ಮೋದಿ 25 ವರ್ಷಗಳ ಸಾರ್ವಜನಿಕ ಸೇವೆ: ವಿಜಯಪುರದಲ್ಲಿ ‘ಸೇವಾ ಸಂಕಲ್ಪ’ ಅಭಿಯಾನ

ಸೇವಾ ಜ್ಯೋತಿ ಯಾತ್ರೆಗೆ ಚಾಲನೆ; ಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಪ್ತಸಾಗರ ವಾರ್ತೆ,ವಿಜಯಪುರ, ಅ.7: ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಸೇವೆಯನ್ನು ಅಭಿನಂದಿಸುವ ಉದ್ದೇಶದಿಂದ ವಿಜಯಪುರದ ನಾಗೂರ ಕಾಲೇಜು ಬಳಿಯ ವೃತ್ತದಲ್ಲಿ ಆಯೋಜಿಸಿದ್ದ ‘ಸೇವಾ ಸಂಕಲ್ಪ ಅಭಿಯಾನ ಹಾಗೂ ವಿಕಸಿತ ಭಾರತ ಸಂಕಲ್ಪ ಸಭೆ’ ಯಶಸ್ವಿಯಾಗಿ ನಡೆಯಿತು.ಇತ್ತೀಚೆಗೆ ನಿಧನರಾದ ಬಿಜೆಪಿ ಕಟ್ಟಾ ಕಾರ್ಯಕರ್ತ ಬಸವರಾಜ ಕುಂಬಾರ ಅವರ ಸ್ಮರಣಾರ್ಥ ಕಾರ್ಯಕ್ರಮದ ವೇದಿಕೆಗೆ ಅವರ ಹೆಸರನ್ನಿಟ್ಟು ಗೌರವ ಸಲ್ಲಿಸಲಾಯಿತು.ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ…

Read More

ಮಹಿಳಾ ವಚನ ಕಂಠಪಾಠ ಸ್ಪರ್ಧೆ

ಸಪ್ತಸಾಗರ ವಾರ್ತೆ,ವಿಜಯಪುರ, ಅ.7: ವಚನ ಸಾಹಿತ್ಯ ಸಂಸ್ಕೃತಿ ವೇದಿಕೆಯ ಆಶ್ರಯದಲ್ಲಿ ಕೈಲಾಸವಾಸಿ ಪ್ರಭಾಕರ ಶಂಕರ ಬಸವಪ್ರಭು (ಶಕ್ತಿ) ಸ್ಮರಣಾರ್ಥ 2026-27ನೇ ಸಾಲಿನ ವಿಜಯಪುರ ನಗರಮಟ್ಟದ ಮಹಿಳಾ ವಚನ ಕಂಠಪಾಠ ಸ್ಪರ್ಧೆಯನ್ನು ಅ.25ರಂದು ಬೆಳಿಗ್ಗೆ 10.30ಕ್ಕೆ ನಗರದ ಗೋಳಗುಮ್ಮಟದ ಎದುರಿನ ರಸ್ತೆಯಲ್ಲಿರುವ ಶ್ರೀ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ₹2,001 ನಗದು, ಪ್ರಶಸ್ತಿ ಪತ್ರ ಹಾಗೂ ಪದಕ, ದ್ವಿತೀಯ ಬಹುಮಾನ ₹1,501 ನಗದು, ಪ್ರಶಸ್ತಿ ಪತ್ರ ಹಾಗೂ ಪದಕ ಮತ್ತು ತೃತೀಯ ಬಹುಮಾನ ₹1,001…

