ಕಾವ್ಯ ಎಲ್ಲರಿಗೂ ಸಾಧ್ಯವಿಲ್ಲ ಅದು ಅಂತರಂಗದ ಮಾತು – ಪ್ರೊ.ಬಿ.ಆರ್.ಪೊಲೀಸಪಾಟೀಲ

ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 22:
ಕಾವ್ಯವೆಂಬುದು ಅಂತರಂಗದ ಮಾತು ಅದು ಹೃದಯವಂತರಿಗೆ ಒಲಿಯುತ್ತದೆ.ಕವಿ ಧ್ಯಾನಾಸಕ್ತನಾದಾಗ ಮಾತ್ರ ಅವನ ಎದೆಯ ಕದ ತೆರೆದು ಪದ ಹೊರಗೆ ಬರುವದೆಂದು ಪ್ರೊ.ಬಿ.ಆರ್.ಪೊಲೀಸಪಾಟೀಲ ಅಭಿಪ್ರಾಯಪಟ್ಟರು.
ಸಿದ್ಧೇಶ್ವರ ಶ್ರೀಗಳ ಮಾತು ಮತ್ತು ಬದುಕು ಒಂದೆಯಾಗಿದ್ದವು. ಅವರನ್ನು ಕುರಿತು ಬರೆಯುವುದೆಂದರೆ ಭಾಗ್ಯದ ಕಾರ್ಯವೆಂದು ಹೇಳಿದರು.
ಬರುವ ಜನವರಿ 1 ಮತ್ತು 2 ರಂದು ಜರುಗಲಿರುವ ಸಿದ್ಧೇಶ್ವರ ಸ್ವಾಮಿಗಳ ಗುರುನಮನ ಕಾರ್ಯಕ್ರಮದಂಗವಾಗಿ ಜ್ಞಾನಯೋಗಾಶ್ರಮದಲ್ಲಿ ರವಿವಾರ ನಡೆದ “ಕಾವ್ಯನಮನ” ಕಾರ್ಯಕ್ರಮ ದಲ್ಲಿ ಭಾಗಿಯಾಗಿ ಮಾತನಾಡಿದದರು.
ಮಹಾನಗರ ಪಾಲಿಕೆಯ ಮಹಾಪೌರ ಎಂ.ಎಸ್. ಕರಡಿ ಅವರು ಸಸಿಗಳಿಗೆ ನೀರೆರೆದು ಕವಿಗೋಷ್ಠಿಯನ್ನು ಉದ್ಘಾಟಿಸಿದರು.
ಅಧ್ಯಕ್ಷ ಗುರುಗಳಾದ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಜಂಬುನಾಥ ಕಂಚ್ಯಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಉಷಾದೇವಿ ಹಿರೇಮಠ ಸ್ವಾಗತಿಸಿದರು. ಸಾಹಿತಿ ದೊಡ್ಡಣ್ಣ ಬಜಂತ್ರಿ ಪರಿಚಯ ಭಾಷಣ ಮಾಡಿದರು.
ಕವಿಗೋಷ್ಠಿಯಲ್ಲಿ ಶ್ರೀ ಶ್ರದ್ಧಾನಂದ ಸ್ವಾಮಿಗಳು, ಎಸ್.ಡಿ.ಕೃಷ್ಣಮೂರ್ತಿ, ಡಾ.ವಿ.ಡಿ.ಐಹೊಳ್ಳಿ, ರಮೇಶ ಕೋಟ್ಯಾಳ, ಶಿವುಕುಮಾರ ಶಿವಶಿಂಪಿ, ಶ್ರೀಶೈಲ ಆಲಕುಂಟೆ, ಎಂ.ಎಚ್.ಹಾಲ್ಯಾಳ, ಸಿದ್ದಲಿಂಗಪ್ಪ ಹದಿಮೂರ, ರೇಣುಕಾ ಕತ್ನಳ್ಳಿ, ಡಾ.ಎಂ.ಎಂ.ಬೆಳಗಲ್ಲ, ಮಲ್ಲಮ್ಮ ಬಿರಾದಾರ, ಅಕ್ಕಮಹಾದೇವಿ ಸಂಗೋಗಿ, ಈರಣ್ಣ ಹುಣಸಗಿ, ಸಿದ್ದನಗೌಡ ಕಾಶಿನಕುಂಟಿ, ಸಿದ್ಧರಾಮ ಕೆರಕಲಮನಿ, ಕೆ.ಆರ್. ಅರಕೇರಿಮಠ, ಜ್ಞಾನು ಹಾವಿನಾಳ, ಅಕ್ಕಮ್ಮ ನೀಲಾಂಜನಮಠ, ಗುರುಲಿಂಗಪ್ಪ ಬಿರಾದಾರ ಮುಂತಾದ ಕವಿಗಳು ಸಿದ್ಧೇಶ್ವರಶ್ರೀಗಳನ್ನು ಕುರಿತಾದ ಕವನಗಳನ್ನು ವಾಚಿಸಿದರು. ವಿ.ಸಿ.ನಾಗಠಾಣ, ಬಿ.ಎಂ.ಪಾಟೀಲ, ಬಿ.ಸಿ.ಸಾರವಾಡ ಉಪಸ್ಥಿತರಿದ್ದರು.

Share this