ಕಬ್ಬಿನ ಪಡಕ್ಕೆ ಬೆಂಕಿ:ಓರ್ವ ವ್ಯಕ್ತಿ ಸಜೀವ ದಹನ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 16:ಕಬ್ಬಿನ ಗದ್ದೆಗೆ ಬಿದ್ದ ಬೆಂಕಿ ನಂದಿಸಲು ಹೋದ ವ್ಯಕ್ತಿಯೊಬ್ಬ ಸಜೀವ ದಹನಗೊಂಡಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಬನಹಟ್ಟಿ ಪಿಎ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.ಇಲ್ಲಿನ ಮಲ್ಲನಗೌಡ ಬಿರಾದಾರ ಉರ್ಫ್ ಮೇಲಿನಮನಿ ಸಜೀವ ದಹನಗೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ.ಮಲ್ಲನಗೌಡ ಬಿರಾದಾರ ಅವರಿಗೆ ಸೇರಿದ ಹೊಲದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಬೆಂಕಿಯ ಕೆನ್ನಾಲಿಗೆ ಇಡೀ ಕಬ್ಬಿನ ಪಡಕ್ಕೆ ವ್ಯಾಪಿಸಿದೆ. ಆಗ ಇದನ್ನು ಕಂಡ ಮಲ್ಲನಗೌಡ ಅವರು ಬೆಂಕಿ ನಂದಿಸಲು ಹೋದ ವೇಳೆ…

Read More

ಅರ್ಥಪೂರ್ಣ ಗಣರಾಜ್ಯೋತ್ಸವ ಆಚರಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಿ-ಡಿಸಿ

ಸಪ್ತಸಾಗರ ವಾರ್ತೆ, ವಿಜಯಪುರ, ಜ.16:ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜನವರಿ 26 ರಂದು ಗಣರಾಜ್ಯೋತ್ಸವ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ದತೆಗೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಾದ ಡಾ.ಆನಂದ.ಕೆ ಅವರು ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಗಣರಾಜ್ಯೋತ್ಸವ ಆಚರಣೆಯ ಕುರಿತು ನಡೆದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದ ಅವರು, ಯಾವುದೇ ಗೊಂದಲಕ್ಕೆ ಆಸ್ಪದ ಕೊಡದೇ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಸೂಚಿಸಿದರು.ಅಧಿಕಾರಿಗಳು ತಮಗೆ ವಹಿಸಿದ ಎಲ್ಲ ಕಾರ್ಯಗಳನ್ನು‌ ಜವಾಬ್ದಾರಿಯಿಂದ ನಿರ್ವಹಿಸಿ,ವಿವಿಧ ಸಮಿತಿಗಳ‌ನ್ನು ರಚಿಸಿದ್ದು, ಸಮಿತಿಯಲ್ಲಿ ವಿವಿಧ…

Read More

ಶ್ರೀ ಸಿದ್ದರಾಮಾನಂದ ಸ್ವಾಮೀಜಿ ನಿಧನಕ್ಕೆ ಮಾಜಿ ಸಚಿವ ಆರ್.ಕೃಷ್ಣಪ್ಪ ತೀವ್ರ ಸಂತಾಪ

ಸಪ್ತಸಾಗರ ವಾರ್ತೆ, ಬೆಂಗಳೂರು, ಜ. 15: ತಿಂಥಣಿ ಬ್ರಿಜ್ಡ್ ನ ಶ್ರೀ ಕಾಗಿನೆಲೆ ಕನಕ ಗುರು ಪೀಠದ ಶ್ರೀ ಶ್ರೀ ಶ್ರೀ ಸಿದ್ಧರಾಮಾನಂದ ಮಹಾಸ್ವಾಮಿಗಳು ನಮ್ಮನ್ನು ಅಗಲಿದ ಸುದ್ದಿ ಆಘಾತಕಾರಿಯಾದದ್ದು.ಸ್ವಾಮೀಜಿ ಅವರ ಅಗಲಿಕೆ ಸಮಾಜಕ್ಕಾದ ಬಹುದೊಡ್ಡ ನಷ್ಟ ಎಂದು ಮಾಜಿ ಸಚಿವ ಆರ್.ಕೃಷ್ಣಪ್ಪ ಕಂಬನಿ ಮಿಡಿದಿದ್ದಾರೆ.ಮಹಾನ್ ಆಧ್ಯಾತ್ಮಿಕ ಗುರುಗಳಾಗಿದ್ದ ಸ್ವಾಮೀಜಿ ಸಮಾಜ ಸುಧಾರಣೆಯ ಭಾಗವಾಗಿ ಉಚಿತ ಶಿಕ್ಷಣದ ಜೊತೆಗೆ ದಾಸೋಹ, ಸಾಮೂಹಿಕ ವಿವಾಹ, ಆರೋಗ್ಯ ಶಿಬಿರ,ರಕ್ತದಾನ ಶಿಬಿರ ಸೇರಿದಂತೆ ಅನೇಕ ಜನೋಪಕಾರಿ ಕಾರ್ಯಗಳ ಮೂಲಕ ಮಾರ್ಗದರ್ಶಿಗಳಾಗಿದ್ದರು. ಅವರ…

