ಬಿಜೆಪಿ ಸೇರಿದಂತೆ ಇಡೀ ದೇಶಕ್ಕೆ ಗಾಂಧೀಜಿ, ಕಾಂಗ್ರೆಸ್ ಆಸರೆ: ಡಿಸಿಎಂ ಡಿ.ಕೆ. ಶಿವಕುಮಾರ್

ಸಪ್ತ ಸಾಗರ ವಾರ್ತೆ : ಬೆಂಗಳೂರು, ಅ.02 “ಗಾಂಧೀಜಿಯವರ ಹಾಗೂ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಂದೇ ಆಗಿದೆ. ಆದರೆ ಬಿಜೆಪಿ ಸಿದ್ಧಾಂತ ಬೇರೆ. ಹೀಗಿದ್ದರೂ ಬಿಜೆಪಿಯವರು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕಾದರೆ ಗಾಂಧಿ ಪ್ರತಿಮೆ ಮುಂದೆಯೇ ನಿಲ್ಲಬೇಕು. ಇನ್ನು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡಿಕೊಂಡೇ ಬಿಜೆಪಿ ತಮ್ಮ ಪಕ್ಷವನ್ನು ಕಟ್ಟಿಕೊಳ್ಳುತ್ತಿದೆ. ಆ ಮೂಲಕ ಬಿಜೆಪಿ ಸೇರಿದಂತೆ ಇಡೀ ದೇಶಕ್ಕೆ ಗಾಂಧೀಜಿ ಹಾಗೂ ಕಾಂಗ್ರೆಸ್ ಆಸರೆಯಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಕೆಪಿಸಿಸಿ ಕಚೇರಿಯಲ್ಲಿ…

Read More

ಬಿಜೆಪಿ ಕಚೇರಿಯಲ್ಲಿ ಗಾಂಧಿ, ಶಾಸ್ತ್ರಿ ಜಯಂತಿ

ಸಪ್ತ ಸಾಗರ ವಾರ್ತೆ ವಿಜಯಪುರ, ಅ. 2: ಭಾರತೀಯ ಜನತಾ ಪಾರ್ಟಿ ವಿಜಯಪುರ ಜಿಲ್ಲೆಯ ಪಕ್ಷದ ಕಾರ್ಯಾಲಯದಲ್ಲಿ ಜಗದ್ಗುರು ಮಧ್ವಾಚಾರ್ಯರ, ಮಹಾತ್ಮಾ ಗಾಂಧಿಜಿ ಹಾಗೂ ಲಾಲ ಬಹದ್ದೂರ ಶಾಸ್ತ್ರಿರವರ ಜಯಂತಿಯನ್ನು ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು.ಈ ಸಂದರ್ಭದಲ್ಲಿ ಬೆಳಗಾವಿ ವಿಭಾಗ ಪ್ರಭಾರಿ ಚಂದ್ರಶೇಖರ ಕವಟಗಿ ಆವರು ಮಾತನಾಡಿ, ಗಾಂಧೀಜಿ ಹಾಗೂ ಶಾಸ್ತ್ರೀಜಿ ಅವರ ಜೀವನ, ಎದುರಾದ ಸವಾಲುಗಳು, ಅವರ ವ್ಯಕ್ತಿತ್ವದ ಬಗ್ಗೆ ವಿವರವಾಗಿ ಮಾತನಾಡಿದರು. ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು ನಮಗೆ ಕಲಿಸಿಕೊಟ್ಟ ಪಾಠಗಳು ಹಲವು. ಸತ್ಯ,…

