ಸಪ್ತಸಾಗರ ವಾರ್ತೆ ವಿಜಯಪುರ, ಡಿ. 8:
ಪ್ರಸಕ್ತ ಸಾಲಿನ “ಶಂಕರ ಶ್ರೀ” ದತ್ತಿ ನಿಧಿ ಪುರಸ್ಕಾರಕ್ಕೆ ಪ್ರೊ. ಸಿರಗಾನಹಳ್ಳಿ ಶಾಂತನಾಯ್ಕ್ ಅವರು ಆಯ್ಕೆಯಾಗಿದ್ದಾರೆ.
ಬಂಜಾರಾ ಸಮುದಾಯದ ಪ್ರೊಫೆಸರ್ ಸಿರಗಾನಹಳ್ಳಿ ಶಾಂತನಾಯ್ಕ್ ಸಾಮಾಜಿಕ ಜೀವನದಿಂದ ದೂರ ಉಳಿದ ತಾಂಡಾ ಬದುಕನ್ನು ಕಂಡುಂಡವರು. ತಾಂಡಾದಿಂದ ಅಮೇರಿಕಾದ Wisconsin ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡಿದ ಹೆಗ್ಗಳಿಕೆ ಇವರದು. ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ ವಿದ್ಯಾರ್ಥಿಗಳಿಗೆ ನಾಟಕ, ಜಾನಪದ ಗೀತೆ, ಭಾವಗೀತೆಗಳನ್ನು ಹೇಳಿ ಕೊಡುವುದರೊಂದಿಗೆ ವಿದ್ಯಾರ್ಥಿಗಳನ್ನು ರಾಷ್ಟ್ರಮಟ್ಟದ ಯುವಜನೋತ್ಸವಕ್ಕೆ ಕರೆದೊಯ್ದರು. ಕಲ್ಯಾಣ ಕರ್ನಾಟಕದ ಗಡಿ ಭಾಗದ ಕೊನೆಯ ಹಳ್ಳಿಯವರಾದ ಇವರು ಸುಮಾರು 30 ಜನ ವಿದ್ಯಾರ್ಥಿಗಳಿಗೆ ಪಿ ಎಚ್ ಡಿ ಮಾರ್ಗದರ್ಶಕರಾಗಿದ್ದಾರೆ. ಹಾಂಗ್ ಕಾಂಗ್ ಫಿಲಿಫೈನ್ಸ್ ಮುಂತಾದ ರಾಷ್ಟ್ರಗಳಿಗೆ ಭೇಟಿ ನೀಡಿ ತಮ್ಮ ಸಂಶೋಧನಾ ಲೇಖನಗಳನ್ನು ಪ್ರಸ್ತುತಪಡಿಸಿದ ಇವರು ಬಂಜಾರ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ . ಬಂಜಾರ ಸಂಸ್ಕೃತಿ ಭಾಷೆ ಬದುಕನ್ನು ಆಧರಿಸಿ ಅಮೂಲ್ಯವಾದ ಕಾದಂಬರಿ ಕಥೆ ನಾಟಕ ಪ್ರಬಂಧ ಕಾವ್ಯಗಳನ್ನು ಬರೆಯುತ್ತಾ, ಸುಮಾರು 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಇವರು ಇಂಗ್ಲಿಷ್ ಭಾಷೆಯಲ್ಲಿ ಕೂಡ ಕೃತಿ ರಚಿಸಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರಾದ ಈ ಮಹನೀಯರ ಮೇರು ಸಾಧನೆ ಗುರುತಿಸಿ, “ಶಂಕರ ಶ್ರೀ” ದತ್ತಿನಿಧಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಶಂಕರ ಶ್ರೀ ದತ್ತಿ ನಿಧಿ ಪ್ರಶಸ್ತಿಗೆ ಪ್ರೊ. ಶಾಂತ ನಾಯಕ್ ಆಯ್ಕೆ