Read More

ಕೆಪಿಎಸ್‌ಸಿ ಅಧ್ಯಕ್ಷ, ಸದಸ್ಯರ ಬಂಧನ ಸ್ವಾಗತಾರ್ಹ: ಯತ್ನಾಳ

ಸಪ್ತಸಾಗರ ವಾರ್ತೆ,ವಿಜಯಪುರ, ಅ. 6: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಹಾಗೂ ಆಯೋಗದ ಸದಸ್ಯೆ ಗೀತಾ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.ಕೆಪಿಎಸ್‌ಸಿಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ಭ್ರಷ್ಟಾಚಾರದ ಕುರಿತು ಸಮಗ್ರ ತನಿಖೆ ನಡೆಸಬೇಕು. ಈ ಹಿಂದೆ ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಅಸೋಸಿಯೇಷನ್‌ನೊಂದಿಗೆ ತಾವು ರಿಟ್ ಅರ್ಜಿ ಸಲ್ಲಿಸಿದ್ದಾಗಿ ಅವರು ತಿಳಿಸಿದ್ದಾರೆ.ಅರ್ಹತೆ,…

Read More

ಡಿಸೆಂಬರ್ ಗಡುವು ತಪ್ಪದಂತೆ ಜಲಜೀವನ್ ಕಾಮಗಾರಿ ಪೂರ್ಣಗೊಳಿಸಿ

ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆ ವಹಿಸಿ: ಆನಂದ್ ಪ್ರಕಾಶ್ ಮೀನಾ ಸಪ್ತಸಾಗರ ವಾರ್ತೆ,ವಿಜಯಪುರ, ಅ.6:ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಜಲಜೀವನ್ ಮಿಷನ್ ಸೇರಿದಂತೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಬಾಕಿ ಕಾಮಗಾರಿಗಳನ್ನು ಡಿಸೆಂಬರ್ 2026ರೊಳಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಅ.5ರಂದು ನಡೆದ ಜಿಲ್ಲಾ ನೀರು ಮತ್ತು…

Read More

ಅಕ್ಕನಾಗಮ್ಮನವರ ಬದುಕು ಮಹಿಳೆಯರಿಗೆ ಸ್ಫೂರ್ತಿ: ಶರಣಮ್ಮ ಹಾದಿಮನಿ

ಸಪ್ತಸಾಗರ ವಾರ್ತೆ,ವಿಜಯಪುರ, ಅ. 6:12ನೇ ಶತಮಾನದಲ್ಲಿ ಶರಣರು ಪ್ರತಿಪಾದಿಸಿದ ಸತ್ಯ, ಶುದ್ಧ ಕಾಯಕ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ. ಈ ತತ್ವಗಳನ್ನು ತಮ್ಮ ಬದುಕಿನ ಮೂಲಕ ಸಾಕಾರಗೊಳಿಸಿದವರಲ್ಲಿ ಶರಣೆ ಅಕ್ಕನಾಗಮ್ಮ ಪ್ರಮುಖರು ಎಂದು ಉಪನ್ಯಾಸಕಿ ಶರಣಮ್ಮ ಹಾದಿಮನಿ ಹೇಳಿದರು.ನಗರದ ವೀರಶೈವ ಲಿಂಗಾಯತ ಸಭಾಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ 85ನೇ ಶಿವಾನುಭವ ಗೋಷ್ಠಿಯಲ್ಲಿ ‘ಶರಣೆ ಅಕ್ಕನಾಗಮ್ಮನವರ ಬದುಕು ಮತ್ತು ಅನುಭವ’ ಕುರಿತು ಅವರು ಮಾತನಾಡಿದರು.ಅಕ್ಕನಾಗಮ್ಮ ಅವರು ಬಸವಾದಿ…

Read More

ವರುಣಾ ಜನರ ಆಶೀರ್ವಾದದಿಂದಲೇ ಎರಡು ಬಾರಿ ಸಿಎಂ, ಎರಡು ಬಾರಿ ವಿಪಕ್ಷ ನಾಯಕ: ಸಿದ್ದರಾಮಯ್ಯ

ಸಪ್ತಸಾಗರ ವಾರ್ತೆ,ಮೈಸೂರು, ಅ.5: ವರುಣಾ ಕ್ಷೇತ್ರದ ಜನರು ನೀಡಿದ ಆಶೀರ್ವಾದ, ಬೆಂಬಲ ಹಾಗೂ ಶಕ್ತಿಯಿಂದಲೇ ತಾವು ಎರಡು ಬಾರಿ ಮುಖ್ಯಮಂತ್ರಿಯಾಗಿ ಹಾಗೂ ಎರಡು ಬಾರಿ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ವರುಣಾ ಕ್ಷೇತ್ರದ ದಾಸನೂರು ಗ್ರಾಮದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಮಹಿಳಾ ವಸತಿ ನಿಲಯ ಉದ್ಘಾಟನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವರುಣಾ ಕ್ಷೇತ್ರದ ಜನರ ಋಣವನ್ನು ಎಂದಿಗೂ ಮರೆಯುವುದಿಲ್ಲ ಎಂದರು.ಕ್ಷೇತ್ರದಲ್ಲಿ ಒಟ್ಟು…

