ವಿದ್ಯುತ್ ವ್ಯತ್ಯಯ: ತುರ್ತು ಸೇವಾ ಕೇಂದ್ರ ಸಂಪರ್ಕಕ್ಕೆ ಸೂಚನೆ

ಸಪ್ತಸಾಗರವಾರ್ತೆ,ವಿಜಯಪುರ,ಮಾ.20:
ಮಳೆ ಗಾಳಿಯಿಂದಾಗಿ ತಕ್ಷಣಕ್ಕೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾದರೆ ತುರ್ತು ಸೇವಾ ಕೇಂದ್ರ ಹಾಗೂ ಅಧಿಕಾರಿಗಳ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಹೆಸ್ಕಾಂನ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ. ‌
ಹೆಸ್ಕಾಂ ವಿಜಯಪುರ ನಗರ ಉಪ ವಿಭಾಗ-1ಕ್ಕೆ ಸಂಬಂಧಿಸಿದಂತೆ,ನಗರದ ಗಾಂಧಿ ವೃತ್ತದಿಂದ ಉತ್ತರ ಈಶಾನ್ಯ ಮತ್ತು ವಾಯುವ್ಯ ದಿಕ್ಕಿನ ಪ್ರದೇಶಕ್ಕೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಡಿ.ಎಂ. ಮೂಲಿಮನಿ ಮೊಬೈಲ್ :9448370250 ಹಾಗೂ ಸೇವಾ ಕೇಂದ್ರದ ದೂರವಾಣಿ ಸಂಖ್ಯೆ:08352-250036, ಮತ್ತು ಹೆಸ್ಕಾಂ ವಿಜಯಪುರ ನಗರ ಉಪ ವಿಭಾಗ-2ಕ್ಕೆ ಸಂಬಂಧಿದಂತೆ ನಗರದ ಗಾಂಧಿ ವೃತ್ತದಿಂದ ದಕ್ಷಿಣ, ನೈಋತ್ಯ ಮತ್ತು ಅಗ್ನಿಯ ದಿಕ್ಕಿನ ಪ್ರದೇಶದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಅಕ್ಷರಬಾಶಾ ಕುರಿ ಮೊ:94483275711, ಸೇವಾ ಕೇಂದ್ರದ ಮೊ : 9480882690 ಹಾಗೂ ದೂರವಾಣಿ :08352-276940 ಸಂಪರ್ಕಿಸಬಹುದಾಗಿದೆ.
ಜೊತೆಗೆ ಟೊಲ್ ಫ್ರೀ ಅಥವಾ ಹೆಸ್ಕಾಂ, ಸಹಾಯವಾಣಿ 1912 ಸಂಪರ್ಕಿಸಬಹುದು.‌ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾದಲ್ಲಿ ತುರ್ತು ಸಂದರ್ಭಕ್ಕೆ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this