ರೈಲ್ವೆ ಗ್ರಾಹಕರಿಗೆ ಸಿಹಿ ಸುದ್ದಿ

ಸಪ್ತಸಾಗರ ವಾರ್ತೆ, ಹುಬ್ಬಳ್ಳಿ, ಫೆ. 10: ರೈಲ್ವೆಗ್ರಾಹಕರಿಗೆ ಸಿಹಿ ಸುದ್ದಿ. ರೇಲ್ವೆ ಸೇವೆ ಎಲ್ಲವೂ ಒಂದೇ ಕಡೆ ಸಿಗುವಂತೆ ರೈಲ್ವೆ ಇಲಾಖೆ ರೈಲ್ಒನ್ ಸೂಪರ್ ಆ್ಯಪ್ ಅಭಿವೃದ್ಧಿ ಪಡಿಸಿದೆ.ಭಾರತೀಯ ರೈಲ್ವೆಯು ತನ್ನ ಅಧಿಕೃತ ‘ಆಲ್-ಇನ್-ಒನ್’ ಸೂಪರ್ ಆ್ಯಪ್ ಆದ ‘ರೈಲ್ಒನ್‘ (RailOne) ಅನ್ನು ಬಿಡುಗಡೆ ಮಾಡಿದೆ. ಇದು ಪ್ರಯಾಣಿಕರಿಗೆ ಹಲವಾರು ರೈಲ್ವೆ ಸೇವೆಗಳನ್ನು ಪಡೆಯಲು ಸುಲಭ ಮತ್ತು ಅನುಕೂಲಕರ ಡಿಜಿಟಲ್ ವೇದಿಕೆಯನ್ನು ಒದಗಿಸುತ್ತದೆ. ಈ ಅಪ್ಲಿಕೇಶನ್ ಹಲವಾರು ಪ್ರಯಾಣಿಕ ಸೌಲಭ್ಯಗಳನ್ನು ಒಂದೇ ಅಪ್ಲಿಕೇಶನ್’ನಲ್ಲಿ ಒಳಗೊಂಡಿದ್ದು, ರೈಲ್ವೆ ಪ್ರಯಾಣವನ್ನು…

Read More

ಜಿಲ್ಲೆಯ ಸಹಕಾರ ಸಂಘಗಳು ಲೆಕ್ಕ ಪರಿಶೋಧಕರ ನೇಮಕಾತಿಗೆ ಸೂಚನೆ

ಸಪ್ತಸಾಗರ ವಾರ್ತೆ,ವಿಜಯಪುರ, ಫೆ.10: ಜಿಲ್ಲೆಯಲ್ಲಿರುವ ನೋಂದಾಯಿತ ಸಹಕಾರ ಸಂಘಗಳು 2025-26ನೇ ಸಾಲಿನ ಲೆಕ್ಕಪರಿಶೋಧನೆಗೆ ಈವರೆಗೂ ಠರಾವನ್ನು ಸಲ್ಲಿಸದ ಸಹಕಾರ ಸಂಘಗಳು ಈ ಪ್ರಕಟಣೆಯ 7 ದಿನಗಳೊಳಗಾಗಿ ವಾರ್ಷಿಕ ಮಹಾಸಭೆಯಲ್ಲಿ ಲೆಕ್ಕಪರಿಶೋಧಕರನ್ನು-ಲೆಕ್ಕಪರಿಶೋಧನಾ ಫರ್ಮನ್ನು ನೇಮಕಾತಿ ಮಾಡಿಕೊಂಡು ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಅಧ್ಯಕ್ಷರ ಸಹಿಯೊಂದಿಗೆ ಮಾಹಿತಿಯನ್ನು ಜಂಟಿ ನಿರ್ದೇಶಕರ ಕಚೇರಿ, ಲೆಕ್ಕಪರಿಶೋಧನಾ ಇಲಾಖೆ, ಕಾರ್ಮಿಕ ಇಲಾಖಾ ಕಟ್ಟಡ, ಸಿಂದಗಿ ನಾಕಾ ಹತ್ತಿರ, ಅಲ್ಲಾಪೂರ ಓಣಿ, ವಿಜಯಪುರ ಕಚೇರಿಗೆ ಸಲ್ಲಿಸುವಂತೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಈ ಕುರಿತಂತೆ ಹೆಚ್ಚಿನ…

