ಭುಗಿಲು ಪುಸ್ತಕ ಲೋಕಾರ್ಪಣೆ

ಸಪ್ತಸಾಗರ ವಾರ್ತೆ, ವಿಜಯಪುರ, ಆ. 17: ವಿಜಯಪುರ ನಗರದಲ್ಲಿ ಮರುಮುದ್ರಿತ “ಭುಗಿಲು” ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಭಾನುವಾರ ನಡೆಯಿತು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಮತ್ತು ಮುಖ್ಯ ವಕ್ತಾರರಾಗಿ ಭುಗಿಲು ಪುಸ್ತಕದ ಸಂಪಾದಕೀಯ ಮಂಡಳಿಯ ಸದಸ್ಯರಾದ ದು.ಗು.ಲಕ್ಷ್ಮಣ ಅವರು ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಪ್ರಾಂತ ಪ್ರಚಾರ ಪ್ರಮುಖ ಕೃಷ್ಣಾ ಜೋಷಿ ಅವರು ಉಪಸ್ಥಿತರಿದ್ದರು.
ಇಂದಿರಾಗಾಂಧಿ ನೇತೃತ್ವದ ಸರ್ಕಾರ ಸಂವಿಧಾನದ ಆಶಯವನ್ನೆ ಧೂಳೀಪಟ ಮಾಡಿ ದೇಶಾದ್ಯಂತ ತುರ್ತುಪರಿಸ್ಥಿತಿಯನ್ನು ಜಾರಿಗೊಳಿಸಿದರೆಂದು ತಿಳಿಸಿದರು.
ಮುಖ್ಯ ಅತಿಥಿಗಳಾದ ಜಂಬುನಾಥ ಕಂಚ್ಯಾಣಿ ಅವರು ಅಂದಿನ ತುರ್ತುಪರಿಸ್ಥಿತಿಯ ಕರಾಳ ದಿನಗಳನ್ನು ಸಭಿಕರೊಂದಿಗೆ ಹಂಚಿಕೊಂಡರು.
ತುರ್ತುಪರಿಸ್ಥಿತಿ ಸಮಯದಲ್ಲಿ ಜೈಲು ಶಿಕ್ಷೆ ಅನುಭವಿಸಿದ ಹಿರಿಯ ಕಾರ್ಯಕರ್ತ ಶ್ರೀಕಾಂತ ಕುಲಕರ್ಣಿ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ನಗರ ಪ್ರಚಾರ ಟೋಳಿ ಸದಸ್ಯ ರಂಜೀತಸಿಂಗ್ ರಜಪೂತ ಅವರು ನಿರ್ವಹಿಸಿದರು. ಸ್ವಾಗತ ಮತ್ತು ಪರಿಚಯವನ್ನು ಜಿಲ್ಲಾ ಪ್ರಚಾರ ಪ್ರಮುಖ ಸಂಕೇತ ಬಗಲಿ ಅವರು ನಡೆಸಿಕೊಟ್ಟರು.
ಕುಮಾರಿ ಸುರೇಖಾ ಕುಲಕರ್ಣಿ ಅವರಿಂದ ಗಾಯನ ನಡೆಯಿತು.
ಅಖಿಲ ಭಾರತೀಯ ವೀರಶೈವ ಮಹಾಸಭಾದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಓಂಕಾರ ಅಥರ್ಗಾ ವಂದಿಸಿದರು.

Share