ಫೆ. 13ರಂದು ಸಾಲೋಟಗಿಯಲ್ಲಿ ಜೋಡೆತ್ತುಗಳ ಸಮಾವೇಶ
ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 9: ವಿಶ್ವ ಗುರು ಬಸವಣ್ಣನವರು ಪ್ರತಿಪಾದಿಸಿದ ಬಸವ ತತ್ವದ ಮೂಲ ಬೇರುಗಳಾದ ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು 11 ಸಾವಿರ ರೂ. ಪ್ರೋತ್ಸಾಹ ಧನವನ್ನು ನೀಡುವ ಅಂಶವನ್ನು ಪ್ರಸಕ್ತ ಬಜೆಟ್‌ನಲ್ಲಿ ಸೇರ್ಪಡೆ ಮಾಡಿ ಬಸವ ತತ್ವದ ಪುನರುತ್ಥಾನಕ್ಕಾಗಿ ಬಜೆಟ್‌ನ ಶೇ.10 ರಷ್ಟು ಅನುದಾನವನ್ನು ಮೀಸಲಿಡುವಂತೆ ವಿಶ್ರಾಂತ ಕೃಷಿ ಅಧಿಕಾರಿ ಬಾಳಾಸಾಹೇಬ ಈಶ್ವರಗೊಂಡ ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೈಲ ತತ್ವ ಆಧಾರಿತ ಟ್ರ್ಯಾಕ್ಟರ್ ಸಂಸ್ಕೃತಿಯ ಕೃಷಿಯಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತಿದೆ. ಬಸವ ತತ್ವಾಧಾರಿತ…


