ಪ್ರೊ. ರೇವಣಸಿದ್ದ ಮೇತ್ರಿಯವರಿಗೆ ಪಿ.ಎಚ್. ಡಿ

ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 29:
ಬಿಎಲ್‌ಡಿಇ ಸಂಸ್ಥೆಯ ವಚನ ಪಿತಾಮಹ ಡಾ.ಪಿ.ಜಿ.ಹಳಕಟ್ಟಿ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಗಣಿತ ವಿಭಾಗದ ಅಧ್ಯಾಪಕ ಪ್ರೊ. ರೇವಣಸಿದ್ದ ಶಂಕ್ರೆಪ್ಪ ಮೇತ್ರಿ ಅವರು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ. ” ಎಫೆಕ್ಟ್ ಆಪ್ ಪೊರಾಸಿಟಿ ಆನ್ ಪೆರಿಸ್ಟಾಲ್ಟಿಕ್ ಪ್ಲೊ ಆಪ್ ನಾನ್ – ನ್ಯೂಟೋನಿಯನ್ ಪ್ಲುಡ್ ಮಾಡೆಲ್.’” ಎಂಬ ಶೀರ್ಷಿಕೆಯ ಅವರ ಪ್ರಬಂಧವನ್ನು ಗಣಿತ ವಿಭಾಗದ ಪ್ರಾಧ್ಯಾಪಕ ಡಾ. ಗುರುನಾಥ ಸಂಕದ ಅವರ ಮಾರ್ಗದರ್ಶನದಲ್ಲಿ ಪೂರ್ಣಗೊಳಿಸಲಾಯಿತು.
ಪ್ರಾಂಶುಪಾಲರಾದ ಡಾ. ಮಂಜುನಾಥ ಪಿ, ಉಪ ಪ್ರಾಂಶುಪಾಲ ಡಾ. ಲೀನಾ ರಾಘಾ, ಡಾ. ಪ್ರದೀಪ್ ವಿ.ಮಾಳಜಿ, ವಿಭಾಗದ ಮುಖ್ಯಸ್ಥರು ಮತ್ತು ಅಧ್ಯಾಪಕರು ಪ್ರೊ. ರೇವಣಸಿದ್ದ ಮೇತ್ರಿ ಅವರ ಪಿಎಚ್‌.ಡಿ ಮತ್ತು ಅವರ ಶೈಕ್ಷಣಿಕ ಸಾಧನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕಾಗಿ ಅಭಿನಂದಿಸಿದ್ದಾರೆ.

Share this