ಮೇ .14ರಂದು ಫೋನ್-ಇನ್ ಕಾರ್ಯಕ್ರಮ

ಸಪ್ತಸಾಗರ ವಾರ್ತೆ ವಿಜಯಪುರ,ಮೇ.8:ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಮೂಲಕ ಪ್ರಯಾಣಿಕರ ಅನುಕೂಲಕ್ಕಾಗಿ ಅಹವಾಲು ಮತ್ತು ಕುಂದುಕೊರತೆಗಳನ್ನು ಆಲಿಸಲು ಮೇ 14ರಂದು ಮಧ್ಯಾಹ್ನ 3.30 ರಿಂದ 4.00ರವರೆಗೆ ಫೋನ್-ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ದೂರವಾಣಿ 6366423887 ಸಂಖ್ಯೆಗೆ ಸಾರ್ವಜನಿಕರು ಕರೆ ಮಾಡಿ, ತಮ್ಮ ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳಬಹುದಾಗಿದ್ದು, ಸಾರ್ವಜನಿಕರು ಫೋನ್-ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸದುಪಯೋಗ ಪಡೆದುಕೊಳ್ಳಬೇಕೆಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಎಲ್.ಇ.ಡಿ ದೀಪ ಅಳವಡಿಕೆ ಯೋಜನೆಯಿಂದ ಪಾಲಿಕೆ ಆರ್ಥಿಕ ಹೊರೆ ಇಳಿಕೆ: ಯತ್ನಾಳ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 7: ನಗರದಲ್ಲಿ ಹಾಲಿ ಇರುವ ಸಾಂಪ್ರದಾಯಿಕ ಬೀದಿ ದೀಪಗಳನ್ನು ಬದಲಾಯಿಸಿ ಕೇಂದ್ರಿಕೃತ ಚಾಲನೆ ಮತ್ತು ನಿರ್ವಹಣೆಯುಳ್ಳ ಇಂಧನ ಕ್ಷಮೆತೆಯ ಎಲ್.ಇ.ಡಿ ದೀಪಗಳನ್ನು ಅಳವಡಿಸುವ ಯೋಜನೆ ಶೀಘ್ರದಲ್ಲೇ ಅನುಷ್ಠಾನಗೊಳಿಸಲಾಗುವುದು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿಜಯಪುರ ನಗರದ ಸುಮಾರು 36.36 ಕೋಟಿ ಮೊತ್ತದ ಎಲ್.ಇ.ಡಿ ದೀಪಗಳ ಅಳವಡಿಕೆ ಯೋಜನೆ ಅನುಷ್ಠಾನಗೊಳಿಸಲು ಅನುಮೋದಿಸಿರುವುದಾಗಿ ಗುರುವಾರ ವಿಧಾನಸೌಧದಲ್ಲಿ ಜರುಗಿದ ಅರ್ಜಿಗಳ ಸಮಿತಿ ಸಭೆಗೆ ಹಾಜರಿದ್ದ…

Read More

9ನೇ T-10 ಓವರ ಆರ್ಮ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕಕ್ಕೆ ದ್ವಿತೀಯ ಸ್ಥಾನ

ಸಪ್ತಸಾಗರ ವಾರ್ತೆ, ವಿಜಯಪುರ, ಮೇ. 7:ಮೇ 4 ರಿಂದ 6ರವರೆಗೆ ಗೋವಾದ ಎಂ ಪಿ.ಟಿ ಮೈದಾನದಲ್ಲಿ ನಡೆದ 9ನೇ ಅಖಿಲ ಭಾರತೀಯ T -10 ಓವರ್ ಆರ್ಮ ಕ್ರಿಕೆಟ್ ಕ್ರೀಡಾಕೂಟದಲ್ಲಿ ಜೂನಿಯರ್ ಬಾಲಕರ ಕರ್ನಾಟಕ ತಂಡ ದ್ವಿತೀಯ ಸ್ಥಾನ ಪಡೆದು ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆಸುಶೀಲ್ ಬಿಶ್ವಕರ್ಮ( ನಾಯಕ), ಚಂದನ್ ಎಂ ನಾಯ್ಕ ( ಉಪನಾಯಕ ),ವೈಭವ ಅನಂತ್ ಶಾನಭಾಗ್, ರಾಜೇಶ್ ಮರಾಠಿ, ವಶಿಷ್ಟ ವಿ ನಾಯ್ಕ,ಪೃಥ್ವಿಶ್ ಎಸ್ ಬೇತಾಳಕರ್,ಧನುಷ್ ಆರ್ ನಾಯ್ಕ, ಪ್ರಣವ್ ಜಿ…

