊತೆಗೆ ಒಡಂಬಡಿಕೆ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 28:ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಮತ್ತು ಅಮೇರಿಕದ ಯುನಿವರ್ಸಿಟಿ ಆಫ್ ಇಲಿನಾಯಿಸ್ ಚಿಕ್ಯಾಗೊ ನಡುವೆ ಶೈಕ್ಷಣಿಕ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.ಕಳೆದ ಮಾರ್ಚ್ ತಿಂಗಳಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಅರುಣ ಚಂ. ಇನಾಮದಾರ ಅವರು ಅಮೇರಿಕಕ್ಕೆ ತೆರಳಿದ್ದರು. ಅಲ್ಲಿ ಇಲಿನಾಯಿಸ ವಿಶ್ವವಿದ್ಯಾಲಯ, ಚಿಕ್ಯಾಗೊ ಅಂತರಾಷ್ಟೀಯ ಆರೋಗ್ಯ ವಿಭಾಗದ ಅಸೋಶಿಯೇಟ ಡೀನ ಡಾ. ಪ್ರಭಾಕರ ಬೆಳ್ಳೂರ ಅವರೊಂದಿಗೆ ಈ ಒಡಂಬಡಿಕೆ ಕುರಿತು ಚರ್ಚಿಸಿದ್ದರು. ಈಗ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ಒಡಂಬಡಿಕೆಯಿಂದಾಗಿ ಎರಡೂ ವಿಶ್ವವಿದ್ಯಾಲಯಗಳು ಶೈಕ್ಷಣಿಕ…

Read More

ಪೆಟ್ರೋಲ್, ಡೀಸೆಲ್ , ಸಿ.ಎನ್.ಜಿ ಮತ್ತು ಎಲ್‌ಪಿಜಿ ದರ ಕಡಿತಕ್ಕೆ ಆಮ್ ಆದ್ಮಿಆಗ್ರಹ

ಸಪ್ತಸಾಗರ ವಾರ್ತೆ, ವಿಜಯಪುರ, ಮೇ. 27:ಪೆಟ್ರೋಲ್, ಡೀಸೆಲ್ , ಸಿ.ಎನ್.ಜಿ ಮತ್ತು ಎಲ್‌ಪಿಜಿ ದರಗಳ ಸತತ ಹೆಚ್ಚಳವನ್ನು ವಿಜಯಪುರ ಜಿಲ್ಲಾ ಆಮ್ ಆದ್ಮಿ ಪಾರ್ಟಿ ತೀವ್ರವಾಗಿ ಖಂಡಿಸಿ, ದರಗಳನ್ನು ತಕ್ಷಣ ಕಡಿತಗೊಳಿಸುವಂತೆ ಪ್ರಧಾನ ಮಂತ್ರಿಗಳಿಗೆ ಜಿಲ್ಲಾಧಿಕಾರಿ ಡಾ. ಆನಂದ ಮೂಲಕ ಮನವಿ ಮಾಡಿದೆ.ಆಮ್ ಆದ್ಮಿ ಪಾರ್ಟಿ ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ ಸೋಲಾಪುರ ಮಾಧ್ಯಮದವರೊಂದಿಗೆ ಮಾತನಾಡಿ, “ಈ ಅನಪೇಕ್ಷಿತ ಬೆಲೆ ಏರಿಕೆಯು ಸಾಮಾನ್ಯ ಜನರ ಜೀವನದ ಮೇಲೆ ಭಾರಿ ಹೊರೆಯನ್ನು ಹೇರಿದೆ ಎಂದು ಆಮ್ ಆದ್ಮಿ ಪಾರ್ಟಿ ಅಭಿಪ್ರಾಯಪಟ್ಟಿದೆ…

Read More

ಕಾಂಗ್ರೆಸ್ ಕಚೇರಿಯಲ್ಲಿ ಜವಾಹರ್ ಲಾಲ್ ನೆಹರು ಪುಣ್ಯತಿಥಿ

ಸಪ್ತಸಾಗರ ವಾರ್ತೆ, ವಿಜಯಪುರ, ಮೇ. 27:ಮಾಜಿ ಪ್ರಧಾನಿಗಳಾದ ಪಂಡಿತ ಜವಾಹರಲಾಲ ನೆಹರುವರ ಪುಣ್ಯ ತಿಥಿಯನ್ನು ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಮಾಲಾರ್ಪಣೆ, ಪುಷ್ಪಾರ್ಚನೆ ಮಾಡಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ ಮಾತನಾಡಿ, ನವಭಾರತ ನಿರ್ಮಾಣವನ್ನು ನಿರ್ಮಿಸಲು ಅಡಿಗಲ್ಲು ಹಾಕಿ, ದೇಶದ ಭದ್ರ ಬುನಾದಿಗಾಗಿ ಅಡಿಪಾಯ ಹಾಕಿದ ಸಾಕಾರ ಮೂರ್ತಿ, ಅನಕ್ಷರನ್ನು ಅಕ್ಷರಸ್ತರನ್ನಾಗಿ ಮಾಡಲು ಶಿಕ್ಷಣದ ವ್ಯವಸ್ಥೆಗೆ ಬಲವನ್ನು ನೀಡಲು ಭಾರತದಲ್ಲಿ ಹಲವಾರು, ಸಾವಿರಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಮುನ್ನುಡಿ ಬರೆದು ಸಾಕ್ಷರತೆಯಲ್ಲಿ ಮೈಲಿಗಲ್ಲು ನಿರ್ಮಾಣ…