Read More

ಬಿ.ಎಲ್.ಡಿ.ಇ ಡೀಮ್ಡ್ ವಿವಿಯಲ್ಲಿ ಗಾಂಧಿ, ಶಾಸ್ತ್ರಿ ಜಯಂತಿ

ಸಪ್ತಸಾಗರ ವಾರ್ತೆ, ವಿಜಯಪುರ, ಅ. 2:‌ ನಗರದ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಇಂದು‌ ಗುರುವಾರ ಮಹಾತ್ಮಾ ಗಾಂಧಿಯವರ 156ನೇ ಮತ್ತು ಲಾಲ ಬಹಾದ್ದೂರ ಶಾಸ್ತ್ರಿಯವರ 121ನೇ ಜಯಂತಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಡೀಮ್ಡ್ ವಿವಿ ಹಂಗಾಮಿ ಕುಲಪತಿ, ಡಾ. ಅರುಣ ಚಂ.‌ಇನಾಮದಾರ ಅವರು ಗಾಂಧಿ ಮತ್ತು ಶಾಸ್ತ್ರಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.ಬಳಿಕ ಮಾತನಾಡಿದ ಅವರು, ಗಾಂಧಿಯವರು ಸತ್ಯ ಮತ್ತು ಅಹಿಂಸೆ ತತ್ವಗಳ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಅವರ ಸತ್ಯ ಮತ್ತು ಅಹಿಂಸೆ ತತ್ವಗಳನ್ನು ಜೀವನದಲ್ಲಿ…

Read More

ಛಲ, ಆತ್ಮ ವಿಶ್ವಾಸ ಇದ್ದವರು ಎಂದಿಗೂ ಅನಾಥರಲ್ಲ: ಸಂಗಮೇಶ ಬಬಲೇಶ್ವರ

ಸಪ್ತಸಾಗರ ವಾರ್ತೆ ಮೈಸೂರು, ಅ. 2: ಬಾಲಮಂದಿರಗಳಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿರುವ ಕರುನಾಡಿನ ಮುದ್ದು ಮಕ್ಕಳು, ತಾಯಿ ಚಾಮುಂಡೇಶ್ವರಿಯ ಆಶೀರ್ವಾದದಿಂದ ಅಪರೂಪದ ಸಾಧಕರಾಗಿ ಬೆಳೆದು ಮುಂದೊಂದು ದಿನ ನಾಡ ಹಬ್ಬ ಮೈಸೂರು ದಸರಾ ಉದ್ಘಾಟಿಸುವಂತಾಗಬೇಕೆಂದು ನಾನು ಹಂಬಲಿಸುವುದಾಗಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.ಬಾಲ ಮಂದಿರ ಮಕ್ಕಳೊಂದಿಗೆ ದಸರಾ ಹಬ್ಬ ಆಚರಿಸಲು ಧಾರವಾಡದಿಂದ ತಮ್ಮೊಂದಿಗೆ ತಂದಿದ್ದ ಸಿಹಿ ಪದಾರ್ಥ ಗಳೊಂದಿಗೆ ಮೈಸೂರಿನ ಲಲಿತ ಮಹಲ್ ರಸ್ತೆಯಲ್ಲಿರುವ ಸರಕಾರಿ ಬಾಲಕಿಯರ ಬಾ ಲಮಂದಿರಕ್ಕೆ ಆಗಮಿಸಿದ್ದ ಅವರು,…

Read More

ವೈದ್ಯಕೀಯ ಮಹಾವಿದ್ಯಾಲಯ ಕೊಡಿ ಕವಿಗೋಷ್ಠಿಗೆ ಆಹ್ವಾನ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. ಅ. 1: ಜಿಲ್ಲೆಗೆ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಗೆ ಆಗ್ರಹಿಸಿ, ನಾಡಿನ ಕವಿಗಳಿಂದ ನಮಗೆ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಕೊಡಿ ಎಂಬ ವಿಷಯದ ಕುರಿತು(ಅಕ್ಟೋಬರ್-5)ರಂದು ಮುಂಜಾನೆ 10ಗಂಟೆಗೆ ಅಂಬೇಡ್ಕರ್ ವೃತ್ತದಲ್ಲಿಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ.ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳು ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಗೆ ಸಂಬಂಧಿಸಿದ ಅಥವಾ ಜಿಲ್ಲೆಯ ಅಭಿವೃದ್ಧಿ ಮತ್ತು ಪ್ರಗತಿಗೆ ಸಂಬಂಧಪಟ್ಟ ವಿಷಯದ ಕುರಿತು ಕವನ ವಾಚಿಸಬಹುದು.ಸರಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ, ವಿಜಯಪುರ ಪರವಾಗಿ ಹೆಸರು ನೋಂದಾಯಿಸಿಕೊಳ್ಳಲು ಮೊ. 72042 79187 ,96320…

