ಮುಂಬಯಿ ರೈಲ್ವೆಯನ್ನು ಇಂಡಿ ನಿಲ್ದಾಣದಲ್ಲಿ ನಿಲ್ಲಿಸಲು ಜಿಗಜಿಣಗಿ ಪತ್ರ

ಸಪ್ತಸಾಗರ ವಾರ್ತೇ,ವಿಜಯಪುರ, ಮೇ 5:ಗದಗದಿಂದ ಮುಂಬಯಿಗೆ ಸಂಚರಿಸುವ ರೈಲ್ವೆಗೆ ಇಂಡಿ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಸೌಲಭ್ಯ ಕಲ್ಪಿಸಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಒತ್ತಾಯಿಸಿದ್ದಾರೆ.‌ನಿಂಬೆ ಬೆಳೆಯ ಜಾಗತಿಕ ಟ್ಯಾಗ್ ಪಡೆದಿರುವ ದೇಶದ ಎಲ್ಲ ಕಡೆ ನಿಂಬೆ ಹಣ್ಣು ಸರಬರಾಜು ಮಾಡುವ ಕರ್ನಾಟಕ ಮಹಾರಾಷ್ಟ್ರದ ಗಡಿ ಭಾಗವಾಗಿರುವ‌ ಇಂಡಿ ಸಾಕಷ್ಟು ವ್ಯಾಪಾರ ವಹಿವಾಟಿನಲ್ಲಿ ಮುಂಚೂಣಿಯಲ್ಲಿದೆ. ಜೊತೆಗೆ ಅತ್ಯುತ್ತಮ ಗುಣಮಟ್ಟದ ದ್ರಾಕ್ಷಿ, ದಾಳಿಂಬೆ ಹಾಗೂ ಇತರೆ ವಾಣಿಜ್ಯ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡುತ್ತಿದ್ದು, ಜವಳಿ ವ್ಯಾಪಾರದ ಕೇಂದ್ರವಾಗಿರುವ ಇಂಡಿ…

Read More

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲವು: ಕಾರ್ಯಕರ್ತರ ಶಕ್ತಿ ಇಮ್ಮಡಿ-ಜಿಗಜಿಣಗಿ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 4:ಪಶ್ಚಿಮ ಬಂಗಾಳದ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ್ದು, ದೇಶದ ಇತಿಹಾಸದಲ್ಲಿಯೇ ಇದೊಂದು ಐತಿಹಾಸಿಕ ಮೈಲಿಗಲ್ಲು. ದೇಶದೆಲ್ಲೆಡೆ ಹೊಸ ಸಂಚಲನ ಸೃಷ್ಠಿಯಾಗಿದ್ದು, ಕಾರ್ಯಕರ್ತರಲ್ಲಿ ಆತ್ಮ ವಿಶ್ವಾಸ ಇಮ್ಮಡಿಸಿದೆ ಎಂದು ಸಂಸದ ರಮೇಶ ಜಿಗಜಿಣಗಿ ಪ್ರತಿಕ್ರಿಯಿಸಿದ್ದಾರೆ.ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಪಶ್ಚಿಮ ಬಂಗಾಳದ ಫಲಿತಾಂಶ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ದಶಕಗಳ ಹೋರಾಟದ ಫಲವಾಗಿ ಪಶ್ಚಿಮ ಬಂಗಾಳದಲ್ಲಿ ಕೇಸರಿ ಬಾವುಟ ಹಾರಾಡುತ್ತಿದೆ. ಇದು ಶಾಮ್‌ಪ್ರಸಾದ್ ಮುಖರ್ಜಿ ಅವರ ದೂರದೃಷ್ಠಿಯ ಫಲ…