Read More

ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಆರು ಎಕರೆ ಕಬ್ಬು ನಾಶ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 10 :ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಆರು ಎಕರೆಯಲ್ಲಿದ್ದ ಕಬ್ಬು ಸುಟ್ಟು ಕರಕಲಾಗಿರುವ ಘಟನೆ ಸಿಂದಗಿ ತಾಲೂಕಿನ ಸುಂಗಠಾಣ ಗ್ರಾಮದಲ್ಲಿ ನಡೆದಿದೆ.ಸುಂಗಠಾಣ ಗ್ರಾಮದ ಹನಮಂತಪ್ಪ ಗುರಲಿಂಗಪ್ಪ ಬಿರಾದಾರ ಉರ್ಫ್ ಕುರನಳ್ಳಿ ಅವರ 6 ಎಕರೆ ಜಮೀನಿನಲ್ಲಿ ಬೆಳೆದು ನಿಂತ ಕಬ್ಬು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಂಪೂರ್ಣವಾಗಿ ಸುಟ್ಟಿದೆ.ಮಂಗಳವಾರ ಮಧ್ಯಾಹ್ನ ಸುಮಾರು 3 ಗಂಟೆ ಸುಮಾರಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿದೆ.ಜಮೀನಿನಲ್ಲಿ ಬೆಳೆದು ನಿಂತಿರುವ ಅಂದಾಜು 7…

Read More

ಸರ್ಕಾರಿ ಕಡತಗಳಲ್ಲಿ ವಿಜಯಪುರ ಬರೆಯಿರಿ- ಸಂದೀಪ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 10:ವಿಜಯಪುರ ಐತಿಹಾಸಿಕ ವೈಶಿಷ್ಟ್ಯಗಳನ್ನು ಹೊಂದಿರುವ ಅಪೂರ್ವ ನಗರ. 2014 ರಲ್ಲಿಯೇ ಮಹಾನಗರವಾಗಿ ರೂಪುಗೊಂಡಿದೆ. ಆದರೂ ಇಂದಿಗೂ ಅನೇಕ ಕಡೆಗಳಲ್ಲಿ, ಸರ್ಕಾರಿ ದಸ್ತಾವೇಜುಗಳಲ್ಲಿ ನಗರ ಎಂದೇ ಬರೆಯಲಾಗುತ್ತದೆ, ಹೀಗಾಗಿ ಕಡ್ಡಾಯವಾಗಿ ವಿಜಯಪುರ ಮಹಾನಗರ ಎಂದು ಬರೆಯುವಂತಾಗಬೇಕು ಎಂದು ಬಿಜೆಪಿ ನಗರ ಅಧ್ಯಕ್ಷ ಸಂದೀಪ ಪಾಟೀಲ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಇನ್ನೂ ಅನೇಕರು ವಿಜಯಪುರ ನಗರ ಎಂದೇ ಪದ ಪ್ರಯೋಗಿಸುತ್ತಿದ್ದಾರೆ. ಹೀಗಾಗಿ ವಿಜಯಪುರ ಮಹಾನಗರ ಎಂಬ ಉದ್ಘೋಷದೊಂದಿಗೆ ಜನಮಾನಸದಲ್ಲಿರಬೇಕು ಎಂಬದು…

Read More

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರ ಜಿಲ್ಲಾ ಪ್ರವಾಸ

ಸಪ್ತಸಾಗರ ವಾರ್ತೆ, ವಿಜಯಪುರ,ಫೆ.10: ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್.ಪಾಟೀಲ (ಬ್ಯಾಡಗಿ) ಅವರು, ಫೆ.13ರಂದು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ಫೆ.13ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ವಿಜಯಪುರ ಜಿಲ್ಲಾ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸುವ ಅವರು, ಫೆ.21ರಂದು ನಡೆಯುವ ವಿಜಯಪುರ ಜಿಲ್ಲಾ ಕರ್ನಾಟಕ ಗ್ಯಾರಂಟಿ ಯೋಜನೆಗಳ ಉತ್ಸವ, ಕಾರ್ಯಾಗಾರದ ಪೂರ್ವ ಸಿದ್ಧತೆಗಳ ಪರಿಶೀಲನೆ ನಡೆಸುವರು. ಅಂದು ಮಧ್ಯಾಹ್ನ 1 ಗಂಟೆಗೆ ವಿಜಯಪುರದಿಂದ ಬಾಗಲಕೋಟೆಗೆ…