Read More

ಕಾಂಗ್ರೆಸ್ ಪಕ್ಷವೆಂಬುದು ಅನುಭವ ಮಂಟಪ:ಎಂಬಿಪಿ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 7:ಕಾಂಗ್ರೆಸ್ ಪಕ್ಷವೆಂಬುದು ಅನುಭವ ಮಂಟಪ. ಈ ಅನುಭವ ಮಂಟಪದಲ್ಲಿ ಎಲ್ಲ ಜಾತಿ-ಜನಾಂಗಗಳಿಗೆ ಸಮಸ್ಥಾನ. ಆ ಸಾಮಾಜಿಕ ಹಿನ್ನಲೆಯನ್ನು ಅನುಸರಿಸಿ ಬಹಳಷ್ಟು ಹಿಂದುಳಿದ ಸಮಾಜಗಳು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಈ ಕಾರ್ಯ ಮುಂದುವರೆದಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜಗಳು ಕಾಂಗ್ರೆಸ್ ಪಕ್ಷದ ತೆಕ್ಕೆಗೆ ಬರಲಿವೆ ಎಂದು ಕೈಗಾರಿಕೆ,‌ ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಗುರುವಾರ ವಿಜಯಪುರ ನಗರದ ಗೃಹ ಕಚೇರಿಯಲ್ಲಿ ತಿಕೋಟಾ ಪಟ್ಟಣದ ತಳವಾರ…

Read More

ಭಾಷೆಯು ಬದುಕಿನ ಅನುಭವದ ಜೀವಾಳ : ಚಿಂತಕ ಲಕ್ಷ್ಮೀಶ ತೋಳ್ಪಾಡಿ

ಸಪ್ತಸಾಗರ ವಾರ್ತೆ,ಬೆಳಗಾವಿ, ಮೇ. 7: ಭಾಷೆ ಎನ್ನುವುದು ಒಂದು ಜೀವಂತ ಪದಾರ್ಥ. ಅದು ನಮ್ಮ ಜೀವನದ ಪ್ರತಿ ಅನುಭವದ ಜೀವಾಳ, ಅದನ್ನು ಬಹಳ ಮುತುವರ್ಜಿಯಿಂದ ಮನಸ್ಸಿನಿಂದ ಬಳಸಬೇಕು. ತಾಂತ್ರಿಕವಾಗಿ ಭಾಷೆಯನ್ನು ಬಳಸುವುದರಿಂದ ಸೃಜನಶೀಲತೆ ಅರಳುವುದಿಲ್ಲ ಎಂದು ಸಂಸ್ಕೃತಿ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ಸಂಘ, ಕುವೆಂಪು ಸಭಾಭವನದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.“ಕನ್ನಡ ಸಾಹಿತ್ಯ: ಮೌಲ್ಯ” ವಿಷಯದ ಮೇಲೆ ಉಪನ್ಯಾಸ ನೀಡಿದ ಅವರು ಸಾಹಿತ್ಯ ಮತ್ತು ತತ್ವಜ್ಞಾನಕ್ಕೆ ಸಮಾನವಾದ ಸ್ಥಾನವಿದೆ….

