ಧೂಮಪಾನ ನಿಷೇಧಕ್ಕೆ ಜನರ ಸ್ವಯಂ ಜಾಗೃತಿ ಅತ್ಯಗತ್ಯ- ಸಂತೋಷ ಬಂಡೆ

ಸಪ್ತಸಾಗರ ವಾರ್ತೆ,ಇಂಡಿ, ಮಾ. 11: ಧೂಮಪಾನವು ಗಂಭೀರ ವ್ಯಸನವಾಗಿದ್ದು, ಇದು ವ್ಯಕ್ತಿಯ ಆರೋಗ್ಯ, ಸುತ್ತಲಿನ ಪರಿಸರದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ. ಧೂಮಪಾನ ಎಂದರೆ ದೇಹತ್ಯಾಗ ಎಂದರಿತುಕೊಂಡು ಆರೋಗ್ಯಕರ ಜೀವನಕ್ಕಾಗಿ ಎಲ್ಲರೂ ಧೂಮಪಾನದಿಂದ ದೂರವಿರುವುದು ಅತ್ಯಗತ್ಯ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ಬುಧವಾರ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಧೂಮಪಾನ ನಿಷೇಧ ದಿನದ ನಿಮಿತ್ತ ಹಮ್ಮಿಕೊಂಡ ಧೂಮಪಾನದ ದುಷ್ಪರಿಣಾಮ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಧೂಮಪಾನವು ನಿಧಾನಗತಿಯ ವಿಷವಾಗಿದೆ. ಅದು ಶ್ವಾಸಕೋಶದ ಕ್ಯಾನ್ಸರ್, ಹೃದಯರಕ್ತನಾಳದ ಕಾಯಿಲೆ,…

Read More

ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ, ಪ್ರೊ. ವಿಜಯಾ ಕೋರಿಶೆಟ್ಟಿಯವರಿಗೆ “ಸಬಲೆ ” ಪ್ರಶಸ್ತಿ

ಸಪ್ತಸಾಗರ ವಾರ್ತೆ,ವಿಜಯಪುರ, ಮಾ. 11:ನಗರದ ಎಂ. ಎಸ್. ಜೆ. ಜೆ. ವಿ ಸಂಸ್ಥೆಯ ದಶಮಾನತ್ಸವದ ಅಂಗವಾಗಿ ನಾಲ್ಕು ಜನ ಮಹಿಳಾ ಸಾಧಕರಿಗೆ, ವಿಶ್ವ ಮಹಿಳಾ ದಿನಾಚರಣೆ 2026ರ” ಸಬಲೆ ” ಪ್ರಶಸ್ತಿ ಹಾಗೂ ಕಸಗೂಡಿಸುವ ಪ್ರಾಮಾಣಿಕ ಮಹಿಳಾ ಪೌರಾಕಾರ್ಮಿಕರಿಗೆ, ಸ್ವಸಹಾಯ ಸಂಘದಿಂದ ಯಶಸ್ವಿ ಬದುಕು ಟ್ಟಿಕೊಂಡ ಮಹಿಳೆಯರನ್ನು ಸನ್ಮಾನಿಸುವದರೊಂದಿಗೆ, ನಾಟ್ಯ ಗಾಯನ ಸಾಂಸ್ಕೃತಿಕ ವೈಭವದ ಕಾರ್ಯಕ್ರಮವನ್ನು ಮಾ. 13ರಂದು ನಗರದ ಕಂದಗಲ್ಲ ಹನುಮಂತರಾಯ ರಂಗಮದಿರದಲ್ಲಿ ಬೆಳಿಗ್ಗೆ 10ಗಂಟೆಗೆ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರೀತಿ ಮೋಹನ ಪತ್ತಾರ…

