ಜನಪದರೇ ನಿಜವಾದ ಶರಣತತ್ವ ಪರಿಪಾಲಕರು :- ಪ್ರೊ. ಬಿ.ಎನ್. ಪಾಟೀಲ
ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 21:12ನೇ ಶತಮಾನದ ನಡೆದ ಸಮಾಜೋಧಾರ್ಮಿಕ ಕ್ರಾಂತಿಯ ನಂತರ ಶರಣರ ಪ್ರಭಾವ ಜನಪದರ ಮೇಲೆ ಅಚ್ಚೊತ್ತಿದಂತಾಗಿದೆ. ಅವರೇ ಶರಣತತ್ವ ಪರಿಪಾಲಕರಾಗಿದ್ದಾರೆ. ಜನಪದರು ತಮ್ಮ ಆಡುಭಾಷೆಯಲ್ಲಿ ಶರಣರ ಬದುಕು, ಧರ್ಮಬೋಧೆ, ನೈತಿಕ ಮೌಲ್ಯಗಳ ಕುರಿತು ಸಾಹಿತ್ಯ ರಚಿಸಿ ಹಾಡಿದ್ದಾರೆ. ಹೀಗೆ ಶಿವಶರಣರು ಜನಪದರ ನುಡಿ ಸಾಹಿತ್ಯದಲ್ಲಿ ಬೆರೆತು ಹೋಗಿದ್ದಾರೆಂದು ಪ್ರೊ.ಬಿ.ಎನ್.ಪಾಟೀಲ (ಇಬ್ರಾಹಿಂಪೂರ) ಹೇಳಿದರು.ಬಸವೇಶ್ವರ ಸಂಸ್ಥೆಯ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ದತ್ತಿ ಕಾರ್ಯಕ್ರಮದಲ್ಲಿ “ಜನಪದ ಸಾಹಿತ್ಯದಲ್ಲಿ ಶಿವಶರಣರು” ವಿಷಯ ಕುರಿತು ಮಾತನಾಡಿದರು.ತಾಲ್ಲೂಕ ಶರಣಸಾಹಿತ್ಯ ಪರಿಷತ್ತಿನಡಿಯಲ್ಲಿ…