Read More

ಮಕ್ಕಳು ದೇಶದ ಆಸ್ತಿ, ಅವರನ್ನು ಪ್ರೀತಿಯಿಂದ ಬೆಳೆಸಿ-ಮೇಜರ್ ಎಸ್.ಸಿ. ಆನಂದ

ಸಪ್ತಸಾಗರ ವಾರ್ತೆ ವಿಜಯಪುರ,ಮೇ. 7 : “ಮಕ್ಕಳನ್ನು ಕೇವಲ ಒಳ್ಳೆಯ ಶಾಲೆಗೆ ಸೇರಿಸಿದರೆ ಪಾಲಕರ ಜವಾಬ್ದಾರಿ ಮುಗಿಯುವುದಿಲ್ಲ. ಅವರ ದೈನಂದಿನ ಚಟುವಟಿಕೆಗಳನ್ನು ಗಮನಿಸಿ, ಅವರಲ್ಲಿ ನಾಗರಿಕ ಪ್ರಜ್ಞೆ ಹಾಗೂ ಸಂಸ್ಕಾರ ಬೆಳೆಸುವುದು ತಂದೆ-ತಾಯಂದಿರ ಆದ್ಯ ಕರ್ತವ್ಯವಾಗಿದೆ,” ಎಂದು ಮೇಜರ್ ಎಸ್ ಸಿ ಆನಂದ ಅಭಿಪ್ರಾಯಪಟ್ಟರು. ವಿಜಯಪುರ ಜಿಲ್ಲೆಯ ಕನ್ನೂರಿನ ಶಾಂತಿ ಕುಟೀರ ಆಶ್ರಮದಲ್ಲಿ, ಶಾಂತಿ ಕುಟೀರ ಟ್ರಸ್ಟ್ ಹಾಗೂ ಶ್ರೀಶೈಲೇಶ್ವರ ವಿದ್ಯಾಕೇಂದ್ರ ಸಂಡೂರು ಮತ್ತು ಭಾರತೀಯ ಸುರಾಜ್ಯ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಉಚಿತ ಶೈಕ್ಷಣಿಕ…

Read More

ರಾಜ್ಯದಲ್ಲಿ ಹೋರಾಟಕ್ಕೆ ಇನ್ನೊಂದು ಹೆಸರು ಯಡಿಯೂರಪ್ಪ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 6:ರಾಜ್ಯದಲ್ಲಿ ಹೋರಾಟಕ್ಕೆ ಇನ್ನೊಂದು ಹೆಸರು ಯಡಿಯೂರಪ್ಪ ಎಂದು ಜಮಖಂಡಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಅವರು ಮಾತನಾಡಿದರು.ಇಲ್ಲಿನ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.ರಾಜ್ಯದಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಿದಂಥ ಹುಟ್ಟು ಹೋರಾಟಗಾರ ಬಿ.ಎಸ್.ಯಡಿಯೂರಪ್ಪನವರ 50 ವರ್ಷದ ತಪಸ್ಸು ಹಾಗೂ ಪರಿಶ್ರಮಕ್ಕಾಗಿ ಚಿತ್ರದುರ್ಗದಲ್ಲಿ ಮೇ 9ರಂದು ನಡೆಯುವ ಅಭಿನಂದನಾ ಸಮಾರಂಭ ಶ್ಲಾಘನೀಯ. ಅವರು ನಮ್ಮಂಥ ನೂರಾರು ಕಾರ್ಯಕರ್ತರನ್ನು ಬೆಳೆಸಿದ್ದು. ಬಿಜೆಪಿ ಒಂದು ರಾಜಕೀಯ ಶಕ್ತಿಯಾಗಿ ಬೆಳೆಯಲು ಅವರು ಕಾರಣೀಭೂತರೆಂದು ಅವರು ಬಣ್ಣಿಸಿದರು.ಅಖಂಡ…

Read More

ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದಲ್ಲಿ ಬಬಲೇಶ್ವರ ಮತಕ್ಷೇತ್ರ ರಾಜ್ಯದಲ್ಲಿಯೇ ಮೊದಲ ಸ್ಥಾನ

ಸಪ್ತಸಾಗರ ವಾರ್ತೆ, ವಿಜಯಪುರ, ಮೇ. 6 : ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದಲ್ಲಿ ಬಬಲೇಶ್ವರ ಮತಕ್ಷೇತ್ರ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.‌ ಬಿ. ಪಾಟೀಲ ಹೇಳಿದ್ದಾರೆ.ಬುಧವಾರ ತಿಕೋಟಾ ತಾಲೂಕಿನ ಮಲಕನದೇವರಹಟ್ಟಿ‌ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ರೂ. 100 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸೋಮದೇವರಹಟ್ಟಿ- ಮಲಕನದೇವರಹಟ್ಟಿ ವರೆಗೆ ಮೂಲಸೌಕರ್ಯ ಅಭಿವೃದ್ಧಿ ಅನುದಾನದಲ್ಲಿ ಜಿಲ್ಲಾ ಮುಖ್ಯ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಸರಕಾರದ ಯೋಜನೆಗಳನ್ನು…

Read More

ವಿಶ್ವ ನಗು ದಿನ ಆಚರಿಸಿದ ಬಂಡೆ ಸಹೋದರಿಯರು

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 5:ವಿಶ್ವ ನಗು ದಿನವನ್ನು ಪ್ರತಿ ವರ್ಷ ಮೇ ತಿಂಗಳ ಮೊದಲ ಭಾನುವಾರದಂದು ಆಚರಿಸಲಾಗುತ್ತದೆ. ಈ ನಿಮಿತ್ತ ತಾಲೂಕಿನ ನಾಗಠಾಣ ಗ್ರಾಮದ ಅವಳಿ ಸಹೋದರಿಯರಾದ ಅನುಶ್ರೀ-ಶ್ರೀನಿಧಿ ಬಂಡೆ ಅವರು ವಿಶ್ವ ನಗು ದಿನವನ್ನು ಆಚರಿಸಿದರು.ನಗುವಿನ ಆರೋಗ್ಯಕರ ಲಾಭಗಳು ಮತ್ತು ವಿಶ್ವ ಶಾಂತಿಯನ್ನು ಉತ್ತೇಜಿಸುವ ಉದ್ದೇಶದಿಂದ, 1998 ರಲ್ಲಿ ಡಾ. ಮದನ್ ಕಟಾರಿಯಾ ಅವರು ಈ ದಿನವನ್ನು ಪ್ರಾರಂಭಿಸಿದರು. ನಗು ಒತ್ತಡ ಕಡಿಮೆ ಮಾಡಿ, ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ನಗು ರೋಗನಿರೋಧಕ ಶಕ್ತಿಯನ್ನು…

Read More

ಮಹಾತ್ಮ ಗಾಂಧಿ ನರೇಗಾ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಪಂ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಸೂಚನೆ

ಸಪ್ತಸಾಗರ ವಾರ್ತೆ ವಿಜಯಪುರ ಮೇ. 5 ಗ್ರಾಮೀಣ ಬಡಜನರಿಗೆ ಉದ್ಯೋಗ ಭದ್ರತೆ ಒದಗಿಸುವ ಮಹಾತ್ಮಾ ಗಾಂಧಿ‌ ನರೇಗಾ ಮಹತ್ವದ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎಂದು ಜಿಲ್ಲಾ‌ ಪಂಚಾಯಿತಿ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು (ಗ್ರಾ.ಉ) ತಾಂತ್ರಿಕ ಸಂಯೋಜಕರು, ತಾಲೂಕು ಎಮ್.ಐ.ಎಸ್ ಸಂಯೋಜಕರು, ಐ.ಇ.ಸಿ ಸಂಯೋಜಕರು, ಆಡಳಿತ ಸಹಾಯಕರು ಹಾಗೂ ತಾಂತ್ರಿಕ ಸಹಾಯಕರೊಂದಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ…

Read More