ಫೆ. 18ರಂದು ವಿಜಯಪುರ ಜಿಲ್ಲಾ ಸೌಹಾರ್ದ ಸಹಕಾರಿಗಳ ಸಮಾವೇಶ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 15:ಫೆ. 18ರಂದು ಬೆಳಗ್ಗೆ 10-30ಕ್ಕೆ ಸೌಹಾರ್ದ ಸಹಕಾರಿಗಳ ಸಮಾವೇಶ ನಗರದ ಎಂಜಿನಿಯರಿಂಗ್ ಕಾಲೇಜ ಎದುರುಗಡೆಆನಂದ ನಗರ ಬಡಾವಣೆಯ ಭಾವಸಾರ ಕ್ಷತ್ರಿಯ ಸಭಾ ಭವನದಲ್ಲಿ ನಡೆಯಲಿದೆ.ಈ ಸಹಕಾರಿ ಸಮಾವೇಶದ ದಿವ್ಯ ಸಾನ್ನಿಧ್ಯವನ್ನು ಷಣ್ಮುಖಾರೂಡ ಮಠ ವಿಜಯಪುರ ಮತ್ತು ಹುಬ್ಬಳ್ಳಿಯ ಶಾಂತಾಶ್ರಮದ ಪರಮಪೂಜ್ಯರಾದ ಶ್ರೀ ಅಭಿನವ ಸಿದ್ಧಾರೂಢ ಸ್ವಾಮಿಗಳು ವಹಿಸಲಿದ್ದಾರೆ.ಹಿರಿಯ ಸಹಕಾರಿಗಳು ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ,ಸಂಸದ ರಮೇಶ ಜಿಗಜಿಣಗಿ, ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸಲಿದ್ದಾರೆ.ಹಿರಿಯ ಮಾರ್ಗದರ್ಶಕರುಗಳಾದ…

Read More

ಕಾಡಿ ಪಡೆದ ಪ್ರಶಸ್ತಿಗೆ ಬೆಲೆಯಿಲ್ಲ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 15:ಪ್ರಶಸ್ತಿ ಪುರಸ್ಕಾರಗಳು ಸುಮ್ಮನೆ ಬರುವುದಿಲ್ಲ. ಅವು ಸಮಾಜದ ಹಿತಕ್ಕಾಗಿ ಮತ್ತು ಅಭಿವೃದ್ಧಿಗಾಗಿ ಶ್ರಮ ವಹಿಸುವ, ತ್ಯಾಗ ಮಾಡುವ ಹಾಗೂ ಸೇವೆಗೈಯುವ ವ್ಯಕ್ತಿಯ ಸಾಧನೆಯನ್ನು ಹುಡುಕಿಕೊಂಡು ಬಂದು ಕೊರಳನ್ನಲಂಕರಿಸಬೇಕು. ಅಂದಾಗ ಮಾತ್ರ ಆತ್ಮ ತೃಪ್ತಿ ಸಿಗುತ್ತದೆ. ಕಾಡಿ ಪಡೆದ ಪ್ರಶಸ್ತಿಗಳಿಗೆ ಬೆಲೆಯಿಲ್ಲವೆಂದು ಗಡಿನಾಡ ಪ್ರಾಧಿಕಾರ ಪ್ರಶಸ್ತಿ ಪುರಸ್ಕೃತ ನಾಗೇಶ ಆರ್.ಕುಲಕರ್ಣಿ ಅವರು ಹೇಳಿದರು.ಡಾ.ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಪ್ರೊ.ಅರವಿಂದ ಕಂಚ್ಯಾಣಿಯವರ “ವ್ಯಕ್ತಿ ಚಿತ್ರಗಳು” ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.ಡಾ. ಮಲ್ಲಿಕಾರ್ಜುನ ಮೇತ್ರಿ ಅವರು ಗ್ರಂಥ…