Read More

ಅಪ್ರಾಪ್ತ ಬಾಲಕ ದ್ವಿ ಚಕ್ರ ವಾಹನ ಚಾಲನೆ: ಪೋಷಕರಿಗೆ 25,000 ದಂಡ

ಸಪ್ತಸಾಗರ ವಾರ್ತೆ, ವಿಜಯಪುರ, ಮೇ. 4:ಅಪ್ರಾಪ್ತ ಬಾಲಕ ದ್ವಿಚಕ್ರ ವಾಹನ ಚಾಲನೆ ಮಾಡಿದ ಅಪರಾಧಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕನ ಪೋಷಕರಿಗೆ ನ್ಯಾಯಾಲಯ 25,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.ವಿಜಯಪುರ ನಗರದ ಪಾಟೀಲ್ ಪ್ಲಾನೆಟ್ ಬಳಿ ಒಬ್ಬ ಬಾಲಕ ದ್ವಿಚಕ್ರ ನಡೆಸುವ ವೇಳೆ ವಿಜಯಪುರ ಸಂಚಾರಿ ಪೊಲೀಸರು ಗಮನಿಸಿ ಬಾಲಕನನ್ನು ತಡೆದು ಪರಿಶೀಲಿಸಿದಾಗ ಆ ಬಾಲಕ ಅಪ್ರಾಪ್ತ ಎಂಬುವುದು ಪೊಲೀಸರಿಗೆ ಖಚಿತಪಟ್ಟಿದೆ. ಆಗ ಸಂಚಾರಿ ಪೊಲೀಸರು ಬಾಲಕನ ಪೋಷಕರ ವಿರುದ್ದ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ…

Read More

ಕ್ಯಾಲಿಫೋರ್ನಿಯಾ ದ್ರಾಕ್ಷಿ ಬೆಳೆದು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳಿಗೆ ಸಮರ್ಪಿಸಿದ ತಿಕೋಟಾ ರೈತರು

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 4:ಬರಗಾಲದ ಜಿಲ್ಲೆ ಬ್ರಿಟೀಷರ ಕಾಲದಿಂದಲೂ ಹಿಂದಿನ 100 ವರ್ಷ ಮಳೆಪ್ರಮಾಣವನ್ನು ಅಭ್ಯಸಿಸಿದಾಗ ಅತೀ ಕಡೀಮೆ ಮಳೆ ಬೀಳುವ ಪ್ರದೇಶವಾಗಿದೆ. ಇದೇ ನೆಲದಿಂದ ಬಂದ ಶ್ರೇಷ್ಠ ಸಂತ ಜ್ಞಾನಯೋಗಿ, ಜಗತ್ತಿನ ಪ್ರಮುಖ ದಾರ್ಶನಿಕರಲ್ಲೊಬ್ಬರಾದ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರು ಈ ಪ್ರದೇಶ ಅಭಿವೃದ್ಧಿ ಸದಾ ಚಿಂತಿಸಿದವರು.ಪಂಚ ನದಿಗಳ ಹರಿದು ದಕ್ಷಿಣದ ಪಂಜಾಬ ಎನಿಸಿಕೊಂಡರೂ ಬರಗಾಲದಿಂದ ಇಲ್ಲಿನ ಜನರು ಸದಾ ಗುಳೆ ಹೋಗುತ್ತಿದ್ದರು. ಇದಕ್ಕೆ ಏನಾದರೂ ಇತಿಶ್ರೀ ಹಾಡಬೇಕು. ಸಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿ ಮಳೆಯಾದರೂ…

Read More

ಸರ್ಕಾರದ ಸಾಧನೆಗೆ ಮತದಾರರ ಮನ್ನಣೆ -ಸಚಿವ ಶಿವಾನಂದ ಪಾಟೀಲ

ಸಪ್ತಸಾಗರ ವಾರ್ತೆ, ವಿಜಯಪುರ, ಮೇ. 4 : ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಭರ್ಜರಿ ವಿಜಯ ಸಾಧಿಸಿದ್ದಾರೆ. ಈ ಗೆಲುವು ರಾಜ್ಯ ಸರ್ಕಾರದ ಸಾಧನೆಗೆ ಮತದಾರರು ನೀಡಿರುವ ಮನ್ನಣೆ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಪ್ರತಿಕ್ರಿಯೆ ನೀಡಿದ್ದಾರೆ.ಬಿಜೆಪಿ ಮುಖಂಡರು ಪ್ರಚೋದನಕಾರಿ ಭಾಷಣಗಳ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಎಷ್ಟೇ ಅಪಪ್ರಚಾರ ನಡೆಸಿದರೂ ಮತದಾರರು ಮಾತ್ರ ಅಭಿವೃದ್ಧಿ ಮತ್ತು…

