ಸಪ್ತಸಾಗರ ವಾರ್ತೆ, ವಿಜಯಪುರ, ನ. 13:
ಐತಿಹಾಸಿಕ ನಗರ ವಿಜಯಪುರದ ಪ್ರಗತಿ ಶಾಲೆಯ ಆವರಣದಲ್ಲಿ ನವೆಂಬರ್ 19ರಂದು ನಡೆಯುವ ಅಖಿಲ ಕರ್ನಾಟಕ 27ನೇ ಕನ್ನಡ ಪುಸ್ತಕ ಪರಿಷತ್ತಿನ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಬುಧವಾರ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಅಪರ ಜಿಲ್ಲಾಧಿಕಾರಿ ಸೋಮನಿಂಗ ಗೆಣ್ಣೂರು ಬಿಡುಗಡೆಗೊಳಿಸಿದರು.
ಸಮ್ಮೇಳನದಲ್ಲಿ ಅರ್ಥಪೂರ್ಣವಾದ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ, ಮಾನಸ ಅವರು ಹಾಗೂ ನಾಡಿನ ಸಾಹಿತ್ಯ ದಿಗ್ಗಜರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕನ್ನಡ ಪುಸ್ತಕ ಪರಿಷತ್ತಿನ ಅಧ್ಯಕ್ಷ ಫ. ಗು ಸಿದ್ದಾಪುರ, ಪ್ರಧಾನ ಕಾರ್ಯದರ್ಶಿ ಶಂಕರ ಬೈಚಬಾಳ, ಸಹ ಕಾರ್ಯದರ್ಶಿ, ಸಿದ್ದರಾಮ ಬಿರಾದಾರ ತಾಲೂಕ ಅಧ್ಯಕ್ಷ ಪ್ರೊ,ಅಡವಿಸ್ವಾಮಿ ಕೊಳಮಲಿ , ಗೌರವಾಧ್ಯಕ್ಷ ರಾವಸಾಬ ಬಿರಾದಾರ, ಪರಿಷತ್ತಿನ ಪದಾಧಿಕಾರಿಗಳಾದ ಬಸನಗೌಡ ಬಿರಾದಾರ, ಡಿ ಜೋಶಪ್, ಬಿ ಎನ್ ಕಾಳಿ, ಲಾಲಸಾಭ್ ಮೇಲಿನಮನಿ ಮುಂತಾದವರಿದ್ದರು.
ಕನ್ನಡ ಪುಸ್ತಕ ಪರಿಷತ್ತಿನ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ


