ದೆಹಲಿ ಪೊಲೀಸ್ ನೋಟೀಸ್ ಗೆ ಉತ್ತರಿಸಲು ಕಾಲಾವಕಾಶ ಕೇಳುವೆ: ಡಿಸಿಎಂ ಡಿ.ಕೆ. ಶಿವಕುಮಾರ

ಸಪ್ತಸಾಗರ ವಾರ್ತೆ ದೆಹಲಿ, ಡಿ.16:“ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ನೋಟೀಸ್ ಗೆ ಉತ್ತರ ನೀಡಲು ಕಾಲಾವಕಾಶ ಕೋರುವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿದರು.ದೆಹಲಿ ಪೊಲೀಸರ ನೋಟೀಸ್ ಗೆ ಉತ್ತರ ನೀಡುವ ಬಗ್ಗೆ ಕೇಳಿದಾಗ, “ಸೋಮವಾರ ದೆಹಲಿ ಪೊಲೀಸರಿಗೆ ಉತ್ತರ ನೀಡಲು ನಿರ್ಧರಿಸಿದ್ದೆ. ಆದರೆ ಶಾಮನೂರು ಶಿವಶಂಕರಪ್ಪ ಅವರ ನಿಧನದ ಹಿನ್ನೆಲೆಯಲ್ಲಿ ವಿಶೇಷ ವಿಮಾನದಲ್ಲಿ ದಾವಣಗೆರೆಗೆ ತೆರಳುತ್ತಿದ್ದು, ಅಧಿವೇಶನ ಮುಗಿದ ಬಳಿಕ ಉತ್ತರ…

Read More

ಶಾಸಕ ಯತ್ನಾಳ ಜನ್ಮದಿನ: ಬಡ ವಿದ್ಯಾರ್ಥಿಗೆ ರೂ.50 ಸಾವಿರ ನೆರವು

ಸಪ್ತ ಸಾಗರ ವಾರ್ತೆ ವಿಜಯಪುರ, ಡಿ. 15:ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಜನ್ಮ ದಿನದ ಅಂಗವಾಗಿ ಶನಿವಾರ ನಗರದ ಆರಾಧ್ಯದೈವ ಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬೆಂಗಳೂರಿನ ಆರ್.ವಿ.ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಎಂಜನಿಯರಿಂಗ್ ವಿದ್ಯಾರ್ಥಿಗೆ ರೂ. 50,000 ಆರ್ಥಿಕ ನೆರವು ನೀಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಯತ್ನಾಳ ಹುಟ್ಟು ಹಬ್ಬ ಆಚರಿಸಲಾಯಿತು. ಬೆಂಗಳೂರಿನ ಆರ್ ವಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ತಂದೆ ಇಲ್ಲದ ಬಡ ಯುವಕ ಗಿರೀಶ್ ಗೌಡರ ಎಂಬಾತನ ಕಾಲೇಜು…

Read More

ನೈಋತ್ಯ ರೈಲ್ವೆ ಟಿಕೆಟ್ ಪರಿಶೀಲನೆ ಪ್ರಕರಣಗಳು ಮತ್ತು ಗಳಿಕೆಯಲ್ಲಿ ಗಮನಾರ್ಹ ದಾಖಲೆ

ಸಪ್ತ ಸಾಗರ ವಾರ್ತೆ ಹುಬ್ಬಳ್ಳಿ, ಡಿ. 15:ನೈಋತ್ಯ ರೈಲ್ವೆ ತನ್ನ ವ್ಯಾಪ್ತಿಯಾದ್ಯಂತ ಟಿಕೆಟ್ ಪರಿಶೀಲನೆ ಮತ್ತು ನಿಯಮ ಜಾರಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ ಪರಿಣಾಮವಾಗಿ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಟಿಕೆಟ್ ರಹಿತ ಮತ್ತು ಅಕ್ರಮ ಪ್ರಯಾಣ ಪ್ರಕರಣಗಳು ಗಣನೀಯವಾಗಿ ಪತ್ತೆಯಾಗಿದ್ದು, ರೈಲ್ವೆಗೆ ಆದಾಯದಲ್ಲಿ ಭಾರೀ ಹೆಚ್ಚಳವಾಗಿದೆ.2025-26ರ ಪ್ರಸಕ್ತ ಆರ್ಥಿಕ ವರ್ಷದ ನವೆಂಬರ್ ತಿಂಗಳಿನಲ್ಲಿ (2025) ಒಟ್ಟು 67,000 ಟಿಕೆಟ್ ತಪಾಸಣಾ ಪ್ರಕರಣಗಳನ್ನು ನೈಋತ್ಯ ರೈಲ್ವೆ ದಾಖಲಿಸಿದ್ದು, ಇದರಿಂದ ಬರೋಬ್ಬರಿ 5.36 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಕಳೆದ ವರ್ಷದ…

