ರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಯೋಗ ಶಿಕ್ಷಕ ಪ್ರಕಾಶ ಚವ್ಹಾಣ ವಿಶ್ವ ದಾಖಲೆ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 30: ಯೋಗ ಶಿಕ್ಷಕ ಪ್ರಕಾಶ ಚವ್ಹಾಣ ಅವರು ರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ವಿಶ್ವ ದಾಖಲೆ ಬರೆದಿದ್ದಾರೆ.ವಿಜಯಪುರ ಹೊರ ವಲಯದ ಬೇಗಂ ತಲಾಬ್ ತಾಂಡಾ ನಿವಾಸಿ ಹಾಗೂ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ಯೋಗ ಶಿಕ್ಷಕ ಪ್ರಕಾಶ ಚವ್ಹಾಣ ಈಚೆಗೆ ಫಿಟ್ ಇಂಡಿಯಾ ಏರೋಬಿಕ್ಸ್ ಇನ್ಸ್ಟಿಟ್ಯೂಟ್ ಅನ್ ಲೈನ್ ಮೂಲಕ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ೫ನೇ ರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಮೂರು ನಿಮಿಷ ವೃಕ್ಷಾಸನ ಮಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.ವಿಶ್ವ ದಾಖಲೆಗಾಗಿ ಕೇವಲ…

Read More

ಇಬ್ರಾಹಿಂಪುರದಲ್ಲಿ ಸಂಭ್ರಮದ ನಾಡದೇವಿ ಉತ್ಸವ

ಸಪ್ತಸಾಗರ ವಾರ್ತೆ ವಿಜಯಪುರ, ಸೆ.30: ನಗರದ ಮನಗೂಳಿ ರಸ್ತೆಯ ಇಬ್ರಾಹಿಂಪುರದಲ್ಲಿ ನಾಡದೇವಿ ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ಮಲ್ಲಿಕಾರ್ಜುನ ಆದಿಶಕ್ತಿ ಯುವಕ ಮಂಡಳಿ ವತಿಯಿಂದ ಸೋಮವಾರ ರಾತ್ರಿ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಲಾ ಸಿಂಚನ ಮೆಲೋಡಿಸ್ ತಂಡದ ಕಲಾವಿದರಾದ ಗೋಪಾಲ ಹೂಗಾರ, ಗೋಪಾಲ ಇಂಚಗೇರಿ, ಮಲ್ಲು ಮುದ್ದೇಬಿಹಾಳ, ಮ್ಯೂಜಿಕ್ ಮೈಲಾರಿ, ಲಕ್ಷ್ಮೀ ಬಿಜಾಪುರ, ಶ್ರೀಶೈಲ ಜುಮನಾಳ, ಗಾಯಕ ಕೃಷ್ಣಾ ಅವರು ಪ್ರಸಿದ್ಧ ಜಾನಪದ ಹಾಗೂ ದೇಶಭಕ್ತಿಯ ಹಾಡುಗಳನ್ನು ಹಾಡಿ, ಹಾಸ್ಯ ಚಟಾಕಿಗಳನ್ನು ಹಾರಿಸಿ ಜನಮನ ರಂಜಿಸಿದರು.ಡಾನ್ಸರ್ ಪೂಜಾ ಡಿಕೆಡಿ…

Read More

ಸರ್ಕಾರಿ ಉದ್ಯೋಗಗಳನ್ನು ತಕ್ಷಣ ಭರ್ತಿ ಮಾಡಿಬೇಕೆಂದು ಸರ್ಕಾರದ ವಿರುದ್ಧ ಡಿವಿಪಿಯಿಂದ ಯುವ ಜನಾಕ್ರೋಶ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 30:ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಉದ್ಯೋಗಗಳನ್ನು ಕೂಡಲೇ ಭರ್ತಿ ಮಾಡಬೇಕು, ಉದ್ಯೋಗದ ವಯೋಮಿತಿಯನ್ನು ಹೆಚ್ಚಿಸಬೇಕೆಂದು ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಘಟಕದ ನೇತೃತ್ವದಲ್ಲಿ ಮಂಗಳವಾರ ವಿಜಯಪುರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.ಡಿ.ವಿ.ಪಿ ಸಂಘಟನೆಯ ರಾಜ್ಯಧ್ಯಕ್ಷ ಶ್ರೀನಾಥ ಪೂಜಾರಿ ಅವರು ಮಾತನಾಡಿ, ನಾಡಿನಾದ್ಯಂತ ವಿದ್ಯಾರ್ಥಿ ಯುವಜನರ ನಿರುದ್ಯೋಗದ ಸಮಸ್ಯೆ ತೀವ್ರವಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಆಗಿರಬಹುದು ಇವತ್ತಿನ ಕಾಂಗ್ರೆಸ್ ಸರ್ಕಾರ ಆಗಿರಬಹುದು. ನಾಲ್ಕು ವರ್ಷದಿಂದ ಯಾವುದೇ ಸರ್ಕಾರಿ ಹುದ್ದೆಗಳನ್ನು ತುಂಬದೇ ಸತಾಯಿಸುತ್ತಿರುವುದು…

