ಮೇ. 4ರಿಂದ 9ರ ವರೆಗೆಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ

ಸಪ್ತಸಾಗರ ವಾರ್ತೆ,ವಿಜಯಪುರ, ಏ. 30:ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಕಾಯಚಿಕಿತ್ಸೆ ವಿಭಾಗದ ವತಿಯಿಂದ ಮೇ 4 ರಿಂದ ಮೇ 9ರ ವರೆಗೆ ಹಿರಿಯ ನಾಗರಿಕರಲ್ಲಿ ಕಂಡುಬರುವ ವಯೋಸಹಜವಾದ ನೆನಪಿನ ಶಕ್ತಿ ಸಮಸ್ಯೆ ಕುರಿತು ಉಚಿತ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ ನಡೆಯಲಿದೆ.ಈ ಶಿಬಿರದಲ್ಲಿ ನೆನೆಪಿನ ಶಕ್ತಿ ಕ್ಷೀಣಿಸುವಿಕೆ, ಆಲೋಚನೆ ಮತ್ತು ನಿರ್ಧಾರದ ಸಮಸ್ಯೆ, ಸ್ಥಳ ಮತ್ತು ಸಮಯದ ಅರಿವು ಕಡಿಮೆಯಾಗುವುದು, ವರ್ತನೆ ಮತ್ತು ಮನಸ್ಥಿತಿಯಲ್ಲಿನ ಬದಲಾವಣೆ ಸಮಸ್ಯೆ ಎದುರಿಸುತ್ತಿರುವ…

Read More

ಜಂಬಗಿ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಸಪ್ತಸಾಗರ ವಾರ್ತೆ,ವಿಜಯಪುರ, ಏ. 28: ಸಂವಿಧಾನ ಶಿಲ್ಪಿ ಡಾ.‌ ಬಾಬಾಸಾಹೇಬ ಅಂಬೇಡ್ಕರ ಅವರ 135ನೇ ಜಯಂತಿ ಉತ್ಸವ ಅಂಗವಾಗಿ ಬಬಲೇಶ್ವರ ತಾಲೂಕಿನ ಜಂಬಗಿ‌ ಎಚ್. ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇದೇ ಮೊದಲ ಬಾರಿಗೆ ಮಂಗಳವಾರ ಶ್ರೀ. ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಹಾಗೂ ಸಂಶೋಧನ ಕೇಂದ್ರ ಹಾಗೂ ಜಂಬಗಿಯ ಡಾ.‌ ಬಾಬಾಸಾಹೇಬ ಅಂಬೇಡ್ಕರ ತರುಣ ಸಂಘ ಜಂಬಗಿ ಎಚ್ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಬೃಹತ್ ಶಿಬಿರ ನಡೆಯಿತು.25ನೇ…

Read More

ಜಿಲ್ಲೆಯ ಅಭಿವೃದ್ಧಿಗೆ ನಿಗದಿತ ಅವಧಿಯಲ್ಲಿ ಶ್ರಮಿಸಿ: ಡಾ. ಮೂರ್ತಿ

ಸಪ್ತಸಾಗರ ವಾರ್ತೆ, ವಿಜಯಪುರ, ಏ. 28:ಕಾನೂನಿನಡಿ ಬರುವ ಕೆಲಸವನ್ನು ನಿಗದಿತ ಅವಧಿಯಲ್ಲಿ ನಿರ್ವಹಿಸಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮ ವಹಿಸಬೇಕು ಎಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳು ಆಯೋಗದ ಅಧ್ಯಕ್ಷ ಡಾ. ಮೂರ್ತಿ ಎಲ್. ಅವರು ಹೇಳಿದರು.ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಬಗರ ಹುಕುಂ ಅರ್ಜಿ ವಿಲೇವಾರಿ ಮಾಡಬೇಕು. ‌ಗೋಮಾಳ ಜಮೀನು ಅರ್ಜಿ ಹಾಕಿಕೊಂಡಿದ್ದಾರೆ. ಆ ಅರ್ಜಿಗಳನ್ನು ವಿಲೇವಾರಿ ಮಾಡಬೇಕು…

