ನಿಷ್ಕ್ರಿಯ ಖಾತೆಗಳನ್ನು ಸಕ್ರಿಯಗೊಳಿಸಿಕೊಳ್ಳಲು ಅವಕಾಶ
ಸಪ್ತಸಾಗರ ವಾರ್ತೆ, ವಿಜಯಪುರ, ನ.26:ನಿಮ್ಮ ಹಣ, ನಿಮ್ಮ ಹಕ್ಕುಅಭಿಯಾನದಡಿ ನಿಷ್ಕ್ರಿಯ ಖಾತೆಗಳು -ಹಕ್ಕು ಪಡೆಯದ ಠೇವಣಿಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ನವೆಂಬರ್ 28 ರಂದು ಮಧ್ಯಾಹ್ನ 3 ಗಂಟೆಗೆ ಕೇಂದ್ರ ಸರ್ಕಾರದ ಹಣಕಾಸು ಸೇವೆಗಳ ಇಲಾಖೆ, ಹಣಕಾಸು ಸಚಿವಾಲಯ ಹಾಗೂ ಆರ್‌ಬಿಐ, ಎಸ್‌ಎಲ್‌ಬಿಸಿ ಮತ್ತು ಜಿಲ್ಲಾಡಳಿತದ ನಿರ್ದೇಶನದಂತೆ ನಗರದ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.ನಿಷ್ಕ್ರಿಯ ಖಾತೆಗಳು- ಹಕ್ಕು ಪಡೆಯದ ಠೇವಣಿಗಳು, ವಿಮಾ ಪಾಲಿಸಿ ಮೊತ್ತ, ಷೇರುಗಳನ್ನು ಇತ್ಯರ್ಥಪಡಿಸಲುಈ ಅಭಿಯಾನವನ್ನು ಹಣಕಾಸು ಸೇವೆಗಳ ಇಲಾಖೆಯು ದಿನಾಂಕ: 01.10.2025 ರಿಂದ…


