ಸಪ್ತಸಾಗರ ವಾರ್ತೆ, ವಿಜಯಪುರ, ಜೂ. 14:
ನ್ಯಾ. ಬ್ರಿಜೇಶ್‌ಕುಮಾರ ನೇತೃತ್ವದ 2ನೇ ನ್ಯಾಯಾಧೀಕರಣದ
“ಐ” ತೀರ್ಪಿನಂತೆ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರದ
ಮೇಲೆ ಒತ್ತಡ ಹೇರಲು ಮುಂದಿನ ಹೋರಾಟದ ರೂಪರೇಷ
ತಯಾರಿಸುವದು ಮತ್ತು ಹೋರಾಟ ಸಮೀತಿ ರಚಿಸುವುದರ ಕುರಿತು
ಪೂರ್ವಭಾವಿ ಸಭೆಯನ್ನು ವಿಜಯಪುರ ನಗರದ ಅಂಬೇಡ್ಕರ
ವೃತ್ತದ ಬಳಿ ಇರುವ ಡಾ. ಬಿ.ಆರ್.ಅಂಬೇಡ್ಕರ ಸಭಾ ಭವನದಲ್ಲಿ
ಜೂ. 16ರಂದು ಬೆಳಗ್ಗೆ 10-30 ಗಂಟೆಗೆ ಪೂರ್ವಭಾವಿ ಸಭೆ ಕರೆಯಲಾಗಿದೆ.
ಈ ಸಭೆಗೆ ನೀರಾವರಿ ತಜ್ಞ ಡಾ. ಕೃಷ್ಣ ಕೋಲಾರ ಕುಲಕರ್ಣಿ, ಧಾರವಾಡ ಕೃಷಿ
ವಿಶ್ವವಿದ್ಯಾಲಯದ ನಿವೃತ್ತ ಅಧ್ಯಾಪಕ ಡಾ. ರಾಜೇಂದ್ರ
ಪೋದ್ದಾರ, ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನಿವೃತ್ತ ಜಿಲ್ಲಾ
ನ್ಯಾಯಾಧೀಶ ಬಿ.ವ್ಹಿ.ಬಿರಾದಾರ, ನೀರಾವರಿ ಹೋರಾಟಗಾರ ಪಂಚಪ್ಪ
ಕಲಬುರ್ಗಿ, ಚಾಣಕ್ಯ ಕರಿಯರ್ ಅಕಾಡೆಮಿಯ ಸಂಸ್ಥಾಪಕ
ಅಧ್ಯಕ್ಷ ನಿಂಗನಗೌಡ ಬಿರಾದಾರ ಸೇರಿದಂತೆ ಇತರ ತಜ್ಞರು ಪಾಲ್ಗೊಳ್ಳಲಿದ್ದಾರೆ. ಆದ್ದರಿಂದ ವಿಜಯಪುರ ಹಾಗೂ
ಬಾಗಲಕೋಟೆ ಉಭಯ ಜಿಲ್ಲೆಯ ಎಲ್ಲ ರೈತ ಪರ ಸಂಘಟನೆಗಳ
ಮುಖಂಡರು, ದಲಿತಪರ ಸಂಘಟನೆಗಳು, ಕನ್ನಡಪರ
ಸಂಘಟನೆಗಳು ಹಾಗೂ ಎಲ್ಲ ಪ್ರಗತಿಪರ
ಸಂಘಟನೆಗಳ ಮುಖಂಡರು ಈ ಸಭೆಗೆ ಆಗಮಿಸಬೇಕು ಎಂದು ರೈತ
ಮುಖಂಡ ಅರವಿಂದ ಕುಲಕರ್ಣಿ ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನ್ಯಾಯಾಧೀಕರಣದ “ಐ” ತೀರ್ಪಿನ ಅಧಿಸೂಚನೆಗೆ ಹೋರಾಟ ಕುರಿತು ಪೂರ್ವಭಾವಿ ಸಭೆ 16ರಂದು