Read More

ಅನುದಾನಿತ-ಅನುದಾನರಹಿತ ಶಾಲೆಗಳ ಉಳಿವಿಗೆ ಸದನ ಸಮಿತಿ ವರದಿ ಜಾರಿಗೊಳಿಸಲು ಆಗ್ರಹ

ಸಪ್ತಸಾಗರ ವಾರ್ತೆ,ವಿಜಯಪುರ, ಅ.5:ರಾಜ್ಯದಲ್ಲಿರುವ ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗಾಗಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರ ನೇತೃತ್ವದ ಸದನ ಸಮಿತಿ ಸಲ್ಲಿಸಿರುವ ಮಧ್ಯಂತರ ವರದಿಯನ್ನು ಸರ್ಕಾರ ಕೂಡಲೇ ಅನುಷ್ಠಾನಗೊಳಿಸಬೇಕು ಎಂದು ವಿಜಯಪುರ ನಗರ ಅನುದಾನಿತ ಮುಖ್ಯೋಪಾಧ್ಯಾಯರ ಮಹಾಮಂಡಳದ ನಿರ್ದೇಶಕ ಎಚ್.ಜಿ. ತೊನಶ್ಯಾಳ ಆಗ್ರಹಿಸಿದ್ದಾರೆ.ಬೆಳಗಾವಿ ಅಧಿವೇಶನದಲ್ಲಿ ರಚನೆಯಾದ ಸದನ ಸಮಿತಿಯು ಪುಟ್ಟಣ್ಣ ಅವರ ಅಧ್ಯಕ್ಷತೆಯಲ್ಲಿ ಹಾಗೂ ಎಂಟು ವಿಧಾನ ಪರಿಷತ್ ಸದಸ್ಯರ ನೇತೃತ್ವದಲ್ಲಿ ಐದು ತಿಂಗಳ ಕಾಲ ಸಮಗ್ರ ಅಧ್ಯಯನ ನಡೆಸಿ, ರಾಜ್ಯದ…

Read More

ವಿಜಯಪುರದ ಪ್ರವಾಸಿ ತಾಣಗಳ ಪರಿಚಯಕ್ಕೆ ‘ಡಿಸ್ಕವರ್ ವಿಜಯಪುರ’ ಆ್ಯಪ್

ಸಪ್ತಸಾಗರ ವಾರ್ತೆ ವಿಜಯಪುರ, ಅ. 5: ವಿಜಯಪುರದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ಪ್ರವಾಸಿಗರಿಗೆ ಪರಿಚಯಿಸುವ ಉದ್ದೇಶದಿಂದ ಬಿಎಲ್‌ಡಿಇಎ ಸಂಸ್ಥೆಯ ವಿ.ಪಿ. ಡಾ. ಪಿ.ಜಿ. ಹಳಕಟ್ಟಿ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕಾಲೇಜಿನ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ವಿಭಾಗದ ವಿದ್ಯಾರ್ಥಿಗಳು ‘ಡಿಸ್ಕವರ್ ವಿಜಯಪುರ’ (Discover Vijayapura) ಎಂಬ ಸ್ಮಾರ್ಟ್ ಪ್ರವಾಸೋದ್ಯಮ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ.ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಸೆ.27ರಂದು ನಗರದ ಐತಿಹಾಸಿಕ ಇಬ್ರಾಹಿಂ ರೋಜಾದಲ್ಲಿ ಆ್ಯಪ್‌ ಬಿಡುಗಡೆ ಮಾಡಲಾಯಿತು.ಆ್ಯಪ್‌ನಲ್ಲಿ ವಿಜಯಪುರದ ಪ್ರಸಿದ್ಧ…

Read More

ಮಹಿಳೆಗೆ ಸ್ವಾತಂತ್ರ್ಯ ನೀಡಿ ಗೌರವಿಸಿದವರೇ ಶರಣರು: ಡಾ. ರೇಖಾ ಪಾಟೀಲ

ಸಪ್ತಸಾಗರ ವಾರ್ತೆ,ವಿಜಯಪುರ, ಅ. 5:ಮಹಿಳೆಗೆ ಅಸ್ತಿತ್ವವೇ ಇಲ್ಲದ ಸಂದರ್ಭದಲ್ಲಿ ಆಕೆಗೆ ಸುಂದರ ವ್ಯಕ್ತಿತ್ವ ರೂಪಿಸಿ, ಸ್ವಾತಂತ್ರ್ಯ ಹಾಗೂ ಗೌರವದ ಬದುಕಿಗೆ ಅವಕಾಶ ಕಲ್ಪಿಸಿದ ಶ್ರೇಯಸ್ಸು ಬಸವಾದಿ ಶರಣರಿಗೆ ಸಲ್ಲುತ್ತದೆ ಎಂದು ದಂತವೈದ್ಯೆ ಡಾ. ರೇಖಾ ಪಾಟೀಲ ಹೇಳಿದರು.ನಗರದ ರಾಧಾಕೃಷ್ಣ ನಗರದಲ್ಲಿರುವ ಶಿವಬಸವ ಯೋಗಾಶ್ರಮದಲ್ಲಿ ನಡೆದ ದತ್ತಿ ಸ್ಮರಣೆ ಹಾಗೂ ಆಶ್ರಮದ 259ನೇ ಶಿವಾನುಭವ ಗೋಷ್ಠಿಯಲ್ಲಿ 12ನೇ ಶತಮಾನದ ಶಿವಶರಣೆಯರ ಅನುಭವ ಕುರಿತು ಅವರು ಮಾತನಾಡಿದರು.ಶರಣರು ತಮ್ಮ ವಚನಗಳ ಮೂಲಕ ಮಾನವ ಘನತೆ, ಸಮಾನತೆ ಹಾಗೂ ಮೌಲ್ಯಗಳನ್ನು ಎತ್ತಿಹಿಡಿದಿದ್ದಾರೆ….

Read More

ಹಿರಿಯ ಪತ್ರಕರ್ತರ ಆರೋಗ್ಯ ಭದ್ರತೆಗೆ ಹೆಲ್ತ್ ಕಾರ್ಡ್

ಕಲ್ಯಾಣಕ್ಕಾಗಿ ₹1.50 ಲಕ್ಷ ನೆರವು ನಿಧಿ ಘೋಷಣೆ ಸಪ್ತಸಾಗರ ವಾರ್ತೆ,ಪುಟ್ಟಪರ್ತಿ, ಅ. 4: ಹಿರಿಯ ಪತ್ರಕರ್ತರ ಆರೋಗ್ಯ ಭದ್ರತೆಗೆ ಆದ್ಯತೆ ನೀಡಲಾಗುವುದು. ಶ್ರೀ ಸತ್ಯಸಾಯಿ ಜಿಲ್ಲೆಯ ಹಿರಿಯ ಪತ್ರಕರ್ತರಿಗೆ ಹೆಲ್ತ್ ಕಾರ್ಡ್ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಮ್ಸ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಎನ್‌ವೈಪಿಎಸ್‌ಎನ್ ಸಂಸ್ಥಾಪಕ ನಿಸಾರ್ ಯಾಸಿನ್ ಖಾನ್ ಹೇಳಿದರು.ಪುಟ್ಟಪರ್ತಿಯ ಸಾಯಿ ಆರಂ ಫಂಕ್ಷನ್ ಹಾಲ್‌ನಲ್ಲಿ ರಾಯಲಸೀಮಾ ಹಿರಿಯ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.ಹಿರಿಯ ಪತ್ರಕರ್ತರ…

Read More