Read More

ಕಲಿತ ಸರ್ಕಾರಿ ಶಾಲೆಗೆ ಅಪರ ಜಿಲ್ಲಾಧಿಕಾರಿ ₹ 50 ಸಾವಿರ ದೇಣಿಗೆ

ಸಪ್ತಸಾಗರ ವಾರ್ತೆ ಬಬಲೇಶ್ವರ, ಡಿ. 15: ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು ತಾವು ಕಲಿತ ಬಬಲೇಶ್ವರ ತಾಲ್ಲೂಕಿನ ದೇವರಗೆಣ್ಣೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭಾನುವಾರ ₹ 50 ಸಾವಿರ ದೇಣಿಗೆ ಚೆಕ್ ನೀಡಿದ್ದಾರೆ.ಶಾಲೆಯ ಮುಖ್ಯಗುರುಗಳು ಹಾಗೂ ಎಸ್ಡಿಎಂಸಿ ಜಂಟಿ ಖಾತೆಗೆ ಸ್ಥಿರ ಠೇವಣಿಯಾಗಿ (ಎಫ್ ಡಿ) ಇಡಲು ಮುಖ್ಯಗುರುಗಳು ಹಾಗೂ ಶಾಲಾ ಎಸ್ಡಿಎಂಸಿ ಅಧ್ಯಕ್ಷರಿಗೆ ಚೆಕ್ ನೀಡಿದರು‌.ಶಾಲೆಯ ಜಂಟಿ ಖಾತೆಯಲ್ಲಿ ಇಟ್ಟ ಸ್ಥಿರ ಠೇವಣಿಯಿಂದ ಪ್ರತಿ ವರ್ಷ ಬರುವ ಬಡ್ಡಿ ಹಣವನ್ನು ಶಾಲೆಯ…

Read More

ಭಾರತ ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಮರು ಪರಾಮರ್ಶೆಗೆ ಮನವಿ

ಸಪ್ತಸಾಗರ ವಾರ್ತೆ ವಿಜಯಪುರ, ಡಿ. 15:ಕಳೆದ ಕೆಲವು ದಿನಗಳ ಹಿಂದೆ ಭಾರತ ಸರ್ವೋಚ್ಚ ನ್ಯಾಯಾಲಯವು ತಂದೆ ಪರಿಶಿಷ್ಟ ಜಾತಿ ಅಲ್ಲದಿದ್ದರೂ ತಾಯಿ ಪರಿಶಿಷ್ಟ ಜಾತಿ ಸೇರಿದ್ದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಒದಗಿಸಬೇಕೆಂದು ಆದೇಶ ನೀಡಿದ್ದನ್ನು ಸುಪ್ರೀಂ ಕೋರ್ಟ್ ಮತ್ತೆ ಪರಾಮರ್ಶಿಸಬೇಕು ಎಂದು ಭೀಮ ಸರಕಾರ ಸಂಘಟನೆ ಮನವಿ ಸಲ್ಲಿಸಿದೆ.ಈ ತೀರ್ಪಿನಿಂದ ನಿಜ ಪರಿಶಿಷ್ಟ ಜಾತಿ ಜನರಿಗೆ ಅನ್ಯಾಯಾಗುತ್ತದೆ. ಜೊತೆಗೆ ಸರ್ವೋಚ್ಛ ನ್ಯಾಯಾಲಯದ ಆದೇಶ ದುರುಪಯೋಗ ಆಗುವ ಸಾಧ್ಯತೆ ಇದ್ದು, ಈ ನ್ಯಾಯಾಲಯದ ಆದೇಶವನ್ನು…

Read More

ವಿದ್ಯೆ ಎಂಬುದು ಅಭ್ಯಾಸ ಮಾಡುವವನ ಕೈವಶವಾಗುತ್ತದೆ-ಐಹೊಳ್ಳಿ

ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 15:ಜೀವನದಲ್ಲಿ ಯಾರು ಸಾಧನೆ ಮಾಡಬೇಕೆಂದು ಬಯಸಿ ಅಭ್ಯಾಸವನ್ನು ಮಾಡುತ್ತಾರೋ ಅವರ ಸಾಧನೆಗೆ ವಿದ್ಯೆಯ ಫಲಗಳು ಬರುತ್ತವೆ. ಶಿವಯೋಗಿ ಸಿದ್ದರಾಮರು ಇದನ್ನು ತಮ್ಮ ವಚನದಲ್ಲಿ ಪ್ರಸ್ತಾಪಿಸಿದ್ದಾರೆ. ಅವಿದ್ಯೆ ಹೋಗಲಾಡಿಸಲು ನಾವೆಲ್ಲ ಸಾಧನಾಶೀಲರಾಗಿ ಸಾಧಿಸಬೇಕೆಂದು ಫ .ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಸಂಯೋಜನಾಧಿಕಾರಿ ಡಾ.ವ್ಹಿ.ಡಿ. ಐಹೊಳ್ಳಿ ಇಂದಿಲ್ಲಿ ಅಭಿಪ್ರಾಯ ಪಟ್ಟರು. ನಗರದ ಆಶ್ರಮ ರಸ್ತೆಯ ಐಶ್ವರ್ಯ ಬಡಾವಣೆಯ ವರದಾಂಜನೇಯ ದೇವಸ್ಥಾನದಲ್ಲಿ ಹಮ್ಮಿಕೊಂಡ 549ನೇ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.ವಾಚಿಸಿ ಅನುಭವಿ…