Read More

ಬೆಳಗಾವಿ ಎಪಿಎಂಸಿಗೆ ತರಕಾರಿ ಮಾರುಕಟ್ಟೆ ಸ್ಥಳಾಂತರ- ಸಚಿವ ಶಿವಾನಂದ ಪಾಟೀಲರಿಗೆ ರೈತರಿಂದ ಸನ್ಮಾನ

ಸಪ್ತ ಸಾಗರ ವಾರ್ತೆ ವಿಜಯಪುರ, ಸೆ. 30 :ಬೆಳಗಾವಿ ನಗರದಲ್ಲಿ ಖಾಸಗಿ ಹಿಡಿತದಲ್ಲಿದ್ದ ತರಕಾರಿ ಮಾರುಕಟ್ಟೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರಿಸಲು ಕ್ರಮ ಕೈಗೊಂಡ ಕಾರಣ ರೈತರು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರನ್ನು ಸನ್ಮಾನಿಸಿದರು.ಮಂಗಳವಾರ ನಗರದಲ್ಲಿರುವ ಸಚಿವರ ಗೃಹ ಕಛೇರಿಗೆ ಆಗಮಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ಚುನ್ನಪ್ಪ ಪೂಜಾರಿ ಬಣ) ಕೊಲ್ಹಾರ ತಾಲೂಕ ಅಧ್ಯಕ್ಷ ಸೋಮು ಬಿರಾದಾರ ನೇತೃತ್ವದಲ್ಲಿ ರೈತರು ಸಚಿವ ಶಿವಾನಂದ ಪಾಟೀಲ ಅವರನ್ನು ಸನ್ಮಾನಿಸಿ, ಸಿಹಿ…

Read More

ಅತಿಥಿ ಉಪನ್ಯಾಸಕರ ನೇಮಕಾತಿಗೆ ಸರ್ಕಾರ ಅಸ್ತು: ವಿದ್ಯಾರ್ಥಿಗಳ ಹೋರಾಟಕ್ಕೆ ಸಂದ ಜಯ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 30: ಅತಿಥಿ ಉಪನ್ಯಾಸಕರ ನೇಮಕಾತಿಗೆ ಸರ್ಕಾರ ಒಪ್ಪಿರುವುದನ್ನು ಎಐಡಿಎಸ್ ಒ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ ಸ್ವಾಗತಿಸಿದ್ದಾರೆ.ರಾಜ್ಯದಲ್ಲಿ ಪದವಿ ಕಾಲೇಜುಗಳು ಆರಂಭವಾಗಿ 2 ತಿಂಗಳಾದರೂ, ಅತಿಥಿ ಉಪನ್ಯಾಸಕರಿಲ್ಲದೆ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ತರಗತಿಗಳನ್ನೇ ನಡೆಸದೆ ರಾಜ್ಯದ ಹಲವು ವಿಶ್ವವಿದ್ಯಾಲಯಗಳು ಪರೀಕ್ಷೆಗಳನ್ನು ಕೂಡ ಘೋಷಿಸಿವೆ. ಇನ್ನೊಂದೆಡೆ, ಖಾಸಗಿ ಕಾಲೇಜುಗಳಲ್ಲಿ ಸರಾಗವಾಗಿ ಪಾಠಗಳು ನಡೆದು ಅಲ್ಲಿನ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಾಗುತ್ತಿದ್ದಾರೆ. ರಾಜ್ಯದ ಬಡ ವಿದ್ಯಾರ್ಥಿಗಳಿಗಾದ ಈ ಘೋರ ಅನ್ಯಾಯವನ್ನು ಖಂಡಿಸಿ ಎಐಡಿಎಸ್ಓ ನೇತೃತ್ವದಲ್ಲಿ…