Read More

ನರೇಗಾ ಯೋಜನೆ ಹೆಸರು ಬದಲಾವಣೆ ಕುರಿತು ವಿಶೇಷ ಅಧಿವೇಶನ: ಕಾರಜೋಳ ವಿರೋಧ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 15 :ನರೇಗಾ ಯೋಜನೆ ಹೆಸರು ಬದಲಾವಣೆ ವಿಷಯದ ವಿರುದ್ಧ ವಿಶೇಷ ಅಧಿವೇಶನ ಕರೆಯುತ್ತಿರುವುದು ಸರಿಯಲ್ಲ.ಅದಕ್ಕಿಂತಲೂ ಪ್ರಮುಖವಾದ ಒಳ ಮೀಸಲಾತಿ ಲೋಪದೋಷ ಸರಿಪಡಿಸಲು, ಖಾಲಿ ಇರುವ ಹುದ್ದೆ ಭರ್ತಿ ಮೊದಲಾದ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ಮಾಡಲು ವಿಶೇಷ ಅಧಿವೇಶನ ಕರೆಯಿರಿ ಅದನ್ನು ಬಿಟ್ಟು ರಾಜಕೀಯ ಉದ್ದೇಶ ಇರಿಸಿಕೊಂಡು ವಿಶೇಷ ಅಧಿವೇಶನ ಕರೆಯುತ್ತಿರುವುದು ಯಾವ ಕಾರಣಕ್ಕೂ ಸರಿಯಲ್ಲ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಹೇಳಿದ್ದಾರೆ.ಈ ಕುರಿತು…

Read More

ಅಕ್ರಮವಾಗಿ ಗೃಹಬಳಕೆ ಸಿಲಿಂಡರ್ ಬಳಕೆ:ಆಹಾರ ಇಲಾಖೆ ದಾಳಿ-ವಶ

ಸಪ್ತಸಾಗರ ವಾರ್ತೆ, ವಿಜಯಪುರ,ಜ.15 :ವಿಜಯಪುರ ನಗರದ ಗೋಲ್ ಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಿಂಭಾಗದ ಹಳೆಯ ಪಾಳುಬಿದ್ದ ಮನೆಯಲ್ಲಿ ಗೃಹ ಬಳಕೆ ಸಿಲಿಂಡರ್ ಬಳಸಿ‌ ಅಕ್ರಮವಾಗಿ ವಾಣಿಜ್ಯ ಬಳಕೆಯ ಸಿಲಿಂಡರ್ ತುಂಬಿಸುತ್ತಿದ್ದ ಸ್ಥಳಕ್ಕೆ ಆಹಾರ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿ ದಾಳಿ ನಡೆಸಿ,41 ಗೃಹ ಬಳಕೆ ಸಿಲಿಂಡರ್ , 21 ವಾಣಿಜ್ಯ ಬಳಕೆ ಸಿಲಿಂಡರ್, ಮೋಟಾರ್ ಯಂತ್ರ ಮತ್ತು ತೂಕದ ಯಂತ್ರಗಳನ್ನು ವಶಕ್ಕೆ ಪಡೆದುಕೊಂಡು, ಗೋಲ್ ಗುಂಬಜ್ ಪೊಲೀಸ್ ಠಾಣೆಯಲ್ಲಿ…

Read More

ಸಿದ್ದೇಶ್ವರ ಸಂಕ್ರಮಣ ಜಾತ್ರೆ: ನಂದಿ ಧ್ವಜಗಳ ಉತ್ಸವ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 15: ಶ್ರೀ ಸಿದ್ಧೇಶ್ವರ ಸಂಸ್ಥೆಯ ಸಂಕ್ರಮಣದ ಮಹೋತ್ಸವ ಅಂಗವಾಗಿ ವಿಜಯಪುರ ನಗರ ಶಾಸಕರು, ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ (ಯತ್ನಾಳ) ಅವರು ನಂದಿ ಧ್ವಜಗಳಿಗೆ ಪೂಜೆ ಸಲ್ಲಿಸಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಂತರ ನಗರ ಪ್ರಮುಖ ಬೀದಿಗಳಲ್ಲಿ ನಂದಿ ಧ್ವಜಗಳ ಮೆರವಣಿಗೆ ನಡೆಯಿತು.ಸಂಸ್ಥೆಯ ಉಪಾಧ್ಯಕ್ಷ ಸಂ.ಗು. ಸಜ್ಜನ, ಚೇರಮನ್‌ ಬಸಯ್ಯಾ ಹಿರೇಮಠ, ಕಾರ್ಯದರ್ಶಿಗಳಾದ ಸದಾನಂದ ದೇಸಾಯಿ, ಬಿ.ಎಸ್. ಸುಗೂರ, ಜಂಟಿ ಕಾರ್ಯದರ್ಶಿ, ಎಂ.ಎಂ. ಸಜ್ಜನ, ಕೋಶಾಧ್ಯಕ್ಷ ಶಿವಾನಂದ ನೀಲಾ, ಜಾತ್ರಾ ಸಮಿತಿಯ…

Read More

ಶ್ರೀ ಸಿದ್ದರಾಮಾನಂದ ಮಹಾಸ್ವಾಮಿಗಳ ನಿಧನಕ್ಕೆ ಕುರುಬ ಸಮಾಜ ಮುಖಂಡರ ಶ್ರದ್ಧಾಂಜಲಿ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 15: ಕಾಗಿನೆಲೆ ಮಹಾ ಸಂಸ್ಥಾನ ,ಕನಕ ಗುರು ಪೀಠ ಶಾಖಾಮಠ ತಿಂತಣಿ ಬ್ರಿಡ್ಜ್ ಗುಲ್ಬರ್ಗ ವಿಭಾಗೀಯ ಪೀಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಸಿದ್ದರಾಮಾನಂದ ಮಹಾಸ್ವಾಮಿಗಳು ತೀವ್ರ ಹೃದಯಘಾತದಿಂದ ನಿಧನರಾದ ಹಿನ್ನೆಲೆಯಲ್ಲಿ ವಿಜಯಪುರ ನಗರದ ಅವರ ಅಪಾರ ಭಕ್ತರು ತುರ್ತಾಗಿ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ಸೇರಿ ಶ್ರದ್ಧಾಂಜಲಿ ಸಭೆ ನಡೆಸಿದರು.ಸಭೆಯಲ್ಲಿ ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ, ಚಂದ್ರಕಾಂತ ಬಿಜ್ಜರಗಿ ,ರವಿ ಕಿತ್ತೂರ, ಮಲ್ಲು ಬಿದರಿ, ಬೀರಪ್ಪ ಜುಮನಾಳ, ಅನಿಲ್ ಇಕ್ಕಡೆ, ಮೋಹನ ದಳವಾಯಿ,…

Read More

ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದ ಸಿದ್ದರಾಮಾನಂದ ಪುರಿ ಮಹಾಸ್ವಾಮಿಗಳ ನಿಧನಕ್ಕೆ ಸಿಎಂ ಸಂತಾಪ

ಸಪ್ತಸಾಗರ ವಾರ್ತೆ, ಬೆಂಗಳೂರು, ಜ. 15:ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದ ಸಿದ್ದರಾಮಾನಂದ ಪುರಿ ಮಹಾಸ್ವಾಮಿಗಳು ಶಾಖಾ ಮಠ ತಿಂಥಿಣಿ ಬ್ರಿಜ್ ಕಲಬುರ್ಗಿ ವಿಭಾಗೀಯ ಪೀಠದ ಪರಮಪೂಜ್ಯ ಶ್ರೀ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.ಶ್ರೀಗಳು ದೈವಾಧೀನರಾದ ಸುದ್ದಿ ನೋವುಂಟು ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ ಸಿಎಂ ಸಿದ್ದರಾಮಯ್ಯ ಅವರು,ಧಾರ್ಮಿಕ ಕಾರ್ಯಗಳ ಜೊತೆಗೆ ಸಮಾಜದ ಏಳಿಗೆಯ ಬಗ್ಗೆ ಅಪಾರ ಕಾಳಜಿ, ಶ್ರದ್ಧೆ ಹೊಂದಿದ್ದ ಶ್ರೀಗಳ‌ ಅಗಲಿಕೆ ನಾಡಿಗೆ ತುಂಬಲಾರದ…

Read More

ನನ್ನ ಟ್ವೀಟ್ ಅನ್ನು ಬೇರೆ ರೀತಿ ವ್ಯಾಖ್ಯಾನ ಮಾಡುವುದರಲ್ಲಿ ಅರ್ಥವಿಲ್ಲ- ಡಿಕೆಶಿ

ಸಪ್ತಸಾಗರ ವಾರ್ತೆ ಬೆಂಗಳೂರು, ಜ.15:“ರಾಹುಲ್ ಗಾಂಧಿ ಅವರನ್ನು ನಾನು ಭೇಟಿ ಮಾಡುವುದು ಹೊಸತೇನಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು.ರಾಹುಲ್ ಗಾಂಧಿ ಅವರ ಭೇಟಿಗೆ ಸಮಯ ಕೇಳಿದ್ದೀರಾ ಎಂದು ಪ್ರಶ್ನಿಸಿದಾಗ, “ನಾಳೆ ದೆಹಲಿಗೆ ಹೋದಾಗ ಎಲ್ಲಾ ನಾಯಕರು ಅಲ್ಲೇ ಇರುತ್ತಾರೆ. ಭೇಟಿ ಮಾಡುತ್ತೇನೆ”ಎಂದರು.ರಾಹುಲ್ ಗಾಂಧಿ ಅವರ ಭೇಟಿ ನಂತರ ನಿಮ್ಮ ಬೆಂಬಲಿಗ ಶಾಸಕರು ಸಂತೋಷವಾಗಿದ್ದಾರೆ ಎಂದು ಕೇಳಿದಾಗ, “ಅವರು ನಮ್ಮ ಪಕ್ಷದ ನಾಯಕರು.ನಮ್ಮ…

Read More

ವಿವೇಕ ವಿದ್ಯಾರ್ಥಿ ಪರೀಕ್ಷೆ : ರಾಜ್ಯಕ್ಕೆ ೧೦ನೇ ರ‍್ಯಾಂಕ್

ಸಪ್ತಸಾಗರ ವಾರ್ತೆ, ವಿಜಯಪುರ,ಜ. 15: ರಾಮಕೃಷ್ಣ-ವಿವೇಕಾನಂದ ಆಶ್ರಮ ತುಮಕೂರು ಇವರು ನಡೆಸಿದ ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಂದೇಶಗಳ ಕುರಿತಾದ ರಾಜ್ಯ ಮಟ್ಟದ ವಿವೇಕ ವಿದ್ಯಾರ್ಥಿ ಪರೀಕ್ಷೆಯಲ್ಲಿ ಎಕ್ಸಲಂಟ್ ಕನ್ನಡ ಮಾಧ್ಯಮ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿ ಕುಮಾರ ಜೀವನ ಕಾಮಗೊಂಡ, ಈ ವಿದ್ಯಾರ್ಥಿಯು ಉತ್ತಮ ಅಂಕಗಳಿಸಿ ರಾಜ್ಯಕ್ಕೆ ೧೦ನೇ ರ‍್ಯಾಂಕ್ ಪಡೆದುಕೊಂಡಿದ್ದಾನೆ. ಜ. 11 ರಂದು ತುಮಕೂರಿನಲ್ಲಿ ರಾಮಕೃಷ್ಣ-ವಿವೇಕಾನಂದ ಆಶ್ರಮದ ವತಿಯಿಂದ ನಡೆದ ಸಮಾರಂಭದಲ್ಲಿ ಸನ್ಮಾನಿತನಾಗಿರುತ್ತಾನೆ. ವಿದ್ಯಾರ್ಥಿಯ ಈ ಸಾಧನೆಗೆ ಎಕ್ಸಲಂಟ್ ಸಂಸ್ಥೆಯ ಚೇರಮನ್ ಬಸವರಾಜ…

Read More