Read More

ಕಾಂಗ್ರೆಸ್ ದಿವಾಳಿತನಕ್ಕೆ ಬಿಜೆಪಿಯಿಂದ ವಿಶೇಷ ಕರಪತ್ರ ವಿತರಣೆಗೆ ಚಾಲನೆ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 14 :ರಾಜ್ಯದಲ್ಲಿರುವ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಪೂರೈಸಿದ ಸಾವಿರ ದಿನವನ್ನು ವೈಫಲ್ಯ ಹಾಗೂ ಹಗರಣಗಳಿಂದಲೇ ಪೂರ್ಣಗೊಳಿಸಿದ್ದು ಸರ್ಕಾರದ ವೈಫಲ್ಯ ಪ್ರತಿಬಿಂಬಿಸಲು ಬಿಜೆಪಿ ವಿಶೇಷವಾದ ಕರಪತ್ರ ರಚಿಸಿದ್ದು, ಈ ಫೋಸ್ಟರ್‌ಗಳನ್ನು ಶಿವಾಜಿ ವೃತ್ತದಲ್ಲಿ ಸರ್ಕಾರಿ ಬಸ್ಸುಗಳಿಗೆ ಅಂಟಿಸುವ ಅಭಿಯಾನ ನಡೆಯಿತು.ಈ ಅಭಿಯಾನಕ್ಕೆ ಚಾಲನೆ ನೀಡಿದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ರಾಜ್ಯ ಸರ್ಕಾರ ಹಗರಣದಲ್ಲಿಯೇ ಕಾಲಹರಣ ಮಾಡುತ್ತಿದೆ, ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡುತ್ತಿಲ್ಲ, ಅನೇಕ ಯೋಜನೆಗಳ ಹಣವನ್ನು ಗ್ಯಾರಂಟಿಗಳಿಗೆ ಬಳಕೆ ಮಾಡಿ…

Read More

ರಾಜ್ಯ ಸರ್ಕಾರ ಕೇಂದ್ರದ ಅನುದಾನ ಬಳಕೆ ಮಾಡುತ್ತಿಲ್ಲ:ಜಿಗಜಿಣಗಿ ಟೀಕೆ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 14:ರಾಜ್ಯ ಸರ್ಕಾರ ಕೇಂದ್ರದ ಅನುದಾನವನ್ನು ಉಪಯೋಗ ಮಾಡಿಕೊಳ್ಳುತ್ತಿಲ್ಲ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ರಾಜ್ಯ ಸರಕಾರವನ್ನು ಟೀಕಿಸಿದರು.ಕಾಂಗ್ರೆಸ್ ಸರ್ಕಾರಕ್ಕೆ ಸಾವಿರ ದಿನ ಪೂರೈಕೆ ಹಿನ್ನಲೆ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದರು.45 ವರ್ಷಗಳಿಂದ ರಾಜಕಾರಣ ನೋಡಿಕೊಂಡು ಬಂದಿದ್ದೇನೆ.ಇಂಥ ಸರ್ಕಾರವನ್ನು ಎಂದೂ ಕಂಡಿಲ್ಲ. ಇದು ಹೊಲಸು ಸರ್ಕಾರ.ಬೆಳಿಗ್ಗೆ ಮುಸ್ಲಿಂ ಮಧ್ಯಾಹ್ನ ದಲಿತರು, ಸಾಯಂಕಾಲ ಓಬಿಸಿ ಹೆಸರು ಹೇಳುತ್ತೀರಿ.ಇವಷ್ಟೇ ಸಮದಾಯಗಳಿಂದ ಮಾತ್ರ ಸರ್ಕಾರ ಆಗುತ್ತಾ? ಬೇರೆ ಸಮಾಜಗಳು ಬೇಡವೇ ಎಂದು ಸಂಸದ ಪ್ರಶ್ನಿಸಿದರು.ಮುಂದಿನ ದಿನಗಳಲ್ಲಿ…

Read More

ರಾಜ್ಯದಲ್ಲಿ ದಲಿತ ವ್ಯಕ್ತಿ ಸಿಎಂ ಆಗಬೇಕೆಂಬ ಧ್ವನಿ ನಿರಂತರವಾಗಿ ಎತ್ತುತ್ತೇನೆ- ಸಂಸದ ಜಿಗಜಿಣಗಿ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 14:ರಾಜ್ಯದಲ್ಲಿ ದಲಿತ ಸಮಾಜಕ್ಕೆ ಸೇರಿದ ವ್ಯಕ್ತಿ ಸಿಎಂ ಆಗಬೇಕು ಎಂಬ ವಿಚಾರದ ಬಗ್ಗೆ ನಾನು ಕೊನೆಯವರೆಗೂ ಧ್ವನಿ ಎತ್ತುತ್ತೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.ಶನಿವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ವಿಜಯೇಂದ್ರ ಸೇರಿದಂತೆ ಯಾರೇ ಸಿಎಂ ಆದರೂ ನನಗೆ ಅಸಮಾಧಾನವಿಲ್ಲ.ಆದರೆ ದಲಿತರು ಸಿಎಂ ಆಗಬೇಕೆಂಬ ಧ್ವನಿಯನ್ನು ಕೊನೆಯವರೆಗೂ ಎತ್ತುತ್ತೇನೆ ಎಂದರು.ನಾನೇ ಸಿಎಂ ಆಗಬೇಕೆಂಬುದಿಲ್ಲ. ಯಾರೇ ದಲಿತ ನಾಯಕ ಸಿಎಂ ಆಗಲಿ ಎಂಬುದು ನನ್ನ ಆಸೆ. ದಲಿತರನ್ನು ಸಿಎಂ ಮಾಡುತ್ತಾರೋ…

