ಜ್ಞಾನ ಸಂಪಾದನೆ ಮತ್ತು ಇತಿಹಾಸ ಪ್ರಜ್ಞೆ ರೂಢಿಸಿಕೊಳ್ಳಬೇಕಾದರೆ ಯುವಕರು ಹೆಚ್ಚೆಚ್ಚು ಓದಿ:ಡಾ. ಜೆ. ಎಸ್. ಪಾಟೀಲ

ಸಪ್ತಸಾಗರ ವಾರ್ತೆ,ವಿಜಯಪುರ, ವಿಜಯಪುರ, ಮಾ. 24:ಇವತ್ತಿನ ಯುವ ಜನಾಂಗದಲ್ಲಿ ಓದುವ ಹವ್ಯಾಸ ಕಡಿಮೆಯಾಗಿದ್ದು ಅತ್ಯಂತ ವಿಷಾದದ ಸಂಗತಿಯಾಗಿದೆ. ಜ್ಞಾನ ಸಂಪಾದನೆ ಮತ್ತು ಇತಿಹಾಸ ಪ್ರಜ್ಞೆ ರೂಢಿಸಿಕೊಳ್ಳಬೇಕಾದರೆ ಯುವಕರು ಹೆಚ್ಚು ಹೆಚ್ಚು ಓದಿನಲ್ಲಿ ತೊಡಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಈ ದಿನ ಡಾಟ್ ಕಾಮ್‌ನಿಂದ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿರುವುದು ಪ್ರಶಂಸನೀಯ ಎಂದು ಪ್ರಗತಿಪರ ಚಿಂತಕ ಡಾ. ಜೆ.ಎಸ್.ಪಾಟೀಲ್ ಅಭಿಪ್ರಾಯಪಟ್ಟರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜೈ ಹಿಂದ್,…

Read More

ದಾವಣಗೆರೆ, ಬಾಗಲಕೋಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ನಿಶ್ಚಿತ: ಸಚಿವ ಶಿವಾನಂದ ಪಾಟೀಲ ವಿಶ್ವಾಸ

ಸಪ್ತಸಾಗರ ವಾರ್ತೆ,ಬಾಗಲಕೋಟೆ, ಮಾ. 23: ಬಾಗಲಕೋಟೆ ಹಾಗೂ ದಾವಣಗೆರೆ ವಿಧಾನಸಭೆ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆ ಹಿರಿಯ ಶಾಸಕರ ಅಗಲಿಕೆಯಿಂದ ತೆರವಾಗಿ ಆಕಸ್ಮಿಕವಾಗಿ ಎದುರಾದ ಚುನಾವಣೆ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಥಾನಗಳೇ ಇದ್ದು, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವುದು ನಿಶ್ಚಿತ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.ಸೋಮವಾರ ಬಾಗಲಕೋಟೆ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಅವರ ಉಮೇದುವಾರಿಕೆ ಸಲ್ಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವ ಶಿವಾನಂದ ಪಾಟೀಲ, 2028…

Read More

ಹೆಚ್.ವೈ. ಮೇಟಿಯವರ ಆತ್ಮಕ್ಕೆ ಶಾಂತಿ ದೊರೆಯಬೇಕಾದರೆ ಬಾಗಲಕೋಟೆ ಗ್ರಾಮೀಣ ಕ್ಷೇತ್ರದ ಜನರು ಉಮೇಶ್ ಮೇಟಿಯವರಿಗೆ ಆಶೀರ್ವದಿಸಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ

ಸಪ್ತಸಾಗರ ವಾರ್ತೆ,ಬಾಗಲಕೋಟೆ,ಮಾ.23:ಮಾಜಿ ಶಾಸಕ ದಿವಂಗತ ಹೆಚ್. ವೈ. ಮೇಟಿಯವರಿಗೆ ಗೌರವ, ಅವರ ಆತ್ಮಕ್ಕೆ ಶಾಂತಿ ದೊರೆಯಬೇಕಾದರೆ ಬಾಗಲಕೋಟೆ ಗ್ರಾಮೀಣ ಕ್ಷೇತ್ರದ ಜನರು ಉಮೇಶ್ ಮೇಟಿಯವರಿಗೆ ಆಶೀರ್ವದಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಸೋಮವಾರ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಯವರ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದು ನಂತರ ಕಾರ್ಯಕರ್ತರುಗಳನ್ನು ಉದ್ದೇಶಿಸಿ ಮಾತನಾಡಿದರು. ಮೇಟಿಯವರು ಜಾತ್ಯತೀತ ವ್ಯಕ್ತಿರಾಜ್ಯದಲ್ಲಿ ಎರಡು ಉಪಚುನಾವಣೆಗಳು ದಾವಣಗೆರೆ ಮತ್ತು ಬಾಗಲಕೋಟೆಯಲ್ಲಿ ನಡೆಯುತ್ತಿದ್ದು, ಎರಡೂ ಕ್ಷೇತ್ರಗಳಲ್ಲಿ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ…

Read More

ಇದು ಧರ್ಮ ಹಾಗೂ ಅಧರ್ಮ, ಸತ್ಯ ಹಾಗೂ ಸುಳ್ಳಿನ ನಡುವಿನ ಚುನಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

ಸಪ್ತಸಾಗರ ವಾರ್ತೆ,ಬಾಗಲಕೋಟೆ, ಮಾ. 23:“ಎರಡು ವಿಚಾರಕ್ಕೆ ಈ ಉಪಚುನಾವಣೆ ನಡೆಯಲಿದೆ. ಇದು ಧರ್ಮ ಹಾಗೂ ಅಧರ್ಮ, ಸತ್ಯ ಹಾಗೂ ಸುಳ್ಳಿನ ನಡುವಣ ಚುನಾವಣೆಯಾಗಿದೆ. ಬಿಜೆಪಿಯವರು ಏನಿದ್ದರೂ ಸುಳ್ಳು ಆಶ್ವಾಸನೆ ನೀಡುವುದು. ಆದರೆ ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ನಡೆಯುತ್ತಿದೆ. ಬಸವಣ್ಣನವರ ನಾಡಿನಲ್ಲಿ ನುಡಿದಂತೆ ನಡೆಯುತ್ತೇವೆ. ಎಲ್ಲಾ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ” ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.ಬಾಗಲಕೋಟೆ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರ ನಾಮಪತ್ರ ಸಲ್ಲಿಕೆ ಬಳಿಕ ಶಿವಕುಮಾರ್ ಅವರು…

Read More

ರೈಲುಗಳ ಸೇವೆ ಪುನರಾರಂಭ

ಸಪ್ತಸಾಗರ ವಾರ್ತೆ, ಹುಬ್ಬಳ್ಳಿ, ಮಾ. 23:ವಂದಾಲ ಹಾಗೂ ಬಸವನ ಬಾಗೇವಾಡಿ ರೋಡ್ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ (ಎಲ್‌ಸಿ ಸಂಖ್ಯೆ 62) ಕಾಮಗಾರಿಗಳ ಹಿನ್ನೆಲೆ ಭಾಗಶಃ ರದ್ದುಗೊಂಡಿದ್ದ ಕೆಳಕಂಡ ರೈಲುಗಳನ್ನು ಇದೀಗ ತಮ್ಮ ನಿಯಮಿತ ಮಾರ್ಗದಲ್ಲಿ ಎಂದಿನಂತೆ ಸಂಚರಿಸಲು ಪುನಃಸ್ಥಾಪಿಸಲಾಗಿದೆ.ರೈಲು ಸಂಖ್ಯೆ 07329 ಎಸ್‌ಎಸ್‌ಎಸ್ ಹುಬ್ಬಳ್ಳಿ–ವಿಜಯಪುರ ವಿಶೇಷ ರೈಲು, ಮಾರ್ಚ್ 24ರಂದು, ಬಾಗಲಕೋಟೆ–ವಿಜಯಪುರ ನಡುವಿನ ಭಾಗಶಃ ರದ್ದತಿ ಹಾಗೂ ಬಾಗಲಕೋಟೆಯಲ್ಲಿ ಅಂತ್ಯಗೊಳ್ಳುವಂತೆ ತಿಳಿಸಲಾಗಿತ್ತು. ಇದೀಗ ಈ ರೈಲು ತನ್ನ ಪೂರ್ಣ ನಿಯಮಿತ ಮಾರ್ಗವಾದ ಎಸ್‌ಎಸ್‌ಎಸ್ ಹುಬ್ಬಳ್ಳಿ–ವಿಜಯಪುರದವರೆಗೆ ಸಂಚರಿಸಲಿದೆ.ಅದೇ…

Read More

ಎಸ್ಎಸ್ಎಲ್ಸಿ ಪರೀಕ್ಷಾ‌ ಕೇಂದ್ರ, ವೆಬ್ ಕಾಸ್ಟಿಂಗ್ ಕೇಂದ್ರಕ್ಕೆ ಜಿಪಂ ಸಿಇಒ ರಿಷಿ ಆನಂದ ಭೇಟಿ

ಸಪ್ತಸಾಗರ ವಾರ್ತೆ,ವಿಜಯಪುರ, ಮಾರ್ಚ್ 23: ಎಸ್ಎಸ್ಎಲ್ಸಿ ಪರೀಕ್ಷೆ ಯಶಸ್ವಿ ಹಾಗೂ ಪಾರದರ್ಶಕವಾಗಿ ನಡೆಯುವ ನಿಟ್ಟಿನಲ್ಲಿ ವಿಜಯಪುರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರು ಸೋಮವಾರ ನಗರದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಹಾಗೂ ಪರೀಕ್ಷಾ ವೆಬ್ ಕಾಸ್ಟಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಮಿನಿ ಸಭಾಂಗಣದಲ್ಲಿ ಸ್ಥಾಪಿಸಲಾದ ಜಿಲ್ಲಾ ವೆಬ್ ಕಾಸ್ಟಿಂಗ್ ಕೇಂದ್ರಕ್ಕೆ ಭೇಟಿ ನೀಡಿ, ಜಿಲ್ಲೆಯಾದ್ಯಂತ ನಡೆಯುತ್ತಿರುವ ಪರೀಕ್ಷೆಗಳ ನೇರ ವೀಕ್ಷಣಾ ವ್ಯವಸ್ಥೆಯನ್ನು ಪರಿಶೀಲಿಸಿದರು. ತಾಂತ್ರಿಕ ವ್ಯವಸ್ಥೆಗಳು ದೋಷ ರಹಿತವಾಗಿ ಕಾರ್ಯ ನಿರ್ವಹಿಸುವಂತೆ…

Read More

ದೇವರ ದಾಸಿಮಯ್ಯನವರ ವಚನಗಳ ಸಾರ ಸಮಾಜಕ್ಕೆ ದಾರಿ ದೀವಿಗೆ: ಡಾ. ಔದ್ರಾಮ

ಸಪ್ತಸಾಗರ ವಾರ್ತೆ, ವಿಜಯಪುರ, ಮಾ.23:ಜೀವನ ಎಂಬ ರಥದಲ್ಲಿ ಭಕ್ತಿ ಎಂಬ ಕೀಲಿ ಪ್ರತಿಯೊಬ್ಬರಿಗೂ ಅತೀ ಮುಖ್ಯ ಎಂದು ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಅವರು ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಆಯೋಜಿಸಿದ ದೇವರ ದಾಸಿಮಯ್ಯ ಅವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.ಇಂದಿನ‌ ಒತ್ತಡದ‌ ಬದುಕಿನಲ್ಲಿ‌ ಬಹುತೇಕರು ಭಕ್ತಿ‌ಮಾರ್ಗದಿಂದ‌ ವಿಮುಖರಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು, ಅದೆಷ್ಟೇ ಒತ್ತಡ ಇದ್ದರೂ ಪ್ರತಿಯೊಬ್ಬರೂ ಭಕ್ತಿ…

Read More

ಚೀಟಿ ಕಂಪನಿ :ಆಕ್ಷೇಪಣೆ ಆಹ್ವಾನ

ಸಪ್ತಸಾಗರವಾರ್ತೆ,ವಿಜಯಪುರ,ಮಾ.23:ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸದೇ ಇರುವ ಹಾಗೂ ಗುಂಪುಗಳನ್ನು ರಚಿಸದೇ ಇರುವ ಚೀಟಿ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಸಹಕಾರ ಸಂಘಗಳ ಉಪನಿಬಂಧಕರುತಿಳಿಸಿದ್ದಾರೆ.ಈ ಪ್ರಕಟಣೆ ಹೊರಡಿಸಿದ 07 ದಿನದಲ್ಲಿ ಸಂಬಂಧಪಟ್ಟ ಚೀಟಿ ಕಂಪನಿಯ ಪೋರಮನ್‌ಗಳು ಆಕ್ಷೇಪಣೆಗಳಿದ್ದರೆ ನೇರವಾಗಿ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿ ಸಂಪರ್ಕಿಸಬಹುದಾಗಿದೆ.ಒಂದು ವೇಳೆ ಯಾವುದೇ ಆಕ್ಷೇಪಣೆಗಳು ಇಲ್ಲದಿದ್ದರೆ ಗುಂಪುಗಳ ರಚಿಸದೆ ಇರುವಂತಹ ಕಂಪನಿಗಳ ಹೆಸರನ್ನು ಇಲಾಖೆಯಲ್ಲಿ ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.ವಿಜಯಪುರ ಜಿಲ್ಲೆಯಲ್ಲಿ ಒಟ್ಟು 38 ಚೀಟಿ ನಿಧಿಗಳ ಕಂಪನಿಗಳಿದ್ದು…

Read More

ಅಮೆರಿಕ ಸಮ್ಮೇಳನದಲ್ಲಿ ಡಾ. ಅರುಣ ಇನಾಮದಾರ ಭಾಗಿ

ಸಪ್ತಸಾಗರ ವಾರ್ತೆ, ವಿಜಯಪುರ, ಮಾ. 23:ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ‌ ಡೀಮ್ಡ್ ವಿಶ್ವವಿದ್ಯಾಲಯ ಕುಲಪತಿ ಡಾ. ಅರುಣ ಚಂ. ಇನಾಮದಾರ ಅವರು ಅಮೆರಿಕದಲ್ಲಿ ನಡೆಯಲಿರುವ ಅಮೆರಿಕನ್ ಅಕ್ಯಾಡೆಮಿ ಆಫ್ ಡರ್ಮೆಟಾಲಾಜಿ‌ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.ಅಮೆರಿಕದಲ್ಲಿರುವ ಡೆನವರ್ ನಲ್ಲಿ ಈ ಸಮ್ಮೇಳನ ಮಾರ್ಚ 26 ರಿಂದ ಮಾರ್ಚ್31ರ ವರೆಗೆ ಆರು ದಿನಗಳ ಕಾಲ ನಡೆಯಲಿದೆ.ಇದೇ ವೇಳೆ, ಮಾರ್ಚ್ 25ರಂದು ಚಿಕ್ಯಾಗೋದ ಪ್ರತಿಷ್ಠಿತ ಇಲಿನಾಯಿಸ ವಿಶ್ವವಿದ್ಯಾಲಯದಲ್ಲಿ ಚಿಕ್ಕ ಮಕ್ಕಳಲ್ಲಿ ಚರ್ಮ ರೋಗ ವಿಷಯ ಕುರಿತು ಇನಾಮದಾರ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಅಲ್ಲದೇ,…

Read More

ಆನೆ ಬೆಲೆ ಎತ್ತಿಗೆ, ಎತ್ತಿನ ಬೆಲೆ ಕುರಿಗೆ, ಕುರಿ ಬೆಲೆ ಕೋಳಿಗೆ, ಕೋಳಿ ಬೆಲೆ ಮನುಷ್ಯನಿಗೆ ಅಂದರೆ ಮನುಷ್ಯನಿಗೆ ಯಾವ ಕಿಮ್ಮತ್ತೂ ಉಳಿದಿಲ್ಲ:ಶಿವಯ್ಯ ಸ್ವಾಮೀಜಿಗಳ ಕಾಲಜ್ಞಾನ ಭವಿಷ್ಯ

ಸಪ್ತಸಾಗರ ವಾರ್ತೆ, ವಿಜಯಪುರ, ಮಾ. 22:ಶುದ್ಧ, ನಂಬಿಕೆ, ಕರ್ತವ್ಯ ಒಂದೆಡೆ ಸೇರಿದರೆ ಜಗತ್ತು ಉದ್ಧಾರವಾಗುತ್ತದೆ. ಗಲ್ಫ್ ರಾಷ್ಟ್ರಗಳಲ್ಲಿ ಯುದ್ಧ ನಡೆದರೆ ಇಲ್ಲಿಯೂ ಇದ್ದಂತೆ. ಅಕ್ರಾಳ, ವಿಕ್ರಾಳ, ಕರಾಳ ಈ ಬಾರಿಯೂ ಇದ್ದದ್ದೇ, ಯುದ್ದ ಅಲ್ಲಿ ಅಷ್ಟೇ ಅಲ್ಲ ಇಲ್ಲಿಯೂ ಇದ್ದಂತೆಯೇ ಎಂದು ಕತಕನಹಳ್ಳಿಯ ಶ್ರೀ ಶಿವಯ್ಯ ಮಹಾಸ್ವಾಮೀಜಿ ಕಾಲಜ್ಞಾನದ ಹೇಳಿಕೆ ನುಡಿದರು.ಸುಕ್ಷೇತ್ರ ಕತಕನಹಳ್ಳಿಯಲ್ಲಿ ಶ್ರೀ ಗುರುಚಕ್ರವರ್ತಿ ಸದಾಶಿವ ಮುತ್ತ್ಯಾ ಅವರ ಜಾತ್ರಾ ಮಹೋತ್ಸವ ಪ್ರಯುಕ್ತ ಗುರು ಕರುಣೆಯ ಮೂಲಕ ಶ್ರೀ ಶಿವಯ್ಯ ಮಹಾಸ್ವಾಮೀಜಿ ಭವಿಷ್ಯದ ಕಾಲಜ್ಞಾನ ಹೇಳಿಕೆ…

Read More