Read More

2025ನೇ ಸಾಲಿನ “ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ – ಕರ್ನಾಟಕ”ಕ್ಕೆ ಇತಿಹಾಸಕಾರ, ಲೇಖಕ ಡಾ. ರಾಮಚಂದ್ರ ಗುಹಾ ಆಯ್ಕೆ

ಸಪ್ತಸಾಗರ ವಾರ್ತೆ ಬೆಂಗಳೂರು, ಅ. 1:ಪ್ರಸಿದ್ಧ ಭಾರತೀಯ ಇತಿಹಾಸಕಾರ, ಅಂಕಣಕಾರ ಮತ್ತು ಚಿಂತಕ ಡಾ. ರಾಮಚಂದ್ರ ಗುಹಾ ಅವರನ್ನು 2025ನೇ ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ– ಕರ್ನಾಟಕಕ್ಕೆ ಕರ್ನಾಟಕ ಸರ್ಕಾರ ಆಯ್ಕೆ ಮಾಡಿದೆ.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಪ್ರತಿ ವರ್ಷ ನೀಡಲಾಗುವ ಈ ಗೌರವಾನ್ವಿತ ಪ್ರಶಸ್ತಿಯನ್ನು, ಗಾಂಧೀಜಿಯವರ ಜೀವನ ಮೌಲ್ಯಗಳನ್ನು ಸಮಾಜದಲ್ಲಿ ಹರಡಲು ಮಹತ್ತರ ಕೊಡುಗೆ ನೀಡಿದ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ಪ್ರದಾನ ಮಾಡಲಾಗುತ್ತದೆ.ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿಯನ್ನು ರಾಜ್ಯಾದ್ಯಂತ ಅರ್ಥಪೂರ್ಣವಾಗಿ, ಜನಸಾಮಾನ್ಯರು,…

Read More

ಸಮಾಜದಅಸಮಾನತೆಹೋಗಲಾಡಿಸಲುಸಮೀಕ್ಷೆಅಗತ್ಯ- ಮುಖ್ಯಮಂತ್ರಿಸಿದ್ದರಾಮಯ್ಯ

ಸಪ್ತಸಾಗರ ವಾರ್ತೆ ಬೆಂಗಳೂರು, ಅ. 1: ಸಮಾಜದಲ್ಲಿ ಅಸಮಾನತೆಯಿದ್ದು, ಅದನ್ನು ಹೋಗಲಾಡಿಸಲು ಸಮೀಕ್ಷೆಯ ಅಂಕಿಅಂಶಗಳು ಅವಶ್ಯಕ. ಯಾವ ಜಾತಿಯ ಜನರಲ್ಲಿ ಅನಕ್ಷರತೆ, ಬಡತನ, ಜಮೀನು ಇತ್ಯಾದಿಗಳಿಲ್ಲ ಎಂಬುದರ ಮಾಹಿತಿ ಅಗತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಬುಧವಾರ ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯ ಚಿಕಿತ್ಸೆ ಪಡೆಯುತ್ತಿರುವ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ, ಅವರ ಆರೋಗ್ಯ ಉತ್ತಮವಾಗಿದೆ ಎಂದರು.ರಾಜ್ಯದ ಜನತೆಗೆ ನಾಡಹಬ್ಬ ದಸರಾದ ಶುಭಾಶಯಗಳನ್ನು ಕೋರಿದ…