Read More

ಸುಪ್ರೀಂ ಕೋರ್ಟ್ ನ ಅಂಗಳದಲ್ಲಿಯೂ ಕಾಂಗ್ರೆಸ್ ಮುಖಂಡ ಮುಶ್ರೀಫ್ ಗೆ ಮುಖಭಂಗ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 14:ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ವಿಜಯಪುರ ನಗರ ಕ್ಷೇತ್ರದಲ್ಲಿ ಅಕ್ರಮ ಆರೋಪ ಮಾಡಿ ಕಲಬುರ್ಗಿ ಹೈಕೋರ್ಟ್ ಪೀಠದಲ್ಲಿ ಪ್ರಶ್ನೆ ಮಾಡಿದ್ದ ಮುಶ್ರೀಫ್ ಗೆ ಹೈಕೋರ್ಟ್ ಅರ್ಜಿ ವಜಾ ಮಾಡಿ ದಂಡ ವಿಧಿಸುವ ಮೂಲಕ ಕಾಂಗ್ರೆಸ್ ಮುಖಂಡ ಮುಶ್ರೀಫ್ ಮುಖಭಂಗಕ್ಕೆ ಒಳಗಾಗಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಸುಪ್ರೀಂ ಕೋರ್ಟ್ ಅವರ ಅರ್ಜಿ ವಜಾ ಮಾಡಿದ್ದು ಎರಡನೇ ಬಾರಿ ಮುಶ್ರೀಫ್ ಅವರು ಮುಖಭಂಗ ಅನುಭವಿಸುವಂತಾಗಿದೆ.ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದ…

Read More

ಜಿಲ್ಲಾ ಶುಶ್ರೂಷಾ ಅಧಿಕಾರಿಗಳ ಸಂಘದ ಕ್ಯಾಲೆಂಡರ್ ಬಿಡುಗಡೆ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 13:ಜಿಲ್ಲಾ ಶುಶ್ರೂಷಾ ಅಧಿಕಾರಿಗಳ ಸಂಘದಿಂದ ನೂತನ ಕ್ಯಾಲೆಂಡರ್ ಅನ್ನು ಶುಕ್ರವಾರ ಬಿಡುಗಡೆ ಮಾಡಲಾಯಿತು. ಜಿಲ್ಲಾ ಶುಶ್ರೂಷಾ ಅಧಿಕಾರಿಗಳ ಸಂಘದ ಅಧ್ಯಕ್ಷ ಸುರೇಂದ್ರ ಮಾನಕರ ಮಾತನಾಡಿ, ಇದು ಕೇವಲ ದಿನಾಂಕ ತೋರಿಸುವ ಕ್ಯಾಲೆಂಡರ್ ಅಲ್ಲ. ಇದು ಸೇವೆ, ತ್ಯಾಗ, ಮಾನವವೀಯತೆ ಮತ್ತು ವೃತ್ತಿಪರ ನಿಷ್ಠೆಯ ಪ್ರತಿಬಿಂಬ ಎಂದು ಕ್ಯಾಲೆಂಡರ್ ಬಗ್ಗೆ ವಿವರಿಸಿದರು. ಮುಖ್ಯ ಅತಿಥಿಯಾದ ಡಾ ಸಂದೀಪ ಸಜ್ಜನ ಶುಶ್ರೂಷಾ ಅಧಿಕಾರಿಗಳ ವೃತ್ತಿ ಸ್ಮರಿಸಿದರು.ಸಮಾರಂಭದ ಅಧ್ಯಕ್ಷ ಡಾ. ಶಿವಾನಂದ ಮಾಸ್ತಿಹೊಳಿ, ಶುಶ್ರೂಷಾ ಅಧಿಕಾರಿಗಳು…