Read More

ಭವಿಷ್ಯದ ಬದುಕಿಗೆ ನೀರಿನ ಮಿತ ಬಳಕೆ ಅತ್ಯಗತ್ಯ -ಸಂತೋಷ ಬಂಡೆ

ಸಪ್ತಸಾಗರ ವಾರ್ತೆ,ವಿಜಯಪುರ, ಏ. 28:ವಿಶ್ವದ ಸಕಲ ಜೀವರಾಶಿಗಳಿಗೆ ನೀರು ಜೀವನಾಧಾರ. ಹೆಚ್ಚಾದ ಜನಸಂಖ್ಯೆ,ನಗರೀಕರಣ,ಜಾಗತಿಕ ತಾಪಮಾನದಿಂದ ಜಲ ಸಂಪನ್ಮೂಲ ಮೇಲೆ ಒತ್ತಡವಿದ್ದು, ನೀರನ್ನು ಮಿತವಾಗಿ ಬಳಸಿ, ಮರುಬಳಕೆ ಮಾಡುವುದು ನಮ್ಮೆಲ್ಲರ ಮುಖ್ಯ ಗುರಿಯಾಗಬೇಕಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ಮಂಗಳವಾರ ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಜಲ ಶಕ್ತಿ ಅಭಿಯಾನದಡಿ ಜಲ ಪಖ್ವಾಡ್ ಕಾರ್ಯಕ್ರಮದ ನಿಮಿತ್ತ ಏರ್ಪಡಿಸಿದ್ದ ‘ನೀರು ಭವಿಷ್ಯದ ಬದುಕಿಗೆ ಆಧಾರ’ ಎಂಬ ವಿಚಾರ ಸಂಕಿರಣ ಉದ್ಘಾಟಿಸಿ ಅವರು…

Read More

ಸಂಧಿವಾತ ರೋಗಗಳ ಬಗ್ಗೆ ಜಾಗೃತಿ ಅಗತ್ಯ: ಡಾ. ರಮೇಶ ಜೋಯಿಸ್

ಸಪ್ತಸಾಗರ ವಾರ್ತೆ, ಬೆಂಗಳೂರು, ಏ. 26ಸಂಧಿವಾತ ಹಾಗೂ ಇತರೆ ರುಮಾಟಾಲಜಿ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವೆಂದು ಕರ್ನಾಟಕ ರುಮಾಟಾಲಜಿ ಅಸೋಸಿಯೇಷನ್ ಅಧ್ಯಕ್ಷ ಡಾ ರಮೇಶ್ ಜೋಯಿಸ್ ತಿಳಿಸಿದರು.ನಗರದ ಲಾಲ್‌ಬಾಗ್ ಮುಂಭಾಗದಲ್ಲಿ ಭಾನುವಾರ ಆಯೋಜಿಸಿದ್ದ ಸಂಧಿವಾತಶಾಸ್ತ್ರ ಜಾಗೃತಿ ವಾಕಥಾನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಧಿವಾತ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಾಗೃತಿ ಅತ್ಯಂತ ಮುಖ್ಯ.ಇಂತಹ ಕಾಯಿಲೆಗಳು ವಿರಳವೆಂದು ಹಲವರು ಭಾವಿಸಿದರೂ, ಸರಿಯಾದ ಪರಿಶೀಲನೆ ಇಲ್ಲದಿದ್ದರೆ ಅವು ಗುರುತಾಗುವುದೇ ಇಲ್ಲ. ಲೂಪಸ್, ವಾಸ್ಕುಲೈಟಿಸ್, ಸ್ಕ್ಲೆರೋಡರ್ಮಾ ಮುಂತಾದ ರೋಗಗಳು…