Read More

ವಿಜಯಪುರ ಜಿಲ್ಲೆಗೆ ಕೇಂದ್ರದಿಂದ 153 ಕೋಟಿ ರೂ. ಮಂಜೂರು-ಸಂಸದ ರಮೇಶ ಜಿಗಜಿಣಗಿ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 27:ಕೇಂದ್ರ ಸರ್ಕಾರವು 2025-26ನೇ ಹಣಕಾಸು ವರ್ಷದಲ್ಲಿ ವಿಜಯಪುರಕ್ಕೆ ವಿವಿಧ ನಿರ್ಣಾಯಕ ಮೂಲಸೌಕರ್ಯ ಯೋಜನೆಗಳಿಗಾಗಿ ಆರ್ ಐಡಿ ನಬಾರ್ಡ್ ನಡಿ 153 ಕೋಟಿ ರೂ. ಮಂಜೂರು ಮಾಡಿದೆ ಎಂದು ಸಂಸದರಾರದ ರಮೇಶ ಜಿಗಜಿಣಗಿ ಅವರು ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, 2025-26ನೇ ಸಾಲಿನಲ್ಲಿ ವಿವಿಧ ಯೋಜನೆಗಳ ಅಭಿವೃದ್ಧಿಗಾಗಿ ಕಡಿಮೆ ವೆಚ್ಚದ ಸಾಲ ಸಹಾಯವಾಗಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಯಡಿ ವಿಜಯಪುರ ಜಿಲ್ಲೆಗೆ 153.5 ಕೋಟಿ…

Read More

ಆಧುನಿಕ ಭಾರತದ ನಿರ್ಮಾಣದಲ್ಲಿ ನೆಹರೂ ಅವರ ಪಾತ್ರ ದೊಡ್ದದು: ಸಿಎಂ ಸಿದ್ದರಾಮಯ್ಯ

ಸಪ್ತಸಾಗರ ವಾರ್ತೆ,ಬೆಂಗಳೂರು : ಮೇ -27:ಆಧುನಿಕ ಭಾರತದ ನಿರ್ಮಾಣದಲ್ಲಿ ನೆಹರೂ ಅವರ ಪಾತ್ರ ದೊಡ್ದದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.ಇಂದು ವಿಧಾನಸೌಧದ ಪೂರ್ವ ದಿಕ್ಕಿನಲ್ಲಿರುವ ಮಾಜಿ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರ ಪುಣ್ಯ ಸ್ಮರಣೆ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಿ ಮಾತನಾಡಿದರು. ದೇಶದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿದರು ನೆಹರೂ ಅವರು ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದ ಮೊದಲ ಪ್ರಧಾನಮಂತ್ರಿಗಳಾಗಿ 17 ವರ್ಷಗಳ ಕಾಲ ಜನರ ಸೇವೆ ಮಾಡಿದ್ದಾರೆ. ಸಮಾಜವಾದಿ ಮತ್ತು…

Read More

ಭೂಮಾಪಕರ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಶಾಸಕ ಯತ್ನಾಳ ಒತ್ತಾಯ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 26:ಭೂ ಮಾಪಕರ ಧರಣಿಯಿಂದ ಜಮೀನು ಸರ್ವೆ ವಿವಾದಗಳು ನಿರ್ಧಾರವಾಗದೆ, ರೈತರು ಸರ್ವೇ ಆಗದ ದಾಖಲಾತಿ ಪಡೆಯದ ಕಾರಣ ಅವರಿಗೆ ಬೆಳೆ ಸಾಲ ಸಿಗುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಹಿಂದೆ ಪ್ರತಿಪಕ್ಷ ನಾಯಕರಾಗಿದ್ದಾಗ ಭೂ ಮಾಪಕರ ಪರ ಧ್ವನಿ ಎತ್ತಿದ್ದರು. ಈಗ ‘ಜಾಣ ಕಿವುಡು’ ಪ್ರದರ್ಶಿಸುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಕಿಡಿಕಾರಿದ್ದಾರೆ.ಭೂಮಾಪಕರ ಧರಣಿಯಿಂದ ರೈತರಿಗೆ ಬೇಕಾದ ಅಗತ್ಯ ಸೇವೆ ಸಿಗದೇ ಪರದಾಡುತ್ತಿದ್ದು, ಇತ್ತ ಸರ್ಕಾರ ಅವರ ಸಮಸ್ಯೆಗಳನ್ನು ಆಲಿಸಲು ಯಾವುದೇ…

Read More