Read More

ಬಿಎಲ್ ಡಿಇ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಯಶಸ್ವಿ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 13:ಬಸವ ನಾಡಿನ ಪ್ರತಿಷ್ಠಿತ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಇದೇ ಪ್ರಪ್ರಥಮ ಬಾರಿಗೆ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾಂಗ ದಾನ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು.ವಿಜಯಪುರ ನಗರದ ಶಹಾಪುರ ಅಗಸಿಯ ನಿವಾಸಿ ಬಲರಾಮ ಕೃಷ್ಣ ಬಾಗಲಕೋಟ(30) ಫೆಬ್ರುವರಿ 9 ರಂದು ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಬಿ.ಎಲ್.ಡಿ.ಇ ಆಸ್ಪತ್ರೆಯ ತುರ್ತು ಚಿಕಿತ್ಸೆ ಘಟಕದಲ್ಲಿ ದಾಖಲಾಗಿದ್ದರು. ಈ ವೇಳೆ ತಪಾಸಣೆ ನಡೆಸಿದ ವೈದ್ಯರು ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಯುವಕನ ಸಂಬಂಧಿಕರಿಗೆ ತಿಳಿಸಿದರು.ಅಲ್ಲದೇ, ಅವರ ಸಹೋದರಿಯರಾದ ಶೃತಿ ಹಳ್ಳದಮನಿ,…

Read More

ಗ್ರ್ಯಾರಂಟಿ ಯೋಜನೆಗಳ ಸೌಲಭ್ಯ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸಿ -ಎಸ್.ಆರ್.ಪಾಟೀಲ ಕರೆ

ಸಪ್ತಸಾಗರ ವಾರ್ತೆ, ವಿಜಯಪುರ,ಫೆ.13:ಬಡವರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಹಾಗೂ ಅವರು ಸ್ವಾವಲಂಬಿಯಾಗಿ ಜೀವನ ನಡೆಸಲು ಪಂಚ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿದ್ದು, ಈ ಪಂಚ ಗ್ಯಾರಂಟಿ ಯೋಜನೆಯ ಸೌಲಭ್ಯವನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಲಭಿಸುವಂತೆ ನೋಡಿಕೊಂಡು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಲಾಭ ಜನರಿಗೆ ತಲುಪಿಸಿ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್.ಪಾಟೀಲ (ಬ್ಯಾಡಗಿ) ಸೂಚಿಸಿದರು. ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ಪಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ…

Read More

ಸೇವಾಲಾಲರ ಮಾಲೆ ವಿಸರ್ಜನೆಯೂ ನಂತರವೂ ಭಕ್ತಿ ಮುಂದುವರಿಯಲಿ – ಡಾ. ಬಾಬುರಾಜೇಂದ್ರ ನಾಯಿಕ ಅಭಿಮತ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 13:ಆದರ್ಶ ನಗರದ ಸೇವಾಲಾಲ ದೇವಸ್ಥಾನದಲ್ಲಿ ಸಂತ ಶ್ರೀ ಸೇವಾಲಾಲ ಮಾಲಾಧಾರಿಗಳ ವತಿಯಿಂದ ಸೇವಾಲಾಲರ 287 ನೇ ಜಯಂತಿ ಅಂಗವಾಗಿ ಮಹಾಭೋಗ ಮತ್ತು ದೀಪೋತ್ಸವ ಕಾರ್ಯಕ್ರಮ ಜರುಗಿತು.ಈ ಸಂದರ್ಭದಲ್ಲಿ ಡಾ.ಬಾಬುರಾಜೇಂದ್ರ ನಾಯಿಕ ಸತತವಾಗಿ ಆರು ವರ್ಷಗಳಿಂದ ನಡೆಯುತ್ತಿರುವ ವಿಜಯಪುರ ಜಿಲ್ಲೆ ಮಾಲಾ ಅಭಿಯಾನಕ್ಕೆ ವ್ಯಾಪಕವಾದ ಸ್ಪಂದನೆ ಸಿಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಮಾಲಾಧಾರಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಕೇವಲ 30 ಜನರಿಂದ ಆರಂಭವಾದ ಈ ಮಾಲಾ ಅಭಿಯಾನ ಈ ವರ್ಷ ಸಾವಿರಾರು ಜನ ಸೇವಾಲಾಲರ ಮಾಲೆ…

Read More