Read More

ಆರ್ಥಿಕ- ಸಾಮಾಜಿಕ ಪ್ರಗತಿಗೆ ಉತ್ತೇಜನ ನೀಡಿ- ಮಲ್ಲಿಕಾರ್ಜುನ ಲೋಣಿ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 30:ಗ್ರಾಹಕರೇ ನಮ್ಮ ಸಂಸ್ಥೆಯ ಜೀವಾಳವಾಗಿದ್ದು, 2024-25ನೇ ಸಾಲಿನಲ್ಲಿ 25.59 ಲಕ್ಷ ಲಾಭ ಮಾಡಿ, ಶೇ. 15 ರಂತೆ ಲಾಭಾಂಶ ಸದಸ್ಯರುಗಳ ಶೇರ ಮೇಲೆ ಹಂಚಿಕೆ ಮಾಡಲಾಗುತ್ತದೆ ಎಂದು ದಿ ಕರ್ನಾಟಕ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿ,ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹೇಳಿದರು.ರವಿವಾರದಂದು ನಗರದ ವನಶ್ರೀ ಭವನದಲ್ಲಿ ದಿ. ಕರ್ನಾಟಕ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ನ 25ನೇ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ಬ್ಯಾಂಕು ಸದಸ್ಯರಿಗೆ ಆರ್ಥಿಕ ಸೌಲಭ್ಯಗಳನ್ನು…

Read More

ಪ್ರತಿಯೊಬ್ಬರು ಕಾನೂನು ಅರಿವು ಹೊಂದಿ ಕಟ್ಟಕಡೆ ವ್ಯಕ್ತಿಗೆ ಸ್ಪಂದಿಸುವ ಕಾರ್ಯವಾಗಬೇಕು-ನ್ಯಾಯಾಧೀಶ ಹರೀಶ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ.29 : ಕಾನೂನಿನ ಕುರಿತು ಪ್ರತಿಯೊಬ್ಬರಿಗೂ ಅರಿವು ಮೂಡಿಸಲು ಗ್ರಾಮ ಮಟ್ಟಗಳಲ್ಲಿ ಶಿಬಿರಗಳನ್ನು ಏರ್ಪಡಿಸಿ ಜಾಗೃತಿ ಮೂಡಿಸಬೇಕು. ಉಚಿತ ಕಾನೂನು ಸೇವೆಗಳ ಕಾನೂನು ಪ್ರತಿಯೊಬ್ಬ ಕಟ್ಟ ಕಡೆಯ ವ್ಯಕ್ತಿಗಳು ಅನುಭವಿಸುತ್ತಿರುವ ತೊಂದರೆಗಳಿಗೆ ಸ್ಪಂದಿಸುವ ಕೆಲಸಗಳಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹರೀಶ ಎ. ಅವರು ಹೇಳಿದರು.ಸೋಮವಾರ ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ…

Read More

ಬಿ.ಎಲ್.ಡಿ.ಇ ಎವಿಎಸ್ ಆಯುರ್ವೇದ ಮಹಾವಿದ್ಯಾಲಯದಲ್ಲಿ ರೇಬಿಸ್ ದಿನಾಚರಣೆ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 29: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ , ಆಸ್ಪತ್ರೆ ಹಾಗೂ ಸಂಶೋಧನೆ ಕೇಂದ್ರದ ವತಿಯಿಂದ ಸೋಮವಾರ ವಿಶ್ವ ರೇಬೀಸ್ ದಿನ ಆಚರಿಸಲಾಯಿತು.ಈ ದಿನಾಚರಣೆ ಅಂಗವಾಗಿ ಮಹಾವಿದ್ಯಾಲಯದ ಅಗದತಂತ್ರ ವಿಭಾಗದಿಂದ ಏರ್ಪಡಿಸಲಾಗಿದ್ದು ಜನಸಾಮಾನ್ಯರಲ್ಲಿ ರೇಬಿಸ್ ವೈರಾಣು ಹರಡುವ ವಿಧಾನ, ರೋಗ ಪೀಡಿತ ಸಾಕಿದ ನಾಯಿಗಳಿಂದ ಹಾಗೂ ಬೀದಿ ನಾಯಿಗಳಿಂದ ಕೆಲವು ಬಾರಿ ಎದುರಾಗುವ ಪ್ರಾಣಾಪಾಯದ ಕುರಿತು ಜನಜಾಗೃತಿ ಅಭಿಯಾನ ನಡೆಸಲಾಯಿತು. ಈ ಅಭಿಯಾನದಲ್ಲಿ ಮಹಾವಿದ್ಯಾಲಯದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು…