Read More

ಸಮಾಜದ ಅಭಿವೃದ್ಧಿಗೆ ಸಂಘದ ಸದಸ್ಯರು ಶ್ರಮಿಸಬೇಕು : ಸುಮಿತ್ರಾ ಮಾನೆ

ಸಪ್ತಸಾಗರ ವಾರ್ತೆ,ವಿಜಯಪುರ, ಮಾ. 11 : ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ ಮಹಿಳಾ ಸಂಘದ ಸದಸ್ಯರು ನಗರದ ಖಾಸಗಿ ಹೊಟೇಲ್ ಸಭಾ ಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಿಭಿನ್ನವಾಗಿ‌ ಮಹಿಳಾ ದಿನಾಚರಣೆ ಆಚರಿಸಿದರು.ಪಿಎಸ್ ಐ ರೇಣುಕಾ ದಿನ್ನಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.ವಿಶ್ರಾಂತ ಸಮಾಜ ಕಲ್ಯಾಣ ಅಧಿಕಾರಿ ಹಾಗೂ ಸಂಘದ ಸಂಸ್ಥಾಪಕಿ ಸುಮಿತ್ರಾಮಾನೆ ಮಾತನಾಡಿ, ರಾಜಮಾತೆ ಅಹಲ್ಯಾಬಾಯಿ ಹೊಳಕರ್ 12 ಜ್ಯೋತಿರ್ಲಿಂಗಗಳನ್ನು ಜೀರ್ಣೋದ್ಧಾರ ಮಾಡಿ ಹಲವಾರು ದೇವಾಲಯಗಳನ್ನು ಅಭಿವೃದ್ಧಿಗೊಳಿಸಿ ಜನಪರ ಕಾರ್ಯಗಳನ್ನು ಮಾಡಿದ್ದಾರೆ ಅಂತವರ ಹೆಸರಿನಲ್ಲಿ ವಿಜಯಪುರ…

Read More

ಮಹಿಳೆಗೆ ಎಲ್ಲ ಕ್ಷೇತ್ರದಲ್ಲೂ ಸಾಧನೆ ಗರಿ: ಸಿದ್ದಪ್ಪ

ಸಪ್ತಸಾಗರ ವಾರ್ತೆ,ವಿಜಯಪುರ, ಮಾ. 10 : ಮಹಿಳೆ ಇಂದು ಎಲ್ಲ ರಂಗದಲ್ಲಿಯೂ ಉನ್ನತವಾದ ಸಾಧನೆಯ ನಗೆ ಬೀರಿದ್ದಾಳೆ ಎಂದು ಅಧೀಕ್ಷಕ ಅಭಿಯಂತರ ಸಿದ್ದಪ್ಪ ಬಿಂಜಿಗೇರಿ ಹೇಳಿದರು.ವಿಜಯಪುರದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಹಾಗೂ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಸಹಯೋಗದಲ್ಲಿ ಆಯೋಜಿಲಾಗಿದ್ದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆ ಅಂದು ನಾಲ್ಕು ಗೋಡೆಗಳಿಗೆ ಸೀಮಿತವಾಗಿದ್ದಳು. ಅನೇಕ ಸವಾಲುಗಳನ್ನು ಎದುರಿಸಿ ತನ್ನ ಸ್ವ ಸ್ವಾಮರ್ಥ್ಯದ ಮೇಲೆ ಇಂದು ಎಲ್ಲ ರಂಗದಲ್ಲಿಯೂ ಸಾಧನೆ ತೋರಿದ್ದಾಳೆ….

Read More

ಮಾ.18 ರಿಂದ ಏ.2ರವರಿಗೆ ಜಿಲ್ಲೆಯಾದ್ಯಂತಎಸ್‌ಎಸ್‌ಎಲ್‌ಸಿ ಪರೀಕ್ಷೆ: ಪಾರದರ್ಶಕ ಪರೀಕ್ಷೆಗೆ ಜಿಲ್ಲಾಧಿಕಾರಿ ಡಾ.‌ ಆನಂದ‌ ಸೂಚನೆ

ಸಪ್ತಸಾಗರ ವಾರ್ತೆ ವಿಜಯಪುರ, ಮಾ.10:ಮಾರ್ಚ್ 18 ರಿಂದ ಆರಂಭವಾಗುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಯಾವುದೇ ಲೋಪವಾಗದಂತೆ ಪಾರದರ್ಶಕ, ವ್ಯವಸ್ಥಿತ ಹಾಗೂ ಸುಸೂತ್ರವಾಗಿ ನಡೆಸಬೇಕೆಂದು ಪರೀಕ್ಷೆಗೆ ನಿಯೋಜಿತ ಅಧಿಕಾರಿ ಹಾಗೂ ಸಿಬ್ಬಂದಿಗೆ ಜಿಲ್ಲಾಧಿಕಾರಿ ಡಾ. ಆನಂದ‌ ಕೆ. ಸೂಚನೆ ನೀಡಿದರು.ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮದಿರದಲ್ಲಿ ಮಂಗಳವಾರ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪರೀಕ್ಷೆಗೆ ನಿಯೋಜಿತ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ವಹಿಸಬೇಕಾದ ಕರ್ತವ್ಯ ಹಾಗೂ ಜವಾಬ್ದಾರಿ ಹಾಗೂ ನಿರ್ವಹಣೆ ಕುರಿತ…

