ಸಪ್ತಸಾಗರ ವಾರ್ತೆ, ಬೆಂಗಳೂರು,ನ. 10:
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ದಿನಾಂಕ 8-9-2025ರಂದು ಕರ್ನಾಟಕ ಸರ್ಕಾರ ನೀಡುವ 2025-26 ನೆ ಸಾಲಿನ ಪ್ರತಿಷ್ಠಿತ “ಕನಕಶ್ರೀ” ಪ್ರಶಸ್ತಿ, 5ಲಕ್ಷ ಬಹುಮಾನವನ್ನು ವಿಜಯಪುರದ ಸಂಶೋಧಕರಾದ”ಹಾಲುಮತ ಭಾಸ್ಕರ “ಶ್ರೀ ಚಂದ್ರಕಾಂತ ಬಿಜ್ಜರಗಿ ಗುರೂಜಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿ ಅಭಿನಂದಿಸಿದರು.
ಭಕ್ತ ಕನಕದಾಸರ ಜಯಂತಿ ಹಾಗೂ ಪ್ರಶಸ್ತಿ ಸಮಾರಂಭವು ಶ್ರೀ ಕಾಗಿನೆಲೆ ಕನಕ ಗುರುಪೀಠದ ಶ್ರೀ ಸಿದ್ಧರಾಮಾನಂದ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶೀವರಾಜ ತಂಗಡಗಿ, ಇಲಾಖೆಯ ಕಾರ್ಯದರ್ಶಿ ಶ್ರೀ ಕುಮಾರ ಐಎಎಸ್, ನಿರ್ದೇಶಕಿ ಎಂ ಗಾಯಿತ್ರಿ ಐಎಎಸ್.ಹಾಗೂ ಕಾ.ತಾ ಚಿಕ್ಕಣ ಮುಂತಾದವರು ಇದ್ದರು.
ಬಿಜ್ಜರಗಿ ಗುರೂಜಿಗೆ ಕನಕಶ್ರೀ ಪ್ರಶಸ್ತಿ ಪ್ರದಾನ


