ತಾಯಿ ಹಾಗೂ ಶಿಕ್ಷಕನ ಋಣ ತೀರಿಸಲು ಯಾವ ಕಾಲಕ್ಕೂ ಸಾಧ್ಯವಿಲ್ಲ: ಶ್ರೀ ಅಭಿನವ ಸಂಗನಬಸವ ಶಿವಾಚಾರ್ಯರು
ಸಪ್ತಸಾಗರ ವಾರ್ತೆ,ವಿಜಯಪುರ, ಫೆ. 27:ಜಗತ್ತಿನಲ್ಲಿ ತಾಯಿ ಋಣ ಹಾಗೂ ಕಲಿಸಿದ ಶಿಕ್ಷಕನ ಋಣ ಯಾವ ಕಾಲಕ್ಕೂ ತೀರಿಸಲು ಸಾಧ್ಯವಿಲ್ಲದಂತಹ ಅದ್ಭುತ ತ್ಯಾಗಿ ಜೀವಿ ಇವರಿಬ್ಬರು. ನಾನು ಇಂತಹ ಶಿಕ್ಷಕರ ಕೈಯಲ್ಲೇ ಕಲಿತು ಒಂದು ಮಠದ ಸ್ವಾಮೀಜಿಯಾಗಿದ್ದೇನೆ ಎಂಬ ಹೆಮ್ಮೆ ನನಗಿದೆ ಎಂದು ಮನಗೂಳಿ ಹಿರೇಮಠ ಶ್ರೀ.ಷ.ಬ್ರ.ಅಭಿನವ ಸಂಗನಬಸವ ಶಿವಾಚಾರ್ಯರು ಹೇಳಿದರು.ನಗರದಲ್ಲಿ ನಡೆದ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿಯ ಶ್ರೀ ಎಸ್.ಬಿ.ಪಾಟೀಲ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ 2003-04ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ 2005-06ನೇ ಸಾಲಿನ ಪಿಯುಸಿ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ…