Read More

ಟೆಲೆಸ್ಕೋಪ ತರಬೇತಿಗೆ ಮುಳವಾಡ ಶಾಲೆಯ ವಿದ್ಯಾರ್ಥಿ ಕೃಷ್ಣ ಕುಂಬಾರ ಆಯ್ಕೆ

ಸಪ್ತಸಾಗರ ವಾರ್ತೆ, ವಿಜಯಪುರ, ಅ. 1: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ ಬೆಂಗಳೂರ ವತಿಯಿಂದ ಪ್ರೌಢಶಾಲಾ ಮತ್ತು ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಎಂಟು ದಿನಗಳ ಕಾಲ “ನಾನು ವಿಜ್ಞಾನಿ 2025” ಶೀರ್ಷಿಕೆಯಡಿಯಲ್ಲಿ ಶಾಲೆಗೊಂದು ಟೆಲೆಸ್ಕೋಪ ತಯಾರಿಸುವ ತರಬೇತಿಯನ್ನು ನುರಿತ ತಜ್ಞರಿಂದ ನೀಡಲಾಗುತ್ತದೆ.ಇದೊಂದು ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗುವ ಸದಾವಕಾಶ ಒದಗಿ ಬಂದಿದೆ. ಈ ತರಬೇತಿಯನ್ನು ದೊಡ್ಡಬಳ್ಳಾಪುರ ಬಳಿಯಿರುವ ಬ್ಯಾಸೆಂಟ್ ಉದ್ಯಾನವನ ಸ್ಕೌಟ್ ಕ್ಯಾಂಪಿನಲ್ಲಿ ನೀಡಲಾಗುವುದು.ವಿಜಯಪುರ ಜಿಲ್ಲೆಯ ಮುಳವಾಡ ಪ್ರೌಢಶಾಲೆಯ ಹತ್ತನೇ ವರ್ಗದ ವಿದ್ಯಾರ್ಥಿ ಕುಮಾರ ಕೃಷ್ಣ ಬಸಪ್ಪ…

Read More

ನವರಾತ್ರಿ ಅಂಗವಾಗಿ ವಿಶೇಷ ಕಲಾಕೃತಿ ರಚನೆ: ಚಿತ್ರ ಕಲಾವಿದ ಬಸವರಾಜ ಹಡಪದ ಕೈಚಳಕದಲ್ಲಿ ಅರಳಿದ ಕಲೆ

ಸಪ್ತಸಾಗರ ವಾರ್ತೆ, ವಿಜಯಪುರ, ಅ. 1: ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಯರಗಲ್ಲ ಗ್ರಾಮದ ಪ್ರತಿಭಾವಂತ ಚಿತ್ರಕಲಾವಿದ ಬಸವರಾಜ ಹಡಪದ ಅವರು ನವರಾತ್ರಿಯ ಅಂಗವಾಗಿ ವಿಶೇಷ ಕಲಾಕೃತಿಯನ್ನು ರಚಿಸಿದ್ದಾರೆ.ಮಿಶ್ರ ಮಾಧ್ಯಮ ಶೈಲಿಯಲ್ಲಿ ಮೂಡಿಬಂದಿರುವ ಶ್ರೀ ದೇವಿಯ ಭಾವಚಿತ್ರವು ಕಲಾಭಿಮಾನಿಗಳ ಮನಸೂರೆಗೊಂಡಿದೆ.ನವರಾತ್ರಿಯ ಸಾಂಸ್ಕೃತಿಕ ವೈಭವವನ್ನು ತೋರಿಸುವ ಉದ್ದೇಶದಿಂದ ಕಲಾವಿದ ಬಸವರಾಜ ಅವರು ಭಕ್ತಿ, ಶಕ್ತಿ ಹಾಗೂ ನೈಜತೆಯ ಸಂಯೋಜನೆಯಲ್ಲಿ ಈ ಚಿತ್ರವನ್ನು ರಚಿಸಿದ್ದು, ಬಣ್ಣಗಳ ಸೊಗಸು ಮತ್ತು ಅಲಂಕಾರಿಕ ಕುಂಚಸ್ಪರ್ಶವು ಕಲಾಕೃತಿಗೆ ವಿಶೇಷತೆ ನೀಡಿದೆ.ದೇವಿಯ ಕರುಣಾಮಯ ಮುಖಭಾವ, ಆಯುಧಗಳು ಹಾಗೂ…

Read More

ಅ.6ರಂದು ಫೋನ್ ಇನ್ ಕಾರ್ಯಕ್ರಮ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 30: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವತಿಯಿಂದ ಪ್ರಯಾಣಿಕರ ಅಹವಾಲು- ಕುಂದುಕೊರತೆಗಳನ್ನು ಆಲಿಸಲು ಅಕ್ಟೋಬರ್ 6ರ ಮಧ್ಯಾಹ್ನ 3-30ರಿಂದ 4-30ರವರೆಗೆ ಫೋನ್-ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಮೊ : 6366423887ಗೆ ಸಾರ್ವಜನಿಕರು ಕರೆ ಮಾಡಿ ತಮ್ಮ ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಫೋನ್-ಇನ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಇದರ ಸದುಪಯೋಗ ಪಡೆದುಕೊಳ್ಳುವಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More