ಸುಪ್ರಿಯಾಗೆ ಪಿಎಚ್ ಡಿ ಪ್ರದಾನ

ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 28:
ಸುಪ್ರಿಯಾ ಭೋಸಲೆ ಅವರಿಗೆ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ(ಡಾಕ್ಟರೇಟ್) ಲಭಿಸಿದೆ.
ಡೀಮ್ಡ್ ವಿವಿಯ ಶ್ರೀ ಬಿ. ಎಂ. ಪಾಟೀಲ ಮೆಡಿಕಲ್ ಕಾಲೇಜಿನ ಬಯೊಟೆಕ್ನಾಲಜಿ ವಿಭಾಗದಲ್ಲಿ ಅಸಿಸ್ಟಂಟ್ ಪ್ರೊಫೆಸರ್ ಆಗಿರುವ ಸುಪ್ರಿಯಾ ಭೋಸಲೆ ಅವರು ಅಲೈಡ್ ಹೆಲ್ತ್ ಸಾಯಿನ್ಸ್ ನ ಬಯೊಟೆಕ್ನಾಲಜಿ ವಿಭಾಗದಲ್ಲಿ ಡಬ್ಲ್ಯೂಎನಟಿ‌ ಬಿ- ಕೆಟೆನಿನ್ ಸಿಗ್ನಲಿಂಗ್ ಇನಗ ಹಿಪೊಕ್ಸಿಯಾ- ಇಂಡ್ಯೂಸ್ಡ್ ಪಲ್ಮನರಿ ಆರ್ಟಿಲರಿ ಸ್ಮೂಥ್ ಮಸಲ್ ಸೆಲ್ ಪ್ರಾಲಿಫಿರೇಶನ್- ರೋಲ್ ಆಫ್ ಎ ಬಯೊಆ್ಯಕ್ಟಿವ್ ಮಾಲಿಕ್ಯೂಲ್ ಆಫ್ ಮ್ಯುಕ್ಯೂನಾ ಪ್ರೂರಿಯನ್ಸ್ ವಿಷಯದಲ್ಲಿ‌ ಮಂಡಿಸಿದ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ದೊರೆತಿದೆ.
ಬಿ.ಎಲ್.ಡಿ.ಇ ಮೆಡಿಕಲ್ ಕಾಲೇಜಿನ ಶರೀರಕ್ರಿಯಾ ಶಾಸ್ತ್ರ ವಿಭಾಗದ ಡಿಸ್ಟಿಂಗ್ವಿಶ್ ಚೇರ್ ಪ್ರೊ. ಕುಸಾಲ ಕೆ.‌ ದಾಸ ಅವರ ಮಾರ್ಗದರ್ಶನದಲ್ಲಿ ಮತ್ತು ಡಾ. ಶ್ರೀಲಕ್ಷ್ಮಿ ಬಗಲಿ ಅವರ ಸಹಮಾರ್ಗದರ್ಶನದಲ್ಲಿ ಅವರು ಮಹಾಪ್ರಬಂಧ ರಚಿಸಿದ್ದಾರೆ.
ವಿಜಯಪುರ ನಗರದಲ್ಲಿ ಡಿಸೆಂಬರ್ 19 ರಂದು ನಡೆದ ಘಟಿಕೋತ್ಸವದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಕುಲಾಧಿಪತಿ‌ ಬಿ. ಎಂ. ಪಾಟೀಲ ಅವರು ಪಿ.ಎಚ್.ಡಿ ಪ್ರದಾನ‌ ಮಾಡಿದರು. ‌
ಈ ಸಂದರ್ಭದಲ್ಲಿ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ, ರಾಷ್ಟ್ರೀಯ ವೈದ್ಯಕೀಯ ಮೌಲ್ಯಮಾಪನ ಮತ್ತು ಶ್ರೇಯಾಂಕ ಮಂಡಳಿಯ ಅಧ್ಯಕ್ಷ ಡಾ. ಎಂ. ಕೆ. ರಮೇಶ, ಸಮಕುಲಾಧಿಪತಿ‌ ಡಾ.‌ವೈ. ಎಂ. ಜಯರಾಜ, ಪ್ರಭಾರ ಕುಲಪತಿ‌ ಡಾ. ಅರುಣ ಚಂ. ಇನಾಮದಾರ, ರಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.

Share this