Read More

ಬಿಎಲ್ ಡಿಇ ಆಸ್ಪತ್ರೆಗೆ ದೇಹದಾನ

ಸಪ್ತಸಾಗರ ವಾರ್ತೆ,ವಿಜಯಪುರ, ಏ. 26: ಜಿಲ್ಲೆಯಲ್ಲಿ ದೇಹದಾನದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಹೆಚ್ಚಾಗುತ್ತಿದ್ದು, ಸಿಂದಗಿ ತಾಲೂಕಿನ‌ ಹಂದಿಗನೂರು ಗ್ರಾಮದ ಮಹಾದೇವಪ್ಪ ಗುರುಬಸಪ್ಪ ಮುಳವಾಡ(82) ಅವರ ಮೃತದೇಹವನ್ನು ಕುಟುಂಬಸ್ಥರು ಬಿ.ಎಲ್.ಡಿ.ಇ ಆಸ್ಪತ್ರೆಗೆ ದಾನ ಮಾಡಿದ್ದಾರೆ.82 ವರ್ಷದ ಮಹಾದೇವಪ್ಪ ಗುರುಬಸಪ್ಪ ಮುಳವಾಡ ಅವರು ಏಪ್ರಿಲ್ 24 ರಂದು ಶುಕ್ರವಾರ ನಿಧನರಾಗಿದ್ದು. ಮೃತರ ಇಚ್ಛೆಯಂತೆ ಕುಟುಂಬಸ್ಥರು ದೇಹದಾನ ಮಾಡಿದ್ದಾರೆ.ಈ‌ ಸಂದರ್ಭದಲ್ಲಿ ಆಸ್ಪತ್ರೆಯ ಅಂಗರಚನಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಆರ್. ಎಸ್. ಬುಲಗೌಡ ಅವರು ಪಾರ್ಥಿವ ಶರೀರ ಸ್ವೀಕರಿಸಿ ಕುಟುಂಬಸ್ಥರಿಗೆ ಕೃತಜ್ಞತೆ…

Read More

ಎಸ್ಸೆಸ್ಸೆಲ್ಸಿ ಫಲಿತಾಂಶ:ಸಿ.ಎಸ್.ಬಿರಾದಾರ ಪ್ರೌಢ ಶಾಲೆಗೆ ಉತ್ತಮ ಫಲಿತಾಂಶ

ಸಪ್ತಸಾಗರ ವಾರ್ತೆ, ವಿಜಯಪುರ, ಏ. 25:ಸಿ.ಎಸ್. ಬಿರಾದಾರ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದಾರೆ.ಕುಮಾರ ರೋಹನ್ ರಾಠೋಡ625 ಕ್ಕೆ 578 ಅಂಕ ಗಳಿಸಿ (ಶೇ.92.48) ಪ್ರಥಮ ಸ್ಥಾನ, ಕುಮಾರಿ ಪ್ರೀತಿ ಮಾನೆ625 ಕ್ಕೆ 562 Pets ಗಳಿಸಿ (ಶೇ.89.92) ದ್ವಿತೀಯ ಸ್ಥಾನ,ಕುಮಾರ,ಸಮೀರ್ ಮುಲ್ಲಾ{625 ಕ್ಕೆ 559 ಅಂಕ (ಶೇ.89.44) ಗಳಿಸಿ ತೃತೀಯ ಸ್ಥಾನ,ಕುಮಾರಿ ಸಾಕ್ಷಿ ಮಮದಾಪುರ625 ಕ್ಕೆ 547 (ಶೇ.87.52),ಕುಮಾರಿ , ಮಾಯಾ ಲಮಾಣಿ625 ಕ್ಕೆ 541 ಅಂಕ ಗಳಿಸಿದ್ದು, ಶೇ.86.44ರಷ್ಟು ಸಾಧನೆ…

Read More

ಬಿ. ಎಲ್. ಡಿ. ಇ. ಎ ಕ್ರಿಕೆಟ್ ಕಪ್-2026 ಅಂತರ ಪದವಿ ಮಹಾವಿದ್ಯಾಲಯ ಪಂದ್ಯಾವಳಿಯಲ್ಲಿ ಎ. ವಿ. ಎಸ್. ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನ‌ ಕೇಂದ್ರ ತಂಡಕ್ಕೆ ಗೆಲವು

ಸಪ್ತಸಾಗರ ವಾರ್ತೆ,ವಿಜಯಪುರ, ಏ. 25:ಬಿ. ಎಲ್. ಡಿ ‌ಇ‌ ಸಂಸ್ಥೆಯ ಎ.‌ ಎಸ್. ಪಾಟೀಲ ಕಾಮರ್ಸ್ ಕಾಲೇಜಿನಲ್ಲಿ ನಡೆದ ಬಿ.‌ ಎಲ್. ಡಿ. ಇ. ಎ ಕ್ರಿಕೆಟ್ ಕಪ್-2026 ಅಂತರ ಪದವಿ ಮಹಾವಿದ್ಯಾಲಯ ಪಂದ್ಯಾವಳಿಯನ್ನು ಬಿ.ಎಲ್.ಡಿ. ಇ ಸಂಸ್ಥೆಯ ಎ. ವಿ. ಎಸ್. ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನ‌ ಕೇಂದ್ರ ತಂಡ ಗೆದ್ದುಕೊಂಡಿದೆ.ಏಪ್ರೊಲ್ 17 ರಿಂದ ಏಪ್ರಿಲ್ 26ರ ವರೆಗೆ ಏಳು ದಿನಗಳ ಕಾಲ ನಡೆದ ಈ ಕ್ರೀಡಾಕೂಟದಲ್ಲಿ ಒಟ್ಟು 14 ನಾನಾ ಕಾಲೇಜುಗಳ ತಂಡಗಳು…