Read More

ರೂ.2 ಕೋಟಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಯತ್ನಾಳರಿಂದ ಭೂಮಿಪೂಜೆ

ಸಪ್ತಸಾಗರ ವಾರ್ತೆ, ವಿಜಯಪುರ,, ಫೆ. 10:ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮಂಗಳವಾರ ನಗರದಲ್ಲಿ ರೂ.2 ಕೋಟಿ ಅನುದಾನದಲ್ಲಿ ಕೈಗೊಳ್ಳಲಾಗುತ್ತಿರುವ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ, ಸಾರ್ವಜನಿಕರಿಂದ ಅಹವಾಲು ಆಲಿಸಿದರು.ರೂ.1 ಕೋಟಿ ಮೊತ್ತದಲ್ಲಿ ನಗರದ ವಾರ್ಡ್ ನಂ.23 ರಲ್ಲಿ ಬರುವ ಪುಲಕೇಶಿ ನಗರ ಮುಖ್ಯ ರಸ್ತೆಯಿಂದ ಜಗಜ್ಯೋತಿ ಬಸವೇಶ್ವರ ಕಾಲೇಜು ವರೆಗೆ ಹಾಗೂ ಆಂತರಿಕ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಹಾಗೂ ವಾರ್ಡ್ ನಂ.22 ರಲ್ಲಿ ಬರುವ ಕನಕದಾಸ ಬಡಾವಣೆಯ ದೇವರಾಜ ಅರಸು…

Read More

ಕಾರ್ ಸರ್ವಿಸ್ ಸೆಂಟರ್ ಮಾಲೀಕನಿಗೆ ರೂ.5 ಲಕ್ಷ ನೆರವು

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 9: ನಗರದ ಎಚ್.ಎಂ.ಕೆ ಕಾರ್ ಸರ್ವಿಸ್ ಸೆಂಟರ್ ಮಾಲೀಕ ಹನುಮಂತ ಕನಮಡಿ ಅವರಿಗೆ ಸೋಮವಾರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ವೈಯಕ್ತಿಕವಾಗಿ ರೂ.5 ಲಕ್ಷ ಸಹಾಯಧನ ನೀಡಿದರು.ನಗರದ ರಾಷ್ಟ್ರೀಯ ಹೆದ್ದಾರಿ- 50 ರಲ್ಲಿರುವ ಎಚ್.ಎಂ.ಕೆ ಕಾರ್ ಸರ್ವಿಸ್ ಸೆಂಟರ್ ದಲ್ಲಿ ಅಗ್ನಿ ಅವಘಡ ಸಂಭವಿಸಿದ ಹಿನ್ನೆಲೆ ಎರಡು ದಿನಗಳ ಹಿಂದೆ ಸರ್ವಿಸ್ ಸೆಂಟರ್ ಗೆ ಭೇಟಿ ನೀಡಿ ಸಾಂತ್ವನ ಹೇಳಿ, ವೈಯಕ್ತಿಕವಾಗಿ ರೂ.5 ಲಕ್ಷ ನೀಡುವುದಾಗಿ ಘೋಷಿಸಿದ್ದರು. ಅದರಂತೆ…

Read More

ಪಕ್ಷ ಸಂಘಟನೆ ಮತ್ತು ನಿಷ್ಠೆ ಪರಿಗಣಿಸಿ ಸಂಬಣ್ಣಿಗೆ ವಿಡಿಎ ಅಧ್ಯಕ್ಷ ಸ್ಥಾನ:ಸಚಿವ ಎಂ. ಬಿ. ಪಾಟೀಲ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 9: ಪಕ್ಷ ಸಂಘಟನೆ ಮತ್ತು ನಿಷ್ಠೆಯನ್ನು ಪರಿಗಣಿಸಿ ಡಾ. ಗಂಗಾಧರ ಸಂಬಣ್ಣಿ ಅವರಿಗೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಅವರು ಜನ ಮೆಚ್ಚುವ ಕೆಲಸ ಮಾಡುವ ವಿಶ್ವಾಸವಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.ಸಂಬಣ್ಣಿ ಅವರನ್ನು ವಿಡಿಎ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಹಿನ್ನೆಲೆಯಲ್ಲಿ ಇಂದು ಸೋಮವಾರ ಸಚಿವರ ಗೃಹ ಕಚೇರಿಯಲ್ಲಿ ಲಿಂಗಾಯಿತ ಆದಿ ಬಣಜಿಗ ಮತ್ತು ನಾನಾ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು…

Read More

ರಾಜ್ಯ ಬಾರ್ ಕೌನ್ಸಿಲ್ ಚುನಾವಣೆಗೆ ವಕೀಲ ಭೃಂಗಿಮಠ ನಾಮಪತ್ರ ಸಲ್ಲಿಕೆ

ಸಪ್ತಸಾಗರ ವಾರ್ತೆ, ಬೆಂಗಳೂರು, ಫೆ. 9 : ರಾಜ್ಯ ವಕೀಲರ ಪರಿಷತ್ತಿಗೆ ಸ್ಪರ್ಧಿಸುತ್ತಿರುವ ನಾನು ಗೆದ್ದರೆ ಕರ್ನಾಟಕ ರಾಜ್ಯದಲ್ಲಿ ಸುಪ್ರೀಂ ಕೋರ್ಟ್ ಪೀಠ ಸ್ಥಾಪನೆ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಹೋರಾಟ ಮಾಡುವ ಸದಿಚ್ಚೆ ತಮಗಿದೆ ಎಂದು ಪ್ರಖ್ಯಾತ ಹಿರಿಯ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ ಹೇಳಿದರು. ಬೆಂಗಳೂರಿನ ಕೆ ಎಸ್ ಬಿ ಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿ ಹೊರ ಬಂದು ತಮ್ಮ ಬೆಂಬಲಿಗರನ್ನುದ್ದೇಶಿ ಮಾತನಾಡಿದ ಅವರು, ವಕೀಲರ ಹಿತ ಕಾಪಾಡುವುದು ಪರಿಷತ್ತಿನ ಮಹತ್ವದ ಉದ್ದೇಶವಾಗಿದೆ. ಅದಕ್ಕಾಗಿ ವಕೀಲರ ಕಲ್ಯಾಣಕ್ಕಾಗಿ…

Read More

ಫೆ. 13ರಂದು ಸಾಲೋಟಗಿಯಲ್ಲಿ ಜೋಡೆತ್ತುಗಳ ಸಮಾವೇಶ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 9: ವಿಶ್ವ ಗುರು ಬಸವಣ್ಣನವರು ಪ್ರತಿಪಾದಿಸಿದ ಬಸವ ತತ್ವದ ಮೂಲ ಬೇರುಗಳಾದ ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು 11 ಸಾವಿರ ರೂ. ಪ್ರೋತ್ಸಾಹ ಧನವನ್ನು ನೀಡುವ ಅಂಶವನ್ನು ಪ್ರಸಕ್ತ ಬಜೆಟ್‌ನಲ್ಲಿ ಸೇರ್ಪಡೆ ಮಾಡಿ ಬಸವ ತತ್ವದ ಪುನರುತ್ಥಾನಕ್ಕಾಗಿ ಬಜೆಟ್‌ನ ಶೇ.10 ರಷ್ಟು ಅನುದಾನವನ್ನು ಮೀಸಲಿಡುವಂತೆ ವಿಶ್ರಾಂತ ಕೃಷಿ ಅಧಿಕಾರಿ ಬಾಳಾಸಾಹೇಬ ಈಶ್ವರಗೊಂಡ ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೈಲ ತತ್ವ ಆಧಾರಿತ ಟ್ರ್ಯಾಕ್ಟರ್ ಸಂಸ್ಕೃತಿಯ ಕೃಷಿಯಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತಿದೆ. ಬಸವ ತತ್ವಾಧಾರಿತ…

Read More