ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 2:
ಸೌಹಾರ್ದ ಸಹಕಾರಿಗಳ ಒಕ್ಕೂಟದ ಆಡಳಿತ ಮಂಡಳಿಗೆ ಪರಶುರಾಮ ಚಿಂಚಲಿ ಹಾಗೂ ದೀಪಕ ಶಿಂತ್ರೆ ನಾಮ ನಿರ್ದೇಶಕ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ.
ವಿಜಯಪುರ ಸೌಹಾರ್ದ ಸಹಕಾರಿಗಳ ಒಕ್ಕೂಟದ ಆಡಳಿತ ಮಂಡಳಿಯ ಸದಸ್ಯರ ಸಭೆ ಅಧ್ಯಕ್ಷ ಸಂಜಯ ಪಾಟೀಲ ಕನಮಡಿ ಅವರ ಅಧ್ಯಕ್ಷತೆಯಲ್ಲಿ ಚಾಲುಕ್ಯ ನಗರದ ಕಚೇರಿಯಲ್ಲಿ ಜರುಗಿತು.
ಈ ಸಭೆಯಲ್ಲಿ ಆಡಳಿತ ಮಂಡಳಿಗೆ ಸಹಕಾರಿ ಕ್ಷೇತ್ರದಲ್ಲಿ ಅನುಭವಿಗಳನ್ನು, ಪರಿಣಿತರನ್ನು ಕೋಪ್ಟ್ ಮಾಡಿಕೊಳ್ಳಲು ತೀರ್ಮಾನಿಸಲಾಯಿತು.
ಸಹಕಾರ ಇಲಾಖೆಯ ನಿವೃತ್ತ ಅಧಿಕಾರಿ ಪರಶುರಾಮ ಚಿಂಚಲಿ ಅವರು ನಿವೃತ್ತಿ ನಂತರ ವಿವಿಧ ಸಹಕಾರಿ ಸಂಘಗಳಲ್ಲಿ ಸೇವೆಯನ್ನು ಸಲಿಸುತಿದ್ದಾರೆ ಹಾಗೂ ದೀಪಕ ಶಿಂತ್ರೆ ಅವರು ಸುಮಾರು 25 ವರ್ಷಗಳ ಕಾಲ ಸಹಕಾರ ಕ್ಷೇತ್ರದ ಅನುಭವಿಗಳನ್ನು ಒಕ್ಕೂಟದ ಆಡಳಿತ ಮಂಡಳಿಗೆ ನಾಮ ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು.
ಈ ಸಭೆಯಲ್ಲಿ ಉಪಾಧ್ಯಕ್ಷ ಚಂದ್ರಶೇಖರ ಕವಟಗಿ, ಆಡಳಿತ ಮಂಡಳಿಯ ಸದಸ್ಯ ಸುರೇಶ ಬಿರಾದಾರ, ಸಿದ್ದು ಮಲ್ಲಿಕಾರ್ಜುನಮಠ, ಅರುಣ ವಾರದ, ಅರುಣ ಮಠ, ಬಾಲಚಂದ್ರ ಮುಂಜಾಣೆ, ಯಮನಪ್ಪ ಸಾತಿಹಾಳ, ಕಾಂತುಗೌಡ ಪಾಟೀಲ, (ಚಂದ್ರಕಾಂತ ) ರಾಜು ಹಂಚಾಟೆ, ಮಲಕಪ್ಪ ರೊಟ್ಟಿ, ಆರ್.ಡಿ. ಕುಲಕರ್ಣಿ, ವಿವೇಕಾನಂದ ಶಿರೋಳಕರ , ಸತೀಶ ಶಿಂತ್ರೆ, ಮೌನೇಶ ಪತ್ತಾರ ಹಾಗೂ ಇತರರು ಉಪಸ್ಥಿತರಿದ್ದರು.
ಸೌಹಾರ್ದ ಸಹಕಾರಿಗಳ ಒಕ್ಕೂಟದ ಆಡಳಿತ ಮಂಡಳಿಗೆ ಪರಶುರಾಮ ಚಿಂಚಲಿ ಹಾಗೂ ದೀಪಕ ಶಿಂತ್ರೆ ನಾಮ ನಿರ್ದೇಶಕ ಸದಸ್ಯರಾಗಿ ಆಯ್ಕೆ