Read More

ಉತ್ತರ ಕರ್ನಾಟಕ ರೈಲ್ವೆ ಸಂಪರ್ಕ ಹಾಗೂ ಅಭಿವೃದ್ಧಿ ಕುರಿತು ಕೇಂದ್ರ ರೇಲ್ವೆ ಸಚಿವರ ಜೊತೆಗೆ ಚರ್ಚೆ

ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 15:ಉತ್ತರ ಕರ್ನಾಟಕ ಭಾಗದ ರೈಲ್ವೆ ಸಂಪರ್ಕ ಹಾಗೂ ಅಭಿವೃದ್ಧಿ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಜೊತೆಗೆ ರಾಜ್ಯದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದರಾದ ರಮೇಶ ಜಿಗಜಿಣಗಿ ಹಾಗೂ ಪಿ.ಸಿ. ಗದ್ದಿಗೌಡರ ಅವರು ಸೋಮವಾರ ಸಂಸತ್ ಭವನದಲ್ಲಿ ಭೇಟಿಯಾಗಿ ಚರ್ಚಿಸಿದರು.ಉತ್ತರ ಕರ್ನಾಟಕ ಭಾಗದಲ್ಲಿ ರೈಲ್ವೆ ಸಂಪರ್ಕ ಹಾಗೂ ಅಭಿವೃದ್ಧಿಯ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಈ ಕುರಿತು…

Read More

ಡಿ. 19ರಂದು ಬಿಎಲ್ ಡಿಇ ಡೀಮ್ಡ್ ವಿವಿ ಘಟಿಕೋತ್ಸವ

ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 15: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವ ಡಿಸೆಂಬರ್ 19 ಶುಕ್ರವಾರ ವಿವಿಯ ಗ್ರಂಥಾಲಯ ಸಭಾಂಗಣದಲ್ಲಿ ನಡೆಯಲಿದೆ.ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಈ ಘಟಿಕೋತ್ಸವದಲ್ಲಿ ನವದೆಹಲಿ ರಾಷ್ಟ್ರೀಯ ವೈದ್ಯಕೀಯ ಆಯೋಗದ ವೈದ್ಯಕೀಯ ಮೌಲ್ಯಮಾಪನ ಮತ್ತು ಶ್ರೇಯಾಂಕ ಮಂಡಳಿಯ ಅಧ್ಯಕ್ಷ ಡಾ. ಎಂ. ಕೆ. ರಮೇಶ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ…

Read More

ಶಾಮನೂರ ನಿಧನಕ್ಕೆ ಸಚಿವ ಎಂ. ಬಿ. ಪಾಟೀಲ ಕಂಬನಿ

ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 14: ಮಾಜಿ ಸಚಿವರು, ಶಾಸಕರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಶ್ರೀ ಶಾಮನೂರು ಶಿವಶಂಕರಪ್ಪ ಅವರ ನಿಧನದ ಸುದ್ದಿ ತಿಳಿದು ಅತೀವ ದುಃಖವಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಸಂತಾಪ ಸೂಚಿಸಿದ್ದಾರೆ.ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದೆ. ಸಾರ್ವಜನಿಕ ಜೀವನದಲ್ಲಿ ಅವರ ಸೇವೆ, ಸಂಘಟನೆಗೆ ನೀಡಿದ ನಾಯಕತ್ವ ಮತ್ತು…

Read More

ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನ

ಸಪ್ತಸಾಗರ ವಾರ್ತೆ, ದಾವಣಗೆರೆ, ಡಿ. 14: ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾ ಸಭೆಯ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ (94) ನಿಧನ ಹೊಂದಿದ್ದಾರೆ.ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಶಾಮನೂರು ಶಿವಶಂಕರಪ್ಪ ಅವರನ್ನು ಹಲವು ದಿನಗಳಿಂದ ಬೆಂಗಳೂರಿನ ಸ್ಪರ್ಶ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲ ನೀಡದೆ ಅವರು ಡಿ. 14ರ ಸಂಜೆ ಸಾವನಪ್ಪಿದ್ದಾರೆ.ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

Read More