ಮಕ್ಕಳು ಪ್ರಶ್ನೆ ಮಾಡುವ ಮನೋಭಾವ ಹೊಂದಬೇಕು-ಶಶಿಧರ ಕೋಸಂಭೆ

ಸಪ್ತಸಾಗರ ವಾರ್ತೆ, ವಿಜಯಪುರ, ಜ.12: ಮಕ್ಕಳು ಶಾಲಾ ಹಂತದಲ್ಲಿಯೇ ವಿಷಯ ಗ್ರಹಿಕೆಗೆ ಪ್ರತಿಯೊಂದನ್ನು ಪ್ರಶ್ನಿಸುವ ಮುಕ್ತ ಅವಕಾಶ ಇರುವುದರಿಂದ ಎಲ್ಲ ಅರಿಯಬೇಕೆಂಬ ಎಂಬ ಕುತೂಹಲಿಗಳಾಗಿರಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಭೆ ಅವರು ಹೇಳಿದರು.ಸೋಮವಾರ ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ…

Read More

ವಿಸ್ಡಮ್ ಕರಿಯರ್ ಅಕಾಡೆಮಿ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 12 : ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವ ಪ್ರಯುಕ್ತ ಎಸ್.ಬಿ. ವಿಸ್ಡಮ್ ಕೆರಿಯರ್ ಅಕಾಡೆಮಿ ಹಾಗೂ ಯುವ ಭಾರತ ಸಹಯೋಗದಲ್ಲಿ `ವಿವೇಕ ನಡೆ ಉತ್ಸಾಹ ಭರಿತವಾಗಿ ನಡೆಯಿತು. ಸ್ವಾಮಿ ವಿವೇಕಾನಂದರ ದಿವ್ಯ ಉಕ್ತಿಗಳನ್ನು ಮೊಳಗಿಸುತ್ತಾ, ಹಳದಿ ವರ್ಣದ ಟೀ-ಶರ್ಟ್ ತೊಟ್ಟ ಸಾವಿರಾರು ಯುವಕರು ಉತ್ಸಾಹದಿಂದ ಹೆಜ್ಜೆ ಹಾಕಿದರು.ವಿಜಯಪುರದ ಶ್ರೀ ಸಿದ್ದೇಶ್ವರ ದೇವಾಲಯದಿಂದ ಆರಂಭಗೊಂಡ ಈ ನಡೆ ಗಾಂಧಿವೃತ್ತ, ಶಿವಾಜಿ ವೃತ್ತ, ವಾಟರ್ ಟ್ಯಾಂಕ್ ಸೇರಿದಂತೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಅಥಣಿ ರಸ್ತೆಯಲ್ಲಿರುವ…

Read More

ವೇದ ಅಕಾಡೆಮಿ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ

ಸಪ್ತಸಾಗರ ವಾರ್ತೆ, ವಿಜಯಪ, ಜ. 12: ನಗರದ ವೇದ ಅಕಾಡೆಮಿಯಲ್ಲಿ ಅರ್ಥಪೂರ್ಣವಾಗಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಭಾರತದ ಶ್ರೇಷ್ಠ ಸನ್ಯಾಸಿ ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ ಹಾಗೂ ಭಾರತೀಯ ಅಧ್ಯಾತ್ಮಿಕ ಪ್ರಪಂಚಕ್ಕೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಲಾಯಿತು.ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರಾಚಾರ್ಯ ಮಧ್ವಪ್ರಸಾದ ಜಿ.ಕೆ ಅವರು ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಜೀವನ ಹಾಗೂ ಸಂದೇಶವನ್ನು ತಿಳಿಸಿದರು.ಅಲ್ಲದೆ ಮಗುವಿನ ಬೆಳವಣಿಗೆಯಲ್ಲಿ ತಾಯಿಯ ಪಾತ್ರವನ್ನು ಕುರಿತು ವಿವೇಕಾನಂದರು ಬಾಲ್ಯದಲ್ಲಿ ಏನಾಗಬೇಕೆಂದು ಬಯಸಿದಾಗ ಅವರ ತಾಯಿ ರಥದಲ್ಲಿ…

Read More

ಸ್ವಾಮಿ ವಿವೇಕಾನಂದ ಜಯಂತಿ: ಪುತ್ಥಳಿಗೆ ಯತ್ನಾಳ ಮಾಲಾರ್ಪಣೆ, ಗೌರವ ನಮನ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 12: ಭಾರತದ ಆಧ್ಯಾತ್ಮಿಕ ಶಕ್ತಿ ಜಗತ್ತಿಗೆ ಪಸರಿಸಿದ ಅದಮ್ಯ ಚೇತನ ವಿವೇಕಾನಂದವಿಜಯಪುರ: ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೆ ಪಸರಿಸಿದ ಅದಮ್ಯ ಚೇತನ ಸ್ವಾಮಿ ವಿವೇಕಾನಂದರು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದರು.ನಗರದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಸೋಮವಾರ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ಅವರು ಮಾತನಾಡಿದರು.ಭಾರತದ ಸಂಸ್ಕೃತಿ, ಪರಂಪರೆ ಹಾಗೂ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೆ ಪಸರಿಸಿದ ಸ್ವಾವಿ ವಿವೇಕಾನಂದರು ಯುವ…

Read More

ನಮ್ಮೂರ ಜಾತ್ರೆ: ಗೋಮಾತೆ ಪೂಜೆಯೊಂದಿಗೆ ಆರಂಭ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 11: ಶ್ರೀ ಸಿದ್ಧೇಶ್ವರ ಸಂಕ್ರಮಣದ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಸಿದ್ಧೇಶ್ವರ ದೇವಾಲಯದಲ್ಲಿ ನಮ್ಮೂರ ಜಾತ್ರೆಯ ಗೋ ಪೂಜೆಯೊಂದಿಗೆ ನಂದಿಕೊಲ ಪೂಜೆಗಳನ್ನು ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ(ಯತ್ನಾಳ) ನೆರವೇರಿಸಿದರು.ನಂದಿಕೋಲಗಳನ್ನು ಹಿಡಿಯುವ ಪಟುಗಳು ನೀಲುವ ಅಂಗಿ, ಧೋತ್ರ, ಪಟ್ಟವಡಿ, ಹಾಕಿಕೊಂಡು ಭಕ್ತಿ ಶ್ರದ್ದೆಯಿಂದ ನಂದಿಕೋಲಗಳನ್ನು ಹಿಡಿದರು. ಅಟಲ್ ಬಿಹಾರಿ ವಾಜಪೇಯಿ ರಸ್ತೆಯಲ್ಲಿರುವ ಚತುರ್ಮುಖ ಗಣೇಶನಿಗೆ ವಿಶೇಷ ಪೂಜೆ ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಸಂಗು ಸಜ್ಜನ,…

Read More

ಬಸವಣ್ಣನ ನಾಡು ಬೀದರ್ ನಲ್ಲಿ40ನೇ ರಾಜ್ಯ ಪತ್ರಕರ್ತರ ಸಮ್ಮೇಳನ

ಸಪ್ತಸಾಗರ ವಾರ್ತೆ, ಬೀದರ್, ಜ. 11:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಬೀದರ್ ನಲ್ಲಿ ನಡೆಸಲು ಬೀದರ್ ಪತ್ರಕರ್ತರ ಭವನದಲ್ಲಿ ರಾಜ್ಯ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆಯಲ್ಲಿ ಭಾನುವಾರನಡೆದ ಜಿಲ್ಲಾ ಕಾರ್ಯನಿರತ ಸಂಘದ ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯಿಸಲಾಗಿದೆ.ರಾಜ್ಯ ಸಮ್ಮೇಳನದ ಜವಾಬ್ದಾರಿ ಹೊತ್ತ ಬೀದರ್ ಜಿಲ್ಲಾ ಸಂಘಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲ್ಯೂಜೆ) ಅಭಿನಂದನೆಗಳನ್ನು ಸಲ್ಲಿಸಿದೆ.ಫೆಬ್ರವರಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಸಮ್ಮೇಳನ ಆಯೋಜನೆ ಮಾಡಲಾಗುವುದು ಎಂದು ಬೀದರ್ ಜಿಲ್ಲಾ…

Read More

ಗಂಗಾ ಕಲ್ಯಾಣ ಯೋಜನೆ ಕೈ ಬಿಡುವ ಹುನ್ನಾರ ನಡೆದಿದ್ಯಾ?: ಸಂಸದ ಜಿಗಜಿಣಗಿ ಹೇಳಿದ್ದೇನು ಗೊತ್ತಾ?

ಸಪ್ತಸಾಗರ ವಾರ್ತೆ ವಿಜಯಪುರ, ಜ. 11:ಗಂಗಾ ಕಲ್ಯಾಣ ಯೋಜನೆಯನ್ನು ಬಂದ್ ಮಾಡುವ ಹುನ್ನಾರ ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ ಎಂದು ಸಂಸದ ರಮೇಶ ಜಿಗಜಿಣಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಆರ್ಥಿಕವಾಗಿ ಹಿಂದುಳಿದ ಬಡವರಿಗೆ ಅನುಕೂಲಕರವಾಗಿರುವ ಗಂಗಾ ಕಲ್ಯಾಣ ಯೋಜನೆಗೆ ಎಳ್ಳು ನೀರು ಬಿಡುವ ಸುಳಿವು ಜಿಗಜಿಣಗಿ ಅವರಿಗೆ ಗೊತ್ತಾಗಿದೆ. ಜಿಗಜಿಣಗಿ ಅವರು ಕರ್ನಾಟಕ ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ವೇಳೆ ಜಾರಿಗೆ ಬಂದ ಈ ಗಂಗಾ ಕಲ್ಯಾಣ ಯೋಜನೆಯ ಅನುದಾನವನ್ನು ಪಂಚ ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳುವ ಮೂಲಕ ರಾಜ್ಯ ಸರ್ಕಾರ…

Read More

ಎಂಟನೇ ವಿಜಯಪುರ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನ: ಸವಾ೯ಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ

ಸಪ್ತಸಾಗರ ವಾರ್ತೆ,ವಿಜಯಪುರ, ಜ11: ಜನೇವರಿ 20,21ರಂದು ವಿಜಯಪುರ ತಾಲೂಕ ಎಂಟನೇ ಕನ್ನಡ ಸಾಹಿತ್ಯ ಸಮ್ಮೇಳನ ಹಿಟ್ಟಿನಹಳ್ಳಿಯಲ್ಲಿ ಜರುಗಲಿದ್ದು, ಸಮ್ಮೇಳನದ ಸವಾ೯ಧ್ಯಕ್ಷರಾಗಿ ಸಾಹಿತಿ ಸೋಮಲಿಂಗ ಗೆಣ್ಣೂರ ಸವಾ೯ನುಮತದಿಂದ ಆಯ್ಕೆಯಾಗಿದ್ದಾರೆ.ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಕಾಯ೯ಕಾರಿ ಸಮಿತಿ ಪದಾಧಿಕಾರಿಗಳು ಚಚಿ೯ಸಿ ಸವಾ೯ನುಮತದಿಂದ ಸಾಹಿತಿ ಸೋಮಲಿಂಗ ಗೆಣ್ಣೂರ ಅವರನ್ನು ಸವಾ೯ಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.ಸೋಮಲಿಂಗ ಗೆಣ್ಣೂರ ಚಿಂತಕರು. ವಾಗ್ಮಿಗಳು. ಲೇಖಕರು ಹಾಗೂ ವಿಮರ್ಶಕರಾಗಿದ್ದು ದೇವರಗೆಣ್ಣೂರ ಎಂಬ ಆತ್ಮಕಥನ, ನಮ್ಮ ಸಂವಿಧಾನ…

Read More

ಸಂತ ಶ್ರೀ ಸೇವಾಲಾಲ ಮಹಾರಾಜರ ಜಯಂತಿ : ಮಾಲಾಧಾರಿ ಅಭಿಯಾನದ ಪೂರ್ವಭಾವಿ ಸಭೆ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 11: ಸಂತ ಶ್ರೀ ಸೇವಾಲಾಲ ಮಹಾರಾಜರ ಜಯಂತಿ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ ಮಾಲಾಧಾರಿ ಅಭಿಯಾನದ ಪೂರ್ವಭಾವಿ ಸಭೆಯನ್ನು ಭಾನುವಾರ ಜಿಲ್ಲೆಯ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಲಾಯಿತು.ಸಭೆಯ ದಿವ್ಯ ಸಾನ್ನಿಧ್ಯವನ್ನು ಶ್ರೀ ಸಂಜು ಮಹಾರಾಜ ಆಹೇರಿ ಅವರು ವಹಿಸಿದ್ದರು. ಮಾಲಾಧಾರಿ ಅಭಿಯಾನದ ಮುಖಂಡ ಡಾ. ಬಾಬುರಾಜೇಂದ್ರ ನಾಯಕ ಅವರ ನೇತೃತ್ವದಲ್ಲಿ ಸಭೆ ಜರುಗಿತು.ಈ ಸಂದರ್ಭದಲ್ಲಿ ಮಾತನಾಡಿದ ಡಾ. ಬಾಬುರಾಜೇಂದ್ರ ನಾಯಿಕ ಅವರು ಮಾಲಾಧಾರಣೆಯ ಮಹತ್ವ, ಅದರ ಉದ್ದೇಶ ಹಾಗೂ ಸಮಾಜದಲ್ಲಿ ಅದರ ಪಾತ್ರದ ಕುರಿತು ವಿವರವಾಗಿ…

Read More

ದಾಸ ಸಾಹಿತ್ಯದಲ್ಲಿ ಶ್ರೇಷ್ಠ ಜೀವನ ಮೌಲ್ಯಗಳಿವೆ-ಸಾಹಿತಿ ಪ್ರೊ. ಎ. ಎಚ್. ಕೊಳಮಲಿ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 11: ಕನ್ನಡ ಸಾಹಿತ್ಯದ ಪ್ರಮುಖ ಘಟ್ಟವಾಗಿರುವ ದಾಸ ಸಾಹಿತ್ಯ ಹಲವಾರು ಶ್ರೇಷ್ಠವಾದ ಜೀವನ ಮೌಲ್ಯಗಳನ್ನು ಹೊಂದಿ ಮಾರ್ಗದರ್ಶನ ಮಾಡುತ್ತಾ ಹೋಗುತ್ತದೆ. ಕನಕದಾಸರು ಪುರಂದರದಾಸರು ಈ ಸಾಹಿತ್ಯದ ಶ್ರೇಷ್ಠರಾಗಿದ್ದು ಅವರ ಕೀರ್ತನೆಗಳು ಬದುಕಿನ ದಾರಿಗೆ ದೀಪಗಳಾಗಿವೆ ಎಂದು ಚೇತನಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಸಾಹಿತಿ ಪ್ರೊ. ಎ. ಎಚ್. ಕೊಳಮಲಿ ಇಂದಿಲ್ಲಿ ಅಭಿಪ್ರಾಯಪಟ್ಟರು. ನಗರದ ಆಶ್ರಮ ರಸ್ತೆಯ ಐಶ್ವರ್ಯ ಬಡಾವಣೆಯ ವರದಾಂಜನೇಯ ದೇವಸ್ಥಾನದಲ್ಲಿ ಭಾನುವಾರ ಹಮ್ಮಿಕೊಂಡ 550 ನೇ ಮಹಾ ಸತ್ಸಂಗ…

Read More