Read More

ವಿಜಯಪುರದಲ್ಲಿ ಪ್ರಪ್ರಥಮ ಬಾರಿಗೆ ರಾವಣ ದಹನ ಕಾರ್ಯಕ್ರಮ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 29: ಇಸ್ಕಾನ್ ವಿಜಯಪುರ ತಂಡದಿಂದ ಅಕ್ಟೊಬರ್ 1 ರಂದು ನಗರದ ಕಿತ್ತೂರು ರಾಣಿ ಚೆನ್ನಮ್ಮ ಸಭಾಭವನದಲ್ಲಿ ಸಾಯಂಕಾಲ 5:30ಕ್ಕೆ ದಸರಾ ಉತ್ಸವ ಹಮ್ಮಿಕೊಳ್ಳಲಾಗಿದೆ.ಈ ಕಾರ್ಯಕ್ರಮವನ್ನು ಇಸ್ಕಾನ್ ಹುಬ್ಬಳ್ಳಿ ಧಾರವಾಡ ಇವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿದೆ.ಶ್ರೀ ರಾಮ ದೇವರ ಅಭಿಷೇಕ, ಭಕ್ತರಿಂದ ಹರಿನಾಮ ಸಂಕೀರ್ತನೆ, ಪಲ್ಲಕಿ ಉತ್ಸವ, ಭರತನಾಟ್ಯ, ಮಕ್ಕಳಿಂದ ವಿವಿಧ ವೇಷಭೂಷಣ ಸ್ಪರ್ಧೆ ನಂತರದಲ್ಲಿ ಪ್ರಪ್ರಥಮವಾಗಿ ವಿಜಯಪುರದಲ್ಲಿ 35 ಅಡಿ ರಾವಣ ದಹನ ಕಾರ್ಯಕ್ರಮ ನಡೆಯಲಿದೆ.ಹೆಚ್ಚಿನ ಮಾಹಿತಿಗಾಗಿ ಮೊ.9036329108 / 9743231256 ಸಂಪರ್ಕಿಸಬಹುದು…

Read More

ಅತಿವೃಷ್ಟಿ ಹಾಗೂ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಹೆಚ್ಚಳಕ್ಕೆ ಸಿಎಂ ಜೊತೆಗೆ ಚರ್ಚೆ: ಸಚಿವ ಎಂ. ಬಿ. ಪಾಟೀಲ

ಸಪ್ತಸಾಗರ ವಾರ್ತೆ ವಿಜಯಪುರ, ಸೆ.29 : ಅತಿವೃಷ್ಟಿ ಹಾಗೂ ಪ್ರವಾಹ ಸಂತ್ರಸ್ತರಿಗೆ ಪ್ರಸ್ತುತ ೫ ಸಾವಿರ ರೂ. ತುರ್ತು ಪರಿಹಾರದ ಜೊತೆಗೆ ಇನ್ನೂ ಹೆಚ್ಚುವರಿಯಾಗಿ ಪರಿಹಾರ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಭರವಸೆ ನೀಡಿದರು.ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಜಿಲ್ಲೆಯಲ್ಲಿ ಎದುರಾಗಿರುವ ಪ್ರವಾಹ ಪರಿಸ್ಥಿತಿ ಹಾಗೂ ಪರಿಹಾರ ಕ್ರಮಗಳ ಕುರಿತು ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಿವರಣೆ ನೀಡಿದ ಅವರು, ಪ್ರವಾಹ ಪರಿಸ್ಥಿತಿ ವೇಳೆ ತುರ್ತು ಪರಿಹಾರ ರೂಪವಾಗಿ…

Read More