ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮ

ಸಪ್ತಸಾಗರ ವಾರ್ತೆ, ವಿಜಯಪುರ, ಜು. 28:
ವಿಜಯಪುರ ಉತ್ತರ ರೋಟರ ಸಂಸ್ಥೆ ಹಾಗೂ ಶ್ರೀ ರಕ್ಷಾ ಮುದ್ದು ನಾಯಿಗಳ ಚಿಕಿತ್ಸಾ ಕೇಂದ್ರ ಇವರ ಸಹಯೋಗದಲ್ಲಿ ನಾಯಿಗಳಿಗೆ ಮಾರಕವಾದ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮವನ್ನು ವಿಜಯಪುರದ ರಾಘವೇಂದ್ರ ಕಾಲೋನಿಯಲ್ಲಿರುವ ಶ್ರೀರಕ್ಷಾ ಮುದ್ದು ಪ್ರಾಣಿಗಳ ಚಿಕಿತ್ಸಾ ಹಾಗೂ ಸಲಹಾ ಕೇಂದ್ರದಲ್ಲಿ ಜು. 28 ರಂದು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬೆಳಿಗ್ಗೆ 9.30ರಿಂದ ಸಂಜೆ 5.30ರವರೆಗೆ ಮುದ್ದು ನಾಯಿಗಳಿಗೆ ಉಚಿತವಾಗಿ ಹುಚ್ಚು ನಾಯಿ ರೋಗ ನಿರೋಧಕ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಿತು.
ಸುಮಾರು 70ಕ್ಕೂ ಹೆಚ್ಚು ಸಾಕಿದ ಹಾಗೂ ಹಿಡಿದುಕೊಂಡು ಬಂದ ಬೀದಿ ನಾಯಿಗಳಿಗೆ ಲಸಿಕೆ ಹಾಕಿ ಮಾರಕ ರೋಗ ದಿಂದ ನಾಯಿಗಳನ್ನು ರಕ್ಷಿಸಿಕೊಳ್ಳುವ ಕುರಿತು ಹಿರಿಯ ಪಶುವೈದ್ಯ ಹಾಗೂ ರೋಟರಿಯ ಹಿಂದಿನ ಗವರ್ನರ್ ಆದ ಡಾ. ಪ್ರಾಣೇಶ ಜಹಗೀರದಾರ ಮಾಹಿತಿ ನೀಡಿದರು.
ಅಧ್ಯಕ್ಷ ರೋ. ಸಂತೋಷ ಔರಸಂಗ ಅವರು ನಾಯಿಗಳ ಕಡಿತದಿಂದ ತೊಂದರೆ ಆಗುತ್ತಿರುವ ಕಾರಣ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ , ಕಾರ್ಯದರ್ಶಿ ರೋ. ಅವಿನಾಶ ಬ್ಯಾಹೇತಿ ಮತ್ತು ಜಂಟಿ ಕಾರ್ಯದರ್ಶಿ ಸುರೇಶ ಜೋಗೂರ ಹಾಗೂ ನಾಯಿ ಮಾಲೀಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನಾಯಿ ಮಾಲೀಕರ ವಿನಂತಿ ಮೇರೆಗೆ ಇನ್ನೂ ಎರಡು ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು ಎಂದು ಡಾ. ಪ್ರಾಣೇಶ ಜಹಗೀರದಾರ ಅವರು ತಿಳಿಸಿದರು.

Share