Read More

ನಾರಿಶಕ್ತಿ ಅಭಿವಂದನ್ ಮಸೂದೆ ಅಂಗೀಕಾರಕ್ಕೆ ಪ್ರತಿಪಕ್ಷಗಳ ವಿರೋಧ: ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ

ಸಪ್ತಸಾಗರ ವಾರ್ತೆ,ವಿಜಯಪುರ, ಏ. 25 : ನಾರಿಶಕ್ತಿ ಅಭಿವಂದನ್ ಮಸೂದೆ ಅಂಗೀಕಾರವಾಗದಂತೆ ಕುತಂತ್ರ ಮಾಡಿದ ಕಾಂಗ್ರೆಸ್ ಹಾಗೂ ಇನ್ನಿತರ ಪ್ರತಿಪಕ್ಷಗಳ ವಿರುದ್ಧ ವಿಜಯಪುರದಲ್ಲಿ ನಾರಿಶಕ್ತಿ ಅಭಿವಂದನ್ ಫೋರಂ ಪದಾಧಿಕಾರಿಗಳು ಪ್ರತಿಭಟನಾ ರ‍್ಯಾಲಿ ನಡೆಸಿದರು.ವಿಜಯಪುರದ ಶ್ರೀ ಸಿದ್ದೇಶ್ವರ ದೇವಾಲಯದಿಂದ ಆರಂಭಗೊಂಡ ರ‍್ಯಾಲಿ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು.ನಾರಿಶಕ್ತಿ – ದೇಶದ ಶಕ್ತಿ, ಮಹಿಳಾ ಸಬಲೀಕರಣ ವಿಷಯದಲ್ಲಿ ಬೇಡ ರಾಜಕಾರಣ ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತಾ ನಾರಿಶಕ್ತಿ ಮಸೂದೆ ಅಂಗೀಕಾರವಾಗದಂತೆ ಕುತಂತ್ರ ಮಾಡಿದ ಪ್ರತಿಪಕ್ಷಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಅಸಮಾಧಾನ…

Read More

ಡಾ. ರಾಜ್ ಅವರ ವ್ಯಕ್ತಿತ್ವ ವಿಶ್ವವಿದ್ಯಾಲಯವಿದ್ದಂತೆ-ಸಂತೋಷ ಬಂಡೆ

ಸಪ್ತಸಾಗರ ವಾರ್ತೆ,ವಿಜಯಪುರ, ಏ. 25:ಭಾರತೀಯ ಚಿತ್ರರಂಗದಲ್ಲಿ ಡಾ.ರಾಜ್ ಅವರ ಸಾಧನೆ ನಿಜಕ್ಕೂ ಅನನ್ಯ. ಅವರು ಕನ್ನಡ ಚಿತ್ರರಂಗದ ಭದ್ರ ಬುನಾದಿಯಾಗಿದ್ದು, ಅವರು ಕೇವಲ ನಟನಾಗಿರದೆ, ಕನ್ನಡ ನಾಡು-ನುಡಿಯ ಪ್ರತೀಕವಾಗಿದ್ದಾರೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ಶುಕ್ರವಾರ ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ಡಾ.ರಾಜಕುಮಾರ್‌ ಅವರ ಜಯಂತಿ ಕಾರ್ಯಕ್ರಮದಲ್ಲಿ ಡಾ.ರಾಜಕುಮಾರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.ಡಾ. ರಾಜಕುಮಾರ ಅವರ ವ್ಯಕ್ತಿತ್ವವೇ ಒಂದು ವಿಶ್ವ ವಿದ್ಯಾಲಯವಿದ್ದಂತೆ. ಸಮಾಜ…

Read More