Read More

ಯಡ್ಡಿ ಅಭಿಮಾನೋತ್ಸವ ಕಾರ್ಯಕರ್ತರ ಪಾಲಿಗೆ ಒಂದು ಅಪೂರ್ವ ಹಬ್ಬ-ರಜಪೂತ

ಸಪ್ತಸಾಗರ ವಾರ್ತೆ, ವಿಜಯಪುರ, ಮೇ. 3:ಚಿತ್ರದುರ್ಗದಲ್ಲಿ ನಡೆಯಲಿರುವ ಶ್ರೀ ಬಿ.ಎಸ್. ಯಡಿಯೂರಪ್ಪ ಅಭಿಮಾನೋತ್ಸವ ಬಿಜೆಪಿ ಕಾರ್ಯಕರ್ತರ ಪಾಲಿಗೆ ಒಂದು ಅಪೂರ್ವ ಹಬ್ಬವಿದ್ದಂತೆ. ವಿಜಯಪುರ ಜಿಲ್ಲೆಯ ಕಾರ್ಯಕರ್ತರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರೈತ ನಾಯಕ ಬಿ.ಎಸ್. ಯಡಿಯೂರಪ್ಪ ಅವರಿಗೆ ಶುಭ ಕೋರಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷ ಪರಶುರಾಮಸಿಂಗ್ ರಜಪೂತ ಕೋರಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಿ.ಎಸ್. ಯಡಿಯೂರಪ್ಪ ಓರ್ವ ನಾಡು ಕಂಡ ಶ್ರೇಷ್ಠ ನೇತಾರ, ಸೈಕಲ್ ಮೇಲೆ ಹೆಮ್ಮೆಯ ಭಾರತೀಯ ಜನತಾ ಪಕ್ಷವನ್ನು…

Read More

ಮೇ 4ರಂದು ಮಹಿಳಾ ವಿವಿಗೆ ತನಿಖಾ ತಂಡ ಭೇಟಿ:ಅಕ್ಕಮಹಾದೇವಿ ವಿವಿಯಲ್ಲಿ ಪಿಎಚ್.ಡಿ ಅಕ್ರಮ ಪ್ರಕರಣ

ಸಪ್ತಸಾಗರ ವಾರ್ತೆ ವಿಜಯಪುರ, ಮೇ. 3:ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪ್ರದಾನ ಪ್ರಕ್ರಿಯೆಯಲ್ಲಿ ನಡೆದಿರುವ ನಿಯಮ ಉಲ್ಲಂಘನೆಗಳು ಮತ್ತು ಅಕ್ರಮಗಳ ಕುರಿತು ತನಿಖೆ ನಡೆಸಲು ಮೇ 4 ಪರಿಶೀಲನಾ ತಂಡವು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲಿದೆ ಎಂದು ದ್ರಾವಿಡ ವಿದ್ಯಾರ್ಥಿ ಪರಿಷತ್ ರಾಜ್ಯಾಧ್ಯಕ್ಷ ಅಕ್ಷಯಕುಮಾರ್ ಅಜಮನಿ ತಿಳಿಸಿದ್ದಾರೆ.ವಿಶ್ವವಿದ್ಯಾಲಯದಲ್ಲಿ ನಡೆದಿರುವ ಅಕ್ರಮಗಳ ವಿರುದ್ಧ ದ್ರಾವಿಡ ವಿದ್ಯಾರ್ಥಿ ಪರಿಷತ್ ನಿರಂತರವಾಗಿ ಹೋರಾಟ ನಡೆಸುತ್ತಿದ್ದು, ಕಳೆದ ತಿಂಗಳು ರಾಜ್ಯಪಾಲರ ಭೇಟಿ ಸಂದರ್ಭದಲ್ಲಿ ಮನವಿ ಸಲ್ಲಿಸಲು ಜಿಲ್ಲಾಡಳಿತ ಅವಕಾಶ ನಿರಾಕರಿಸಿದ್ದಕ್ಕೆ…

Read More

ಮೇ 8ರಂದು ಬೃಹತ್ ರೈತ ಜನಜಾಗೃತಿ ಸಮಾವೇಶ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 2 :ವಿಜಯಪುರದಲ್ಲಿ ಮೇ. 8ರಂದು ದರಬಾರ ಹೈಸ್ಕೂಲ್ ಮೈದಾನದಲ್ಲಿ ಬೃಹತ್ ರೈತ ಜನಜಾಗೃತಿ ಸಮಾವೇಶ ಸಂಘಟಿಸಲಾಗಿದ್ದು, ಆಲಮಟ್ಟಿಯ ಲಾಲ್ ಬಹೂದ್ದೂರ ಶಾಸ್ತ್ರಿ ಆಣೆಕಟ್ಟನ್ನು 519.60 ಮೀಟರದಿಂದ 524.256 ಮೀಟರ್ ಕ್ಕೆ ಎತ್ತರಿಸಿ ಅದಕ್ಕೆ ಬೇಕಾಗುವ ಸಂಪೂರ್ಣ ಭೂ ಪರಿಹಾರ, ಪುನರ್ ವಸತಿ, ಕಲ್ಪಿಸಿ 5 ಜಿಲ್ಲೆಗಳಿಗೆ ಸಮಗ್ರ ನೀರಾವರಿ ಮಾಡುವುದು ಹಾಗೂ ಮುಳವಾಡ ಸೇರಿದಂತೆ ವಿವಿಧ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದು ಸೇರಿದಂತೆ ಅನೇಕ ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ…

Read More

ನೀಟ್ ಪರೀಕ್ಷೆ : ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ

ಸಪ್ತಸಾಗರ ವಾರ್ತೆ,ವಿಜಯಪುರ ಮೇ: ನೀಟ್ ಪರೀಕ್ಷೆಯು ಮೇ.03ರಂದು ವಿಜಯಪುರ ನಗರದ ಒಟ್ಟು 17 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀ.ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ಆದೇಶ ಹೊರಡಿಸಿದ್ದಾರೆ.ಪರೀಕ್ಷಾ ಕೇಂದ್ರಗಳ 200 ಮೀ ವ್ಯಾಪ್ತಿಯಯಲ್ಲಿನ ಪರೀಕ್ಷಾ ಕೇಂದ್ರದ ಸಮೀಪದಲ್ಲಿರುವ ಝರಾಕ್ಸ್ ಅಂಗಡಿಗಳು, ಕಂಪ್ಯೂಟರ್ ಸೆಂಟರ್ ಗಳು, ಇಂಟರನೆಟ್, ಸೈಬರ್ ಕೆಫೆಗಳು ಮತ್ತು ಕೋಚಿಂಗ್ ಕೇಂದ್ರಗಳು ಬೆಳಿಗ್ಗೆ 9:30 ಗಂಟೆಯಿಂದ ಪರೀಕ್ಷೆ ಮುಕ್ತಾಯವಾಗುವವರೆಗೆ ತೆರೆಯದಂತೆ ಆದೇಶಿಸಲಾಗಿದೆ.ಪರೀಕ್ಷೆಯಲ್ಲಿ ತೊಡಗಿರುವ ಯಾವುದೇ…

Read More

ಶಶಿಕಲಾ ಹೂಗಾರಗೆ ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಗೌರವ ಪ್ರಶಸ್ತಿ

ಸಪ್ತಸಾಗರ ವಾರ್ತೆ,ಸಿಂದಗಿ, ಮೇ. 2: ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಮನೋಜ್ಞ ಕಲಾಕೃತಿಗಳ ಮೂಲಕ ಗುರುತಿಸಿಕೊಂಡಿರುವ ಕಲಾವಿದೆ ಶಶಿಕಲಾ ಹೂಗಾರ ಅವರು 2025-26ನೇ ಸಾಲಿನ ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.‘ಕಲಾ ಸೇವೆಯೇ ನನ್ನ ಉಸಿರು, ಪ್ರಶಸ್ತಿ ದೊರಕಿದ್ದು ಸಂತೋಷ ತರಿಸಿದೆ, ಇನ್ನಷ್ಟು ಕಲಾ ಸೇವೆ ಮಾಡುವ ಪ್ರೋತ್ಸಾಹ ದೊರಕಿದೆ’ ಎಂದು ಶಶಿಕಲಾ ಹೂಗಾರ ಹರ್ಷ ವ್ಯಕ್ತಪಡಿಸಿದರು.ಕಲಾಕೃತಿಗಳ ಜೊತೆಗೆ ಸಂಶೋಧನಾ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿರುವ ಅವರು ವಿಜಯಪುರದ ಬಹುಮುಖ ಪ್ರತಿಭೆಯಾಗಿದ್ದಾರೆ.ಅವಿಭಜಿತ…

Read More