ಜಿ ಎಸ್ ಎಸ್ ಕನ್ನಡ ಕಾವ್ಯಲೋಕದ ಸಮನ್ವಯ ಕವಿ- ಸಂತೋಷ ಬಂಡೆ
ಸಪ್ತಸಾಗರ ವಾರ್ತೆ, ವಿಜಯಪುರ,ಫೆ. 7: ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪನವರು ಕನ್ನಡ ಕಾವ್ಯ ಲೋಕದ ಸಮನ್ವಯ ಕವಿ. ಅವರ ಕಾವ್ಯ ರಚನೆಯಲ್ಲಿ ಶಿಸ್ತು, ಶ್ರದ್ಧೆ, ಆದರ್ಶ, ಇತರರಿಗೆ ಸ್ಫೂರ್ತಿಯ ಅಂಶಗಳನ್ನು ಕಾಣುತ್ತೇವೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.ಶನಿವಾರ ತಾಲೂಕಿನ ನಾಗಠಾಣ ಗ್ರಾಮದ ಅರಿವು ಕೇಂದ್ರದಲ್ಲಿ ಹಮ್ಮಿಕೊಂಡ ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪನವರ ಜನ್ಮ ಶತಾಬ್ದಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ನವೋದಯ ಕಾವ್ಯದ ರಮ್ಯತೆ ಮತ್ತು ನವ್ಯ ಕಾವ್ಯದ ಬೌದ್ಧಿಕತೆಗಳೆರಡನ್ನೂ ಸೇರಿಸಿ, ಕಾವ್ಯದಲ್ಲಿ ಸಮನ್ವಯತೆ…