Read More

ಬಿಎಲ್ ಡಿಇ ಡೀಮ್ಡ್ ವಿವಿ ಕಾನೂನು ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಸಪ್ತಸಾಗರ ವಾರ್ತೆ,ವಿಜಯಪುರ, ಮಾ. 10: ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕಾನೂನು ಮಹಾವಿದ್ಯಾಲಯದಲ್ಲಿ‌ ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರನ್ನು‌ ಸನ್ಮಾನಿಸಲಾಯಿತು.ಸೋಮವಾರ ನಡೆದ ಈ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಸಿಂಧು ಪೋತದಾರ‌ ಪಾಲ್ಗೊಂಡು ಮಾತನಾಡಿದರು.ಮಹಿಳೆಯರು ಧೈರ್ಯದಿಂದ ಮುನ್ನಡೆಯಬೇಕು. ಪ್ರತಿಯೊಂದು ಕ್ಷೇತ್ರದಲ್ಲೂ ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು‌ ಎಂದು‌‌ ಹೇಳಿದ ಅವರು, ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯನ್ನು ಸನ್ಮಾನಿಸುವ ಈ ಪ್ರಯತ್ನವನ್ನು ಪ್ರಶಂಸಿಸಿದರು.ಕಾನೂನು‌ ಶಾಲೆಯ ಪ್ರಾಚಾರ್ಯ ಡಾ. ರಘುವೀರ…

Read More

ಮಾ.23ರಂದು ಅಂಚೆ ಅದಾಲತ್

ಸಪ್ತಸಾಗರ ವಾರ್ತೆ,ವಿಜಯಪುರ, ಮಾ.10:ಅಂಚೆ ವಿಭಾಗದ 2025-26ನೇ ಸಾಲಿನ 4ನೇ ತ್ರೈಮಾಸಿಕ ಅಂಚೆ ಅದಾಲತ್ ಕಾರ್ಯಕ್ರಮ ಮಾ.23 ರಂದು ಮಧ್ಯಾಹ್ನ 3 ಗಂಟೆಗೆ ವಿಜಯಪುರ ವಿಭಾಗದ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.ಜಿಲ್ಲೆಯ ಬಬಲೇಶ್ವರ, ಬಸವನ ಬಾಗೇವಾಡಿ,ಚಡಚಣ, ದೇವರಹಿಪ್ಪರಗಿ, ಇಂಡಿ, ಕೊಲ್ಹಾರ, ಮುದ್ದೇಬಿಹಾಳ, ನಿಡಗುಂದಿ, ಸಿಂದಗಿ, ತಾಳಿಕೋಟೆ,ತಿಕೋಟಾ, ಆಲಮೇಲ ಹಾಗೂ ವಿಜಯಪುರ ತಾಲೂಕುಗಳ ವ್ಯಾಪ್ತಿಯ ಅಂಚೆ ಸೇವೆಗಳಿಗೆ ಸಲಹೆ-ಸೂಚನೆ ಹಾಗೂ ದೂರುಗಳನ್ನು ಅಂಚೆ ಅದಾಲತ್‍ನಲ್ಲಿ ವಿಚಾರಣೆಗೆ ಎಂದು ಮೇಲ್ಬರಹ ಬರೆದು ಮಾ. 16ರೊಳಗೆ ಯಾವುದೇ ಅಂಚೆ ಕಚೇರಿಯಲ್ಲಿ ಸಲ್ಲಿಸಬಹುದಾಗಿದೆ. ಇಂತಹ…

Read More

ಡಾ. ಅಂಬೇಡ್ಕರ್‌ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಡಾ. ಔದ್ರಾಮ

ಸಪ್ತಸಾಗರ ವಾರ್ತೆ, ವಿಜಯಪುರ, ಮಾ. 9:ವಿಜಯಪುರ ಪವಿತ್ರ‌ ಜಿಲ್ಲೆ.‌ ಸಂವಿಧಾನ ಶಿಲ್ಪಿ ಡಾ. ‌ಅಂಬೇಡ್ಕರ್ ಅವರು ನಮ್ಮ‌ ಈ ನೆಲಕ್ಕೆ ಆಗಮಿಸಿ, ಈ ನೆಲವನ್ನು ಪವಿತ್ರಗೊಳಿಸಿದ್ದಾರೆ. ಹಾಗಾಗಿ‌ ರಾಜ್ಯ ಸರ್ಕಾರ ಈ‌ ಭೀಮ ಗಾಯನ ಕಾರ್ಯಕ್ರಮ ಆಯೋಜಿಸಿದ್ದು, ಸಾರ್ವಜನಿಕರು‌ ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಅಯತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಹಯೋಗದಲ್ಲಿ ಸೋಮವಾರ ಸಂಜೆ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ‌…

Read More

ವಿಜಯಪುರದ ಸಂಚಾರ ವ್ಯವಸ್ಥೆಗೆ ಬೇಕಿದೆ ಮೇಜರ್ ಸರ್ಜರಿ:ಓಬೇರಾಯನ ಕಾಲದ ಸಂಚಾರಿ ವ್ಯವಸ್ಥೆಗೆ ಗುಡ್ ಬೈ ಯಾವಾಗ?

ರುದ್ರಪ್ಪ ಆಸಂಗಿಸಪ್ತಸಾಗರ ವಾರ್ತೆ ವಿಜಯಪುರ, ಮಾ. 9:ವಿಶ್ವಖ್ಯಾತ ಗೋಳಗುಮ್ಮಟ ನಗರಿ ವಿಜಯಪುರ ನಗರದಲ್ಲಿ ಸಂಚಾರ ವ್ಯವಸ್ಥೆಗೆ ತುಕ್ಕು ಹಿಡಿದಿದ್ದು, ಶೀಘ್ರವಾಗಿ ಬೆಳವಣಿಗೆ ಹೊಂದುತ್ತಿರುವ ವಿಜಯಪುರ ನಗರದಲ್ಲಿ ಸಂಚಾರ ವ್ಯವಸ್ಥೆಗೆ ಕೂಡಲೇ ಮೇಜರ್ ಸರ್ಜರಿ ಬೇಕಿದೆ.ಹೌದು. ಕಳೆದ ಹತ್ತಾರು ವರ್ಷಗಳಿಂದ ವಿಜಯಪುರ ಮಹಾನಗರದಲ್ಲಿ ತುಕ್ಕು ಹಿಡಿದ ಸಂಚಾರ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಇದರಿಂದಾಗಿ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ನಗರದಲ್ಲಿ ಸಂಚರಿಸಲು ತುಂಬಾ ಕಷ್ಟವಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಮಹಾನಗರದಲ್ಲಿ ಜನಸಂಖ್ಯೆಯ ಜೊತೆ ಜೊತೆಯಲ್ಲಿಯೇ ವಾಹನಗಳ ಸಂಖ್ಯೆಯು ದ್ವಿಗುಣವಾಗುತ್ತಿದೆ. ಪಾದಚಾರಿಗಳಷ್ಟೇ…

Read More

ಮಾ. 15ರಂದು ಒಂದು ದಿನದ ಕಾಂಗ್ರೆಸ್ ಕಾರ್ಯಾಗಾರ

ಸಪ್ತಸಾಗರ ವಾರ್ತೆ ವಿಜಯಪುರ, ಮಾ. 9:ಮಾ. 15 ರಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವಿಜಯಪುರದಿಂದ ಒಂದು ದಿನದ ಕಾರ್ಯಾಗಾರ ಹಮ್ಮಿಕೊಂಡಿದ್ದು, ಈ ನಿಮಿತ್ತ ಪೂರ್ವಭಾವಿ ಸಭೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಅವರ ನೇತೃತ್ವದಲ್ಲಿ ನಡೆಯಿತು.ಕೆ.ಪಿ. ಸಿ. ಸಿ. ಸಂಯೋಜಕ ಮಹಾಬಳೇಶ್ವರ ಜಿ. ಎಸ್. ಅವರು ಮಾತನಾಡಿ, ನಮ್ಮ ಸರಕಾರ ಅನೇಕ ಯೋಜನೆಗಳನ್ನು ಮಾಡಿ ನುಡಿದಂತೆ ನಡೆದಿದೆ. ಆದರೆ ಇದರ ಕುರಿತು ಯಾವುದೇ ರೀತಿ ಕಟ್ಟಕಡೆಯ ಜನರಿಗೆ ಸರಿಯಾಗಿ ಮಾಹಿತಿ ಪ್ರಚಾರ ಮಾಡುತ್ತಿಲ್ಲ. ಸುಳ್